Published
3 weeks agoon
By
Akkare Newsಒಂದೆಡೆ ಮೈಸುಡುವ ವಿಪರೀತ ಬಿಸಿಲು. ಇದರ ನಡುವೆ ಸುರಿದ ಒಂದೆರಡು ಮಳೆ. ಎರಡೂ ಸೇರಿ ಅಡಿಕೆ ಬೆಳೆಗಾರರು ಬೆಂದು ಕಂಗಾ ಲಾಗಿ ದ್ದಾರೆ. ಬಿಸಿಲಿನಿಂದ ಬಳಲಿ ಬೆಂಡಾಗಿದ್ದ ಅಡಿಕೆ ಮರ ಗಳಿಗೆ ಇತ್ತೀ ಚೆಗೆ ಸುರಿದ ಮಳೆ ಅಮೃತ ವಾಗುವ ಬದಲು ವಿಷವಾಗಿದೆ.
ಕಳೆದ ವರ್ಷ ಕೂಡ ಇದೇ ರೀತಿ ಆಗಿತ್ತು. ಭಾರೀ ಬಿಸಿಲು ಮತ್ತು ಅದರ ನಡುವೆ ಸುರಿದ ಒಂದೆರಡು ಮಳೆಯ ಕಾರಣ ಹಿಂಗಾರ ಸುಟ್ಟುಹೋಗಿ ಅಡಿಕೆಯ ಫಸಲಿನ ಮೇಲೆ ಭಾರೀ ಪೆಟ್ಟು ಬಿದ್ದಿತ್ತು.
ತಾಪಮಾನ ಎಷ್ಟಿರಬೇಕು?
14 ಡಿಗ್ರಿ ಸೆ.ನಿಂದ 36 ಡಿಗ್ರಿ ಸೆ.ನೊಳಗೆ ತಾಪಮಾನ ಇದ್ದರೆ ಅಡಿಕೆ ಚೆನ್ನಾಗಿ ಬೆಳೆಯುತ್ತದೆ. ಇದಕ್ಕಿಂತ ಕಡಿಮೆಯಾದರೆ ರೋಗಬಾಧೆ ತಗಲುತ್ತದೆ. ಹೆಚ್ಚಾದರೆ ಹಿಂಗಾರ ಒಣಗಿ ನಳ್ಳಿ ಉದುರಲು ಆರಂಭವಾಗುತ್ತದೆ.
ಬುಡ ತಂಪು; ತಲೆ ಕೆಂಪು
ಕಳೆದ ವಾರ ಏಕಾಏಕಿ ಅಬ್ಬರದ ಮಳೆ ಸುರಿದಾಗ ಒಮ್ಮೆ ಅಡಿಕೆ ತೋಟಕ್ಕೆ ತಂಪಾಯಿತು. ಆದರೆ ಎರಡು ದಿನ ಕಳೆದು ಮರಗಳ ಕೊಬೆ (ತಲೆ) ನೋಡಿದರೆ ಹಿಂಗಾರವೆಲ್ಲ ಕರಟಿ ಹೋಗಿ ಕೆಂಪಗಾಗಿದೆ. ಮಳೆ ಬಂದಾಗ ನೀರು ನಿಂತು ಮರುದಿನವೇ ರಣ ಬಿಸಿಲು ಬಿದ್ದ ಪರಿಣಾಮ ಹಿಂಗಾರ ಮಾತ್ರವಲ್ಲದೆ ಅಡಿಕೆಯ ಗರಿಗಳೂ ಬಾಡಿ ಹೋಗಿದ್ದವು.
ಕೊನೆಯ ಕೊçಲಿಗೆ ಅಡಿಕೆಯೇ ಇರಲಿಲ್ಲ. ಅಲ್ಲಲ್ಲಿ ಅಡಿಕೆ ಎಲೆಚುಕ್ಕಿ ರೋಗವೂ ಕಾಣಿಸಿಕೊಂಡಿತ್ತು.
ಈ ವರ್ಷ ಫೆಬ್ರವರಿ ತಿಂಗಳಿನಿಂದಲೇ ವಿಪರೀತ ಬಿಸಿಲಿನ ಬೇಗೆ ಇದ್ದು, ಅನೇಕ ತೋಟಗಳಲ್ಲಿ ಎಳೆಯ ಕಾಯಿ (ನಳ್ಳಿ) ಉದುರುತ್ತಿದೆ. ಇಲಾಖೆ ಸೂಚಿಸಿದ ಯಾವುದೇ ಔಷಧ ಸಿಂಪಡಿಸಿದರೂ ನಿರೀಕ್ಷೆಯ ಪ್ರಮಾಣದಲ್ಲಿ ಫಲಿಸುತ್ತಿಲ್ಲ, ಅಂದರೆ ನಳ್ಳಿ ನಿಲ್ಲುತ್ತಿಲ್ಲ ಎನ್ನುವ ಕೂಗು ಕೃಷಿಕ ವರ್ಗದಿಂದ ಕೇಳಿಬರುತ್ತಿದೆ.
ಮೂರಕ್ಕೂ ಇಲ್ಲ, ನಾಲ್ಕಕ್ಕೂ ಇಲ್ಲ!
ಹವಾಮಾನ ವೈಪರೀತ್ಯದಿಂದಾಗಿ ಇತ್ತೀಚೆಗೆ ಅಡಿಕೆಯಲ್ಲಿ ಎರಡೇ ಕೊçಲು ಎಂಬ ಸ್ಥಿತಿ ಬಂದಿದೆ. ಕಳೆದ ವರ್ಷವೂ ವಿಪರೀತ ಬಿಸಿಲು ಮತ್ತು ಕೆಲವು ಬಾರಿ ಸುರಿದ ಬೇಸಗೆ ಮಳೆಯಿಂದಾಗಿ ಈ ಬಾರಿ ಮೂರನೇ ಮತ್ತು ನಾಲ್ಕನೇ ಕೊçಲಿಗೆ ಅಡಿಕೆಯೇ ಇಲ್ಲವಾಗಿದೆ. ಇನ್ನು ಈ ಬಾರಿಯೂ ಪ್ರಕೃತಿ ಮುನಿದಿರುವುದರಿಂದ ಮುಂದಿನ ಬಾರಿಯೂ ಇದೇ ಪರಿಸ್ಥಿತಿ ಇರುವುದು ಖಚಿತ ಎನ್ನುತ್ತಾರೆ ಬೆಳೆಗಾರರು.
ವರ್ಷಪೂರ್ತಿ ಸಿಂಪಡಣೆ
ಅಡಿಕೆಗೆ ವರ್ಷವಿಡಿ ಔಷಧ ಸಿಂಪಡ ಣೆಯ ಅನಿವಾರ್ಯ ಎದುರಾಗಿದೆ. ಡಿಸೆಂಬರ್ ತಿಂಗಳಿನಲ್ಲಿ ಔಷಧ ಸಿಂಪಡಣೆ ಆರಂಭಿಸಬೇಕಾಗುತ್ತದೆ. ಹಿಂಗಾರ ಸಾಯುವ ರೋಗಕ್ಕೆ ಒಂದು ರೀತಿಯ ಔಷಧವಾದರೆ, ಎಲೆಚುಕ್ಕಿ ರೋಗಕ್ಕೆ ಮತ್ತೂಂದು ಸಿಂಪಡಣೆ. ಎರಡನೇ ಬಾರಿ ನೀಡುವ ವೇಳೆ ಔಷಧವನ್ನೇ ಬದಲಾಯಿಸಬೇಕಾಗುತ್ತದೆ. ಕೊಳೆರೋಗಕ್ಕೆ ಬೋಡೋì ಸಿಂಪಡಣೆ ಹೀಗೆ ವರ್ಷ ಪೂರ್ತಿ ಅಡಿಕೆ ತೋಟಕ್ಕೆ ಔಷಧ ಸಿಂಪಡಣೆ ಮಾಡಬೇಕಾದ ಅನಿವಾರ್ಯ ರೈತರಿಗೆ ಎದುರಾಗಿದೆ.
ಕುಂಭ ಮಾಸದಲ್ಲಿ (ಮಾರ್ಚ್) ಮಳೆಯಾದರೆ ಗಿಡಮರಗಳಿಗೆ ಅಮೃತ ಸಿಂಚನವಾಗುತ್ತದೆ. ಆದರೆ ಇದು ಅಡಿಕೆ ಬೆಳೆ ಮೇಲೆ ಮಾತ್ರ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಡಿಕೆ ಮರಗಳ ಕೊಬೆಗಳಲ್ಲಿ ನೀರು ನಿಂತು ಹಿಂಗಾರ ಬೆಂದು ಕರಟುತ್ತದೆ. ಇದು ಮೂರು, ನಾಲ್ಕನೇ ಕೊಯ್ಲಿನ ಮೇಲೆ ಪರಿಣಾಮ ಬೀರುತ್ತದೆ. ಕಳೆದ ವರ್ಷವೂ ಮಾರ್ಚ್ ತಿಂಗಳಿನಲ್ಲಿ ಅಕಾಲಿಕ ಮಳೆ ಹಾಗೂ ವಿಪರೀತ ಬಿಸಿಲಿನಿಂದಾಗಿ ಹೆಚ್ಚಿನ ರೈತರಿಗೆ ಫಸಲು ಕಡಿಮೆಯಾಗಿತ್ತು. ಪುತ್ತೂರು, ಕುಂಬ್ರ, ಸುಳ್ಯ, ಪಂಜ ಪ್ರದೇಶಗಳ ರೈತರಿಗೆ ಶೇ. 30ರಷ್ಟು ಮಾತ್ರವೇ ಅಡಿಕೆ ಫಸಲು ಸಿಕ್ಕಿದ್ದು, ಹೆಚ್ಚಿನ ರೈತರು ಈ ಬಾರಿ ಮೂರನೇ ಕೊಯ್ಲಿಗೆ ಮುಂದಾಗಿಲ್ಲ. ನಾಲ್ಕನೇ ಕೊಯ್ಲಿನ ಪ್ರಶ್ನೆಯೇ ಇಲ್ಲ.
ಶಿವಸುಬ್ರಹ್ಮಣ್ಯ, ಉಮೇಶ್ ಆಳ್ವ ಸರಪಾಡಿ, ಅಡಿಕೆ ಬೆಳೆಗಾರರು
ಹಿಂದೆ ಮಳೆಗಾಲದಲ್ಲಿ ಮಾತ್ರ ಬೋಡೋì ದ್ರಾವಣ ಸಿಂಪಡಣೆ ಮಾಡುವ ಅನಿವಾರ್ಯ ಇತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಆಗಾಗ ಸಿಂಪಡಣೆ ಮಾಡಬೇಕಾಗುತ್ತದೆ. ಕಾರ್ಮಿಕರ ಕೊರ ತೆಯ ನಡುವೆ ಪದೇ ಪದೆ ಸಿಂಪಡಣೆ ಸಾಧ್ಯವಾಗುತ್ತಿಲ್ಲ. ವಾತಾವರಣದ ಬದಲಾವಣೆಯಿಂದ ನೇರ ಪರಿಣಾಮವಾಗುತ್ತಿದ್ದು, ಅನೇಕ ರೈತರು ಪರ್ಯಾಯ ಆದಾಯದ ಮೂಲದತ್ತ ಮುಖ ಮಾಡುತ್ತಿದ್ದಾರೆ. ಜಾಯಿಕಾಯಿ, ಬಾಳೆ, ಕೊಕ್ಕೊ ಇತ್ಯಾದಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ವಿ.ಕೆ. ಶರ್ಮ ಮುಳಿಯ, ಪ್ರಗತಿಪರ ಕೃಷಿಕರು
ಹಿಂಗಾರ ಬರಲು ಆರಂಭವಾಗುವ ಡಿಸೆಂಬರ್ ತಿಂಗಳಿನಿಂದ ಹಿಡಿದು ಕನಿಷ್ಠ ತಿಂಗಳಿಗೊಮ್ಮೆಯಾದರೂ ಔಷಧ ಸಿಂಪಡಣೆ ಮಾಡುವ ಅನಿವಾರ್ಯ ಇದೆ. ಅಡಿಕೆ ನಳ್ಳಿ ಶೇ. 50ರಷ್ಟೂ ಉಳಿಯುತ್ತಿಲ್ಲ. ಅತಿಯಾದ ಉಷ್ಣಾಂಶದಿಂದಾಗಿ ಬೆಳೆ ನಷ್ಟದ ಭೀತಿ ಈ ವರ್ಷವೂ ಇದೆ. ಈಗಿನ ಬಿಸಿಲು ನೋಡಿದರೆ ಕಳೆದ ವರ್ಷಕ್ಕಿಂತಲೂ ವಿಪರೀತವಾಗುವ ಲಕ್ಷಣ ಕಾಣಿಸುತ್ತಿದೆ. ಹೀಗಾದಲ್ಲಿ ರೈತರ ಪಾಡೇನು? ವೆಚ್ಚ ಮಾಡಿದಷ್ಟು ಆದಾಯ ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಅಡಿಕೆ ನಿರ್ಣಾಮವಾಗುತ್ತಾ ಎನ್ನುವ ಆತಂಕವಿದೆ. ಗಣಪತಿ ಭಟ್, ಪ್ರಗತಿಪರ ಕೃಷಿಕ
ಕಳೆದ ವರ್ಷ ಹವಾಮಾನ ವೈಪರೀತ್ಯದಿಂದ ಇಳುವರಿ ಕಡಿಮೆಯಾಗಿತ್ತು. ರೈತರು ಸಮರ್ಪಕವಾಗಿ ನಿರ್ವಹಣೆ ಮಾಡುವುದು ಅತೀ ಅಗತ್ಯ. ಸಮಯಕ್ಕೆ ಸರಿಯಾಗಿ ನೀರು ಒದಗಿಸುವುದು, ಔಷಧ ಸಿಂಪಡಣೆ ಹಾಗೂ ಬೇಕಾದ ಪೋಷಕಾಂಶ ನೀಡುವ ಬಗ್ಗೆ ಇಲಾಖೆ ಹಾಗೂ ಯುನಿವರ್ಸಿಟಿಯಿಂದ ಮಾಹಿತಿ ನೀಡುವ ಕೆಲಸವಾಗುತ್ತಿದೆ. ರೈತರು ವಿಜ್ಞಾನಿಗಳ ಶಿಫಾರಸುಗಳಂತೆ ನಿರ್ವಹಣೆ ಮಾಡಿದಲ್ಲಿ ನಷ್ಟವಾಗದಂತೆ ನೋಡಿಕೊಳ್ಳಲು ಸಾಧ್ಯವಿದೆ.
ಪ್ರವೀಣ್ ಕೆ. ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು
ಭತ್ತವೂ ಇಲ್ಲ, ಅಡಿಕೆಯೂ ಇಲ್ಲ!
ಭತ್ತದ ಬೇಸಾಯ ಕಷ್ಟವೆಂದು ಪರ್ಯಾಯವಾಗಿ ಅಡಿಕೆಗೆ ಬದಲಾಗಿದ್ದ ಕೃಷಿಕರಿಗೆ ಈಗ ಅಡಿಕೆ ಬೆಳೆಯೂ ಕೂಡ ನಷ್ಟದಾಯಕವಾಗಿ ಪರಿಣಮಿಸುತ್ತಿದೆ. ಇಲಾಖೆ ಹೇಳುವ ಎಲ್ಲ ವಿಧಾನಗಳನ್ನು ಅನುಸರಿಸಿದರೂ ಪ್ರಯೋಜನವಾಗುತ್ತಿಲ್ಲ ಎಂಬುದು ಅನುಭವಿ ಕೃಷಿಕರ ಮಾತು. ಸರಕಾರವೇ ಇದಕ್ಕೊಂದು ಸೂಕ್ತ ಕ್ರಮ ಕೈಗೊಳ್ಳಬೇಕು. ವಿಮೆಯ ಮೇಲೆ ನಿಯಂತ್ರಣ ವಿಧಿಸಿ ಇಲಾಖೆಯ ಮೂಲಕ ಸಬ್ಸಿಡಿ ವೆಚ್ಚದಲ್ಲಿ ಎಲ್ಲ ತೋಟಗಳಿಗೆ ಏಕಕಾಲಕ್ಕೆ ಔಷಧ ಸಿಂಪಡಣೆಗೆ ಕ್ರಮ ಕೈಗೊಳ್ಳಬೇಕು.