Published
1 week agoon
By
Akkare Newsತೊಕ್ಕೊಟ್ಟು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ ಮತ್ತು 75 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಮಾದಕ ವಸ್ತು ಪ್ರಕರಣವನ್ನು ಪತ್ತೆ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದಾದ್ಯಂತ ಹೆಸರುಗಳಿಸಿರುವ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ ಅಗರ್ವಾಲ್ ನೇತೃತ್ವದ ಪೊಲೀಸ್ ತಂಡ ಮುಖ್ಯಮಂತ್ರಿ ಪದಕ ಸ್ವೀಕರಿಸಲು ಬೆಂಗಳೂರಿಗೆ ತೆರಳಲಿದೆ.
ಅಪರಾಧ ಪ್ರಕರಣವನ್ನು ಹತ್ತಿಕ್ಕುವಲ್ಲಿ ಮತ್ತು ಅಕ್ರಮ ಚಟುವಟಿಕೆ ಗಳನ್ನು ಮಟ್ಟ ಹಾಕು ವಲ್ಲಿ ಕಳೆದೆರಡು ವರ್ಷಗಳಿಂದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದ ಕಮಿಷನರ್ ಅನುಪಮ ಅಗರ್ವಾಲ್ ಸಹಿತ ಹಲವು ಪೊಲೀಸರಿಗೆ ರಾಜ್ಯ ಸರ್ಕಾರ ಮುಖ್ಯಮಂತ್ರಿ ಪದಕ ಘೋಷಿಸಿದೆ.
ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಅನುಪಮ ಅಗರ್ವಾಲ್ ಅವರ ಕಾರ್ಯದಕ್ಷತೆ ಮತ್ತು ಸಾಹಸಿ ಕಾರ್ಯಾಚರಣೆ ಹಿರಿಯ ಪೊಲೀಸ್ ಅಧಿಕಾರಿಗಳ ಸಹಿತ ಸಾರ್ವತ್ರಿಕ ಸ್ಲಾಘನೆಗೆ ಪಾತ್ರವಾಗಿದೆ.
ದರೋಡೆ ಪ್ರಕರಣ ಮತ್ತು ಮಾದಕ ವಸ್ತು ಪತ್ತೆ ಪ್ರಕರಣದ ತನಿಕೆಯನ್ನು ಸಮರ್ಪಕವಾಗಿ ಮುಂದುವರಿಸಲು ಅನುಕೂಲವಾಗುವಂತೆ ಕಮಿಷನರ್ ಅನುಪಮ ಅಗರ್ವಾಲ್ ರವರನ್ನು ಇನ್ನೊಂದು ವರ್ಷ ಇದೇ ಹುದ್ದೆಯಲ್ಲಿ ಮುಂದುವರಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.