Published
2 months agoon
By
Akkare News
ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರವಿರಾಜ ಎಸ್ ಎನ್‌ಎಸ್ಎಸ್ ಘಟಕಗಳು ಆಯೋಜಿಸುವ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶುಭ ಹಾರೈಸಿದರು.
ಕಾರ್ಯಕ್ರಮದ ಸಂಘಟಕರಾದ ಡಾ. ಹರಿಪ್ರಸಾದ್ ಎಸ್ ಈ ಸರಣಿ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಲೋಕದ ಪ್ರಚಲಿತ ವಿಷಯಗಳ ಮತ್ತು ಕೌಶಲ್ಯಗಳ ಬಗೆಗಿನ ಪರಿಚಯ ಮಾಡುವ ಉದ್ದೇಶವನ್ನು ಒಳಗೊಂಡಿದೆ ಎಂದರು ಸ್ವಯಂಸೇವಕರೇ ಆಯೋಜಿಸುವ ಈ ಕಾರ್ಯಕ್ರಮವು ಸಂಘಟನಾ ಕೌಶಲ್ಯ ಮತ್ತು ನಾಯಕತ್ವ ಗುಣ ಬೆಳೆಸುವ ಉದ್ದೇಶಗಳನ್ನು ಕೂಡ ಒಳಗೊಂಡಿದೆ ಎಂದರು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಯೋಜನಾಧಿಕಾರಿಯದ ಶ್ರೀ ಕೇಶವಕುಮಾರ್ ಬಿ, ಕನ್ನಡ ವಿಭಾಗದ ಉಪನ್ಯಾಸಕರುಗಳಾದ ಶ್ರೀ ಮಂಜುನಾಥ್ ಬಿ ಆರ್, ಶ್ರೀ ಮಹೇಶ್ ಕುಮಾರ್, ಡಾ. ಸಂತೋಷ್ ಎಚ್.ಎಸ್, ಅರ್ಥಶಾಸ್ತ್ರ ವಿಭಾಗದ ಡಾ. ತೇಜಸ್ವಿ ಕುಮಾರ್, ಇತಿಹಾಸ ವಿಭಾಗದ ಶ್ರೀ ಕೃಷ್ಣ ಡಿ, ಸಮಾಜಶಾಸ್ತ್ರ ವಿಭಾಗದ ಶ್ರೀ ಮಹೇಶ್ ಇವರುಗಳು ಉಪಸ್ಥಿತರಿದ್ದರು. ಸ್ವಯಂಸೇವಕಿ ಪುಷ್ಪಾವತಿ ಸ್ವಾಗತಿಸಿದರು, ರಮ್ಯಾ ಸಂಪನ್ಮೂಲ ವ್ಯಕ್ತಿಯ ಪರಿಚಯವನ್ನು ಮಾಡಿದರು. ಸಿಂಚನ ಎ.ಲ್ ವಂದಿಸಿದರು. ಹಾಗೂ ರಿಕ್ಷಿತಾ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು.