Published
2 months agoon
By
Akkare Newsಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಕಂತುಗಳ ಬಗ್ಗೆ ಸರ್ಕಾರದ ಸ್ಪಷ್ಟನೆ, ಹಂತ ಹಂತವಾಗಿ ಹಣ ಬಿಡುಗಡೆ! ಈ ತಿಂಗಳ ಕೊನೆಯೊಳಗೆ ಬಾಕಿಯಿರುವ ಗೃಹಲಕ್ಷ್ಮಿ ಕಂತುಗಳ ಹಣ ಮಹಿಳೆಯರ ಖಾತೆಗೆ ಜಮಾ
ರಾಜ್ಯದ ಕೆಲವು ಜಿಲ್ಲೆಗಳಲ್ಲಿ 15ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಆಗಿಲ್ಲ ಹಂತ ಹಂತವಾಗಿ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡುವ ಪ್ರಕ್ರಿಯೆ ಪ್ರಗತಿಈ ತಿಂಗಳ ಕೊನೆಯೊಳಗೆ ಬಾಕಿಯಿರುವ ಗೃಹಲಕ್ಷ್ಮಿ ಕಂತುಗಳ ಹಣ ಜಮಾಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಹಣ ಬಿಡುಗಡೆ ಪ್ರಕ್ರಿಯೆ
ಗೃಹ ಲಕ್ಷ್ಮಿ ಸ್ಕೀಮ್ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ಹಲವಾರು ಮಹಿಳೆಯರಿಗೆ ಆರ್ಥಿಕ ಸಬಲೀಕರಣ ನೀಡಿದರೂ, ಇತ್ತೀಚೆಗೆ ಕೆಲವು ಜಿಲ್ಲೆಗಳಲ್ಲಿ ಹಣ ಲಭ್ಯತೆ ಕುರಿತು ಸಮಸ್ಯೆಗಳು ಎದುರಾಗಿವೆ. ಕೆಲವು ಫಲಾನುಭವಿಗಳಿಗೆ 15ನೇ, 16ನೇ ಮತ್ತು 17ನೇ ಕಂತಿನ ಹಣ ಇನ್ನೂ ಜಮಾ ಆಗಿಲ್ಲ, ಇದರಿಂದಾಗಿ ಮಹಿಳೆಯರು ತೀವ್ರ ನಿರೀಕ್ಷೆಯಲ್ಲಿದ್ದಾರೆ.
ಹಣದ ಪಾವತಿ ಮೂರ್ನಾಲ್ಕು ತಿಂಗಳಿನಿಂದ ವಿಳಂಬವಾಗಿದ್ದು, ಇದಕ್ಕೆ ಅನೇಕ ಕಾರಣಗಳಿವೆ. ಸರ್ಕಾರ ಈಗಾಗಲೇ ಪೆಂಡಿಂಗ್ ಇರುವ ಹಣ ಬಿಡುಗಡೆ ಪ್ರಕ್ರಿಯೆ ಆರಂಭಿಸಿದ್ದು, ಹಂತ ಹಂತವಾಗಿ ಎಲ್ಲಾ ಖಾತೆಗೆ (ಬ್ಯಾಂಕ್ ಅಕೌಂಟ್ ) ಹಣ ವರ್ಗಾವಣೆ ಮಾಡಲಾಗುತ್ತಿದೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ.
15ನೇ, 16ನೇ ಮತ್ತು 17ನೇ ಕಂತಿನ ಪಾವತಿ ಯಾವಾಗ?
ಕೆಲವು ಜಿಲ್ಲೆಗಳಲ್ಲಿ 15ನೇ ಕಂತಿನ ಹಣ ಇನ್ನೂ ಲಭ್ಯವಾಗಿಲ್ಲ. ನಿಗದಿತ ದಿನಾಂಕದಲ್ಲಿ ಹಣ ಖಾತೆಗೆ ಜಮಾ ಆಗದ ಕಾರಣ, ಹಲವಾರು ಮಹಿಳೆಯರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಮೂಲಗಳ ಪ್ರಕಾರ, ಈ ತಿಂಗಳ 15ರವರೆಗೆ ಹಣ ಖಾತೆಗೆ ಬರುವ ನಿರೀಕ್ಷೆಯಿದೆ.
16 ಮತ್ತು 17ನೇ ಕಂತುಗಳ ಪಾವತಿ ಹಂತ ಹಂತವಾಗಿ ಮಾಡಲಾಗುತ್ತಿದ್ದು, ಫೆಬ್ರವರಿ ಕೊನೆಯೊಳಗೆ ಎಲ್ಲಾ ಬಾಕಿಯಿರುವ ಕಂತುಗಳು ಹಂಚಿಕೆಯಾಗಲಿವೆ. ಈ ನಿರ್ಧಾರದಿಂದ ರಾಜ್ಯದ ಸಾವಿರಾರು ಮಹಿಳೆಯರು ನಿರೀಕ್ಷಿತ ಸಹಾಯ ಪಡೆಯಲಿದ್ದಾರೆ.
ಯೋಜನೆಯ ಪಾವತಿ ವಿಧಾನದಲ್ಲಿ ಬದಲಾವಣೆ ಸಾಧ್ಯತೆ?
ಮೂಲಗಳ ಪ್ರಕಾರ, ಸರ್ಕಾರ ಹಣ ಪಾವತಿ ವಿಧಾನದಲ್ಲಿ ಬದಲಾವಣೆ ಮಾಡಲು ಯೋಚನೆ ನಡೆಸುತ್ತಿದೆ. ಈ ಮೊದಲು ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತಿದ್ದರೆ, ಈಗ ತಾಲೂಕು ಪಂಚಾಯತ್ ಮೂಲಕ ಹಣ ವಿತರಿಸುವ ಸಾಧ್ಯತೆ ಇದೆ. ಇದರಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹೊರೆ ಕಡಿಮೆಯಾಗುವ ನಿರೀಕ್ಷೆಯಿದೆ.
ಇನ್ನುಳಿದಂತೆ, ಎಲ್ಲಾ ಜಿಲ್ಲೆಗಳಲ್ಲಿ ಒಟ್ಟಾರೆ ಹಣ ಬಿಡುಗಡೆ ಮಾಡುವುದು ತಾಂತ್ರಿಕವಾಗಿ ಸಾಧ್ಯವಿಲ್ಲ. ಹೀಗಾಗಿ, ಹಂತ ಹಂತವಾಗಿ ಹಣ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಸರ್ಕಾರದಿಂದ ಅಧಿಕೃತ ಪ್ರಕಟಣೆ ಹೊರಬಿದ್ದ ನಂತರ, ಫಲಾನುಭವಿಗಳು ಸೂಕ್ತ ಮಾಹಿತಿ ಪಡೆಯಬಹುದು.