Published
5 hours agoon
By
Akkare Newsಕಾಡಾನೆಯೊಂದು ಕೆಯ್ಯೂರು ಗ್ರಾಮದ ಕೆಯ್ಯೂರು, ಇಳಂತಾಜೆ ಪರಿಸರದ ಕೃಷಿ, ತೋಟದ ಆವರಣಗೋಡೆಗೆ ಹಾನಿ ಮಾಡಿದೆ. ಮೂರು ದಿನಗಳ ಹಿಂದೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ಪರಿಸರಕ್ಕೆ ಬಂದಿದ್ದ ಆನೆ ಇಬ್ಬರು ಕೃಷಿಕರ ತೋಟಗಳಿಗೆ ಹಾನಿ ಮಾಡಿತ್ತು. ಕೊಳ್ತಿಗೆ ಮೂಲಕ ಕೆಯ್ಯೂರು ಭಾಗಕ್ಕೆ ಕಾಲಿಟ್ಟಿರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕೆಯ್ಯೂರಿನ ಗೋವಿಂದ ಭಟ್ ಅವರ ತೋಟದ ಬದಿಯ ಆವರಣಗೋಡೆಯನ್ನು ಕೆಡವಿ ತೋಟಕ್ಕೆ ನುಗ್ಗಿದೆ. ಶಾಲೆಯ ಹಿಂಭಾಗದಲ್ಲಿರುವ ಆವರಣ ಗೋಡೆಯನ್ನೂ ಕೆಡವಿದೆ.
ಒಂಟಿ ಕಾಡಾನೆ ದಾಳಿ ಮಾಡಿದ್ದು, ಸಣ್ಣಪುಟ್ಟ ಕೃಷಿ ಹಾನಿ ಮಾಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕಾಡಾನೆ ಶುಕ್ರವಾರ ಮುಂಜಾನೆ ಪಕ್ಕದ ಕಣಿಯಾರುಮಲೆ ರಕ್ಷಿತಾರಣ್ಯ ಸೇರಿಕೊಂಡಿರಬಹುದೆಂದು ಅಂದಾಜಿಸಲಾಗಿದೆ.