Connect with us

ಇತರ

ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೇಸಿಗೆ ಶಿಬಿರ ಸಮಾರೋಪ ಸಮಾರಂಭ

Published

on

ಬನ್ನೂರು: ಕೃಷ್ಣ ನಗರದಲ್ಲಿ ಅಲುಂಬುಡದಲ್ಲಿ ಕಾರ್ಯಚರಿಸುತ್ತಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 16 ರಂದು ಬೇಸಿಗೆ ಶಿಬಿರ ಸಮಾರೋಪ ಸಮಾರಂಭ ಕಾರ್ಯಕ್ರಮವು ನಡೆಯಿತು. ನಗರಸಭಾ ಪೂರ್ವದ್ಯಕ್ಷರಾದ ಶ್ರೀ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಇವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರು ಮಾತನಾಡುತ್ತಾ ಪ್ರತಿಯೊಬ್ಬರ ಪ್ರಯತ್ನದ ಹಿಂದೆ ದೃಢ ನಿರ್ಧಾರ ಹಾಗೂ ಮುಂದೆ ಒಂದು ದೃಢವಾದ ಗುರಿ ಇರಬೇಕು. ಹಾಗಾದಾಗ ನಾವು ಜೀವನದಲ್ಲಿ ಮುಂದೆ ಬರಲು ಸಾಧ್ಯ. ಮಕ್ಕಳು ಎಳವೆಯಿಂದಲೇ ಇಂತಹ ಶಿಬಿರಗಳಲ್ಲಿ ಪಾಲ್ಗೊಂಡು ಅಂತಹ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿ ಶಿಬಿರಾರ್ಥಿಗಳಿಗೆ ಶುಭ ಕೋರಿದರು. ಪುತ್ತೂರು ಬೊ ಳುವಾರಿನ ಭಾವನ ಕಲಾ ಆರ್ಟ್ಸ್ ಮಾಲಕರಾದ ಶ್ರೀ ವಿಘ್ನೇಶ್ ವಿಶ್ವಕರ್ಮ ಅವರಿಗೆ ಎವಿಜಿ ಕಲಾಶ್ರೀ ಪ್ರಶಸ್ತಿಯನ್ನು ನೀಡಿ ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಶಿಕ್ಷಕ ರಕ್ಷಕ ಸಂಘದ ಸದಸ್ಯರು ಇತ್ತೀಚೆಗೆ ಕುಂಟ್ಯಾನ ಸದಾಶಿವ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿರುವ ಶ್ರೀಮತಿ ಸುಮಲತಾ ಅವರನ್ನು ಅಭಿನಂದಿಸಲಾಯಿತು. ಶಿಬಿರದ ಬಗ್ಗೆ ವಿದ್ಯಾರ್ಥಿಗಳಾದ ಅದ್ವಿಕ್ ಮತ್ತು ಆರುಷ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

 

ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಮೇಶ್ ಉಳಯ ಹಾಗೂ ತಾರಾನಾಥ ಸವಣೂರು ರವರು ಮಾತನಾಡಿ ಶಿಬಿರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಶಾಲಾ ನಿರ್ದೇಶಕರಾದ ಎ ವಿ ವಾಮನ ಗೌಡ ರವರು ಅತಿಥಿಯಾಗಿ ಪಾಲ್ಗೊಂಡಿದ್ದರು. ಶಿಬಿರದ ನಿರ್ದೇಶಕರು ಹಾಗೂ ಶಾಲೆಯ ಉಪ ಪ್ರಾಂಶುಪಾಲರಾದ ಶ್ರೀಮತಿ ಸವಿತಾ ರವರು ಸಮಾರೋಪ ಭಾಷಣ ಗೈದರು. ಅಧ್ಯಾಪಕಿ ರಂಜಿತಾ ರೈ ರವರು 6 ದಿನಗಳ ಶಿಬಿರದ ಸಮಗ್ರ ವರದಿಯನ್ನು ವಾಚಿಸಿದರು.

 

ಸಂಚಾಲಕರಾದ ಎ ವಿ ನಾರಾಯಣರವರು ಸನ್ಮಾನಿತರ ಬಗ್ಗೆ ಅಭಿನಂದನಾ ನುಡಿಗಳನ್ನಾಡಿದರು. ಅಧ್ಯಾಪಿಕೆ ಶ್ರೀಮತಿ ಯಶುಭ ರೈ ಸನ್ಮಾನ ಪತ್ರವನ್ನು ವಾಚಿಸಿದರು. ಶಿಬಿರಾರ್ಥಿ ಜಿತಿನ್ ಎ ಯನ್ ಸಂವಿಧಾನದ ಪೂರ್ವ ಪೀಠಿಕೆಯನ್ನು ವಾಚಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾಗಿರುವ ಶ್ರೀ ವೆಂಕಟರಮಣಗೌಡ ಕಳುವಾಜೆ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶಿಬಿರಕ್ಕೆ ಸಹಕರಿಸಿದ ಎಲ್ಲರನ್ನು ಸ್ಮರಿಸುತ್ತಾ ಇನ್ನು ಮುಂದಿನ ದಿನಗಳಲ್ಲಿಯೂ ಇಂತಹ ಕಾರ್ಯಕ್ರಮಗಳನ್ನು ನಡೆಸುವರೇ, ಎಲ್ಲರ ಸಹಕಾರವನ್ನು ಕೋರಿದರು.

 

ಆಡಳಿತಾಧಿಕಾರಿಯಾಗಿರುವ ಶ್ರೀ ಗುಡ್ಡಪ್ಪ ಗೌಡ ಬಲ್ಯ ರವರು ಸಹಕರಿಸಿದರು. ವಿದ್ಯಾರ್ಥಿನಿಯರಾದ ಕುಮಾರಿ ಜ್ಞಾನ, ಗೀತಿಷ, ಮತ್ತು ಆರುಷಿ ಪ್ರಾರ್ಥನೆ ಹಾಡಿದರು. ಅಧ್ಯಾಪಿಕೆ ಕುಮಾರಿ ಪ್ರಕ್ಷುತಾ ಸ್ವಾಗತಿಸಿ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಉಮೇಶ್ ಮಳುವೇಲು ವಂದನಾರ್ಪಣೆ ಗೈದರು. ಮತ್ತು ಶಿಕ್ಷಕಿಯರಾದ ಶ್ರೀಮತಿ ರೀಮಾ ಲೋಬೋ ಮತ್ತು ಶ್ರೀಮತಿ ಹರ್ಷಿತ ರವರು ಕಾರ್ಯಕ್ರಮ ನಿರೂಪಿಸಿದರು.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement