Connect with us

ಇತರ

ಮುಸ್ಲಿಮರ ಮೇಲಿನ ದಾಳಿ ನಂತರ ಆರ್‌ಎಸ್‌ಎಸ್ ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡಿದೆ: ರಾಹುಲ್ ಗಾಂಧಿ

Published

on

ವಕ್ಫ್ (ತಿದ್ದುಪಡಿ) ಮಸೂದೆ ಮೂಲಕ ಮುಸ್ಲಿಮರ ಮೇಲಿನ ದಾಳಿ ನಂತರ ಭವಿಷ್ಯದಲ್ಲಿ ಇತರ ಸಮುದಾಯಗಳನ್ನು ಗುರಿಯಾಗಿಸಲು ಆರ್‌ಎಸ್‌ಎಸ್ ಒಂದು ಪೂರ್ವನಿದರ್ಶನವನ್ನು ಸ್ಥಾಪಿಸುತ್ತದೆ; ಮುಸ್ಲಿಂ ಸಮುದಾಯದ ಬಳಿಕ ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡಿದೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಆರ್‌ಎಸ್‌ಎಸ್ ಮುಖವಾಣಿ ‘ಆರ್ಗನೈಸರ್’ ವೆಬ್‌ಸೈಟ್‌ನಲ್ಲಿ ಡಿಲೀಟ್ ಮಾಡಿದ ಲೇಖನವನ್ನು ಅವರು ಉಲ್ಲೇಖಿಸಿದ್ದಾರೆ.

ಏಪ್ರಿಲ್ 3 ರಂದು ಪ್ರಕಟವಾದ ‘ಭಾರತದಲ್ಲಿ ಯಾರಿಗೆ ಹೆಚ್ಚು ಭೂಮಿ ಇದೆ? ದಿ ಕ್ಯಾಥೋಲಿಕ್ ಚರ್ಚ್ v/s ವಕ್ಫ್ ಬೋರ್ಡ್ ಡಿಬೇಟ್’ ಎಂಬ ಲೇಖನವು, “ದೇಶದಲ್ಲಿ ಭೂ ಮಾಲೀಕತ್ವದ ನಿಜವಾದ ದತ್ತಾಂಶವು ಕ್ಯಾಥೋಲಿಕ್ ಚರ್ಚ್ ವಕ್ಫ್ ಮಂಡಳಿಗಿಂತ ಅತಿದೊಡ್ಡ ಸರ್ಕಾರೇತರ ಭೂಮಾಲೀಕ” ಎಂದು ಲೇಖನದಲ್ಲಿ ಹೇಳಿಲಾಗಿದೆ.

ಲೇಖನವನ್ನು ಆಧರಿಸಿದ ಮಾಧ್ಯಮ ವರದಿಯನ್ನು ಉಲ್ಲೇಖಿಸಿ ರಾಹುಲ್ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ. “ವಕ್ಫ್ ಮಸೂದೆ ಈಗ ಮುಸ್ಲಿಮರ ಮೇಲೆ ದಾಳಿ ಮಾಡುತ್ತದೆ. ಆದರೆ, ಭವಿಷ್ಯದಲ್ಲಿ ಇತರ ಸಮುದಾಯಗಳನ್ನು ಗುರಿಯಾಗಿಸಲು ಒಂದು ಪೂರ್ವನಿದರ್ಶನವನ್ನು ಸ್ಥಾಪಿಸುತ್ತದೆ. ಆರ್‌ಎಸ್‌ಎಸ್ ಕ್ರಿಶ್ಚಿಯನ್ನರ ಕಡೆಗೆ ಗಮನ ಹರಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ” ಎಂದು ಆರೋಪಿಸಿದ್ದಾರೆ.

“ಇಂತಹ ದಾಳಿಗಳಿಂದ ನಮ್ಮ ಜನರನ್ನು ರಕ್ಷಿಸುವ ಏಕೈಕ ಗುರಾಣಿ ಸಂವಿಧಾನ; ಅದನ್ನು ರಕ್ಷಿಸುವುದು ನಮ್ಮ ಸಾಮೂಹಿಕ ಕರ್ತವ್ಯ” ಎಂದು ಅವರು ಹೇಳಿದರು.

ಮಸೂದೆಗೆ ಭಾರತದ ಕ್ಯಾಥೋಲಿಕ್ ಬಿಷಪ್‌ಗಳ ಸಮ್ಮೇಳನ (ಸಿಬಿಸಿಐ) ಮತ್ತು ಕೇರಳ ಕ್ಯಾಥೋಲಿಕ್ ಬಿಷಪ್‌ಗಳ ಮಂಡಳಿ (ಕೆಸಿಬಿಸಿ) ಬೆಂಬಲ ನೀಡುತ್ತಿರುವುದನ್ನು ಮತ್ತು ಪರವಾಗಿ ಮತ ಚಲಾಯಿಸುವಂತೆ ಸಂಸದರಿಗೆ ಮನವಿ ಮಾಡಿರುವುದನ್ನು ಬಿಜೆಪಿ ಉಲ್ಲೇಖಿಸುತ್ತಿರುವ ಸಮಯದಲ್ಲಿ ಈ ಲೇಖನ ಬಂದಿದೆ. ವಕ್ಫ್ ಮಂಡಳಿಯು ತಮ್ಮ ಭೂಮಿಯ ಮೇಲೆ ಹಕ್ಕು ಸಾಧಿಸಿದ ನಂತರ ಸ್ಥಳಾಂತರದ ಭೀತಿ ಎದುರಿಸುತ್ತಿರುವ ಕೇರಳದ ಮುನಂಬಮ್‌ನಲ್ಲಿರುವ ಕ್ರಿಶ್ಚಿಯನ್ ಕುಟುಂಬಗಳ ಪ್ರತಿಭಟನೆಯ ನಂತರ ಈ ಮನವಿ ಬಂದಿದೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement