Published
2 months agoon
By
Akkare Newsಬೆಂಗಳೂರು : ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಬಲಿತ ಅಭ್ಯರ್ಥಿ ಎಚ್.ಎಸ್.ಮಂಜುನಾಥ್ 5,67,343 ಮತಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ಎಐಸಿಸಿ ಚುನಾವಣೆ ಸಮಿತಿ ನಿಯಮದ ಪ್ರಕಾರ ಅತಿ ಹೆಚ್ಚು ಮತ ಪಡೆದ ಮೂವರು ಅಭ್ಯರ್ಥಿಗಳನ್ನು ಹೊಸದಿಲ್ಲಿಗೆ ಕರೆಸಿಕೊಂಡು ಸಂದರ್ಶಿಸಿ ಅವರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಹಾಗೂ ಉಳಿದ
ಇಬ್ಬರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆ ಎಂದು ಎಐಸಿಸಿ ತಿಳಿಸಿದೆ.
ಇನ್ನು 33,292 ಮತ ಪಡೆದ ಮಂಜುನಾಥ ಮಣಿಚೆಟ್ಟಿ ಒಬಿಸಿ ಘಟಕದ ಉಪಾಧ್ಯಕ್ಷರಾಗಿ ಆಯ್ಕೆಯಾದರೆ, 20,191 ಮತ ಪಡೆದ ಬಾಲ ಪ್ರದೀಪ್ ಬಿ. ಅಲ್ಪಸಂಖ್ಯಾತರ ಘಟಕ ಹಾಗೂ 10,710 ಮತ ಪಡೆದ ನಿಖಿಲ್
ವಿ. ಶಂಕರ್ ಎಸ್ಟಿ ಘಟಕದ ಉಪಾಧ್ಯಕ್ಷರುಗಳಾಗಿ ಆಯ್ಕೆಯಾಗಿದ್ದಾರೆ.
ಎಐಸಿಸಿ ಚುನಾವಣೆ ಸಮಿತಿ ಯುವ ಕಾಂಗ್ರೆಸ್‌ನ ಎಲ್ಲ ಹಂತದ ಘಟಕಗಳಿಗೆ ನೋಂದಣಿ ಮಾಡಿಕೊಂಡಿತ್ತು. ರಾಜ್ಯ ಘಟಕ, ಜಿಲ್ಲಾ ಘಟಕ, ಬ್ಲಾಕ್ ಘಟಕಗಳಿಗೆ ವಿವಿಧ ಹುದ್ದೆಗಳಿಗೆ ಏಕ ಕಾಲಕ್ಕೆ ಮತದಾನ ನಡೆದಿತ್ತು.