Connect with us

ಇಂದಿನ ಕಾರ್ಯಕ್ರಮ

ಉಪ್ಪಿನಂಗಡಿ ಕಾಲೇಜಿನಲ್ಲಿ ಸರಣಿ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ :ಪ್ರತಿ ಸನ್ನಿವೇಶಗಳನ್ನು ಧನಾತ್ಮಕವಾಗಿ ತೆಗೆದುಕೊಳ್ಳಬೇಕು: ಡಾ. ನಂದೀಶ್ ವೈ.ಡಿ

Published

on

ವ್ಯಕ್ತಿ ಬದುಕಿನಲ್ಲಿ ತಪ್ಪು ಮಾಡುವುದು ಸಹಜ ಆದರೆ ಆ ತಪ್ಪನ್ನು ಯಾವ ರೀತಿ ಸರಿಪಡಿಸಿಕೊಳ್ಳುತ್ತೇವೆ ಎಂಬುದು ಬಹು ಮುಖ್ಯವಾಗಿರುತ್ತದೆ. ಸಮಸ್ಯೆಗಳು ಜೀವನದ ಭಾಗವಾಗಿವೆ. ಪ್ರತಿ ಸನ್ನಿವೇಶಗಳಲ್ಲೂ ಧನಾತ್ಮಕವಾಗಿ ಯೋಚನೆ ಮಾಡಿ ಜೀವನ ಸಾಗಿಸಬೇಕು ಎಂದು ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರು ಮುಖ್ಯಸ್ಥರು ಆಗಿರುವ ಡಾ. ನಂದೀಶ್ ವೈ ಡಿ ಹೇಳಿದರು. ಇವರು ಇತ್ತೀಚಿಗೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿಯ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಆಯೋಜಿಸಿದ ಸರಣಿ ಉಪನ್ಯಾಸ ಕಾರ್ಯಕ್ರಮ ಮೊದಲ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ “ಎಮೋಷನಲ್ ಇಂಟೆಲಿಜೆನ್ಸ್ ಮತ್ತು ವಿದ್ಯಾರ್ಥಿಗಳು” ಎಂಬ ವಿಷಯದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ಸೋತುಹೋದ ಸಂದರ್ಭದಲ್ಲಿ ಮಾನಸಿಕವಾಗಿ ಕುಗ್ಗದೆ ಎದುರಾಗುವ ಸನ್ನಿವೇಶಗಳನ್ನು ಧೈರ್ಯವಾಗಿ ಗೆಲ್ಲುವ ಸಾಮರ್ಥ್ಯವನ್ನು ಹೊಂದಿರಬೇಕೆಂದು ಕರೆ ನೀಡಿದರು.



ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರವಿರಾಜ ಎಸ್ ಎನ್‌ಎಸ್ಎಸ್ ಘಟಕಗಳು ಆಯೋಜಿಸುವ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶುಭ ಹಾರೈಸಿದರು.

 

ಕಾರ್ಯಕ್ರಮದ ಸಂಘಟಕರಾದ ಡಾ. ಹರಿಪ್ರಸಾದ್ ಎಸ್ ಈ ಸರಣಿ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಲೋಕದ ಪ್ರಚಲಿತ ವಿಷಯಗಳ ಮತ್ತು ಕೌಶಲ್ಯಗಳ ಬಗೆಗಿನ ಪರಿಚಯ ಮಾಡುವ ಉದ್ದೇಶವನ್ನು ಒಳಗೊಂಡಿದೆ ಎಂದರು ಸ್ವಯಂಸೇವಕರೇ ಆಯೋಜಿಸುವ ಈ ಕಾರ್ಯಕ್ರಮವು ಸಂಘಟನಾ ಕೌಶಲ್ಯ ಮತ್ತು ನಾಯಕತ್ವ ಗುಣ ಬೆಳೆಸುವ ಉದ್ದೇಶಗಳನ್ನು ಕೂಡ ಒಳಗೊಂಡಿದೆ ಎಂದರು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಯೋಜನಾಧಿಕಾರಿಯದ ಶ್ರೀ ಕೇಶವಕುಮಾರ್ ಬಿ, ಕನ್ನಡ ವಿಭಾಗದ ಉಪನ್ಯಾಸಕರುಗಳಾದ ಶ್ರೀ ಮಂಜುನಾಥ್ ಬಿ ಆರ್, ಶ್ರೀ ಮಹೇಶ್ ಕುಮಾರ್, ಡಾ. ಸಂತೋಷ್ ಎಚ್.ಎಸ್, ಅರ್ಥಶಾಸ್ತ್ರ ವಿಭಾಗದ ಡಾ. ತೇಜಸ್ವಿ ಕುಮಾರ್, ಇತಿಹಾಸ ವಿಭಾಗದ ಶ್ರೀ ಕೃಷ್ಣ ಡಿ, ಸಮಾಜಶಾಸ್ತ್ರ ವಿಭಾಗದ ಶ್ರೀ ಮಹೇಶ್ ಇವರುಗಳು ಉಪಸ್ಥಿತರಿದ್ದರು. ಸ್ವಯಂಸೇವಕಿ ಪುಷ್ಪಾವತಿ ಸ್ವಾಗತಿಸಿದರು, ರಮ್ಯಾ ಸಂಪನ್ಮೂಲ ವ್ಯಕ್ತಿಯ ಪರಿಚಯವನ್ನು ಮಾಡಿದರು. ಸಿಂಚನ ಎ.ಲ್ ವಂದಿಸಿದರು. ಹಾಗೂ ರಿಕ್ಷಿತಾ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version