Published
9 hours agoon
By
Akkare Newsಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಸೋಮಣ್ಣ ಬೇಬಿನಮರ ಹಾಗೂ ಪ್ರಾಧಿಕಾರದ ಸದಸ್ಯರಾದ ಡಾ. ಸಂಜೀವ ಕುಮಾರ ಅತಿವಾಲೆ, ಶ್ರೀ ಶಿವರೆಡ್ಡಿ ಖ್ಯಾಡೆದ್, ಅವರ ಉಪಸ್ಥಿತಿಯಲ್ಲಿ
ತಾರೀಕು 19/04/25 ರಂದು ದುಬೈಯಲ್ಲಿ ನಡೆದ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ವಾರ್ಷಿಕ ಮಹಾ ಸಭೆಯಲ್ಲಿ ಜಿಸಿಸಿಯ ಸಲಹ ಸಮಿತಿ ಅಧ್ಯಕ್ಷರನ್ನಾಗಿ ಶ್ರೀ ಅಶ್ರಫ್ ಶಾ ಮಾಂತೂರ್ ರವರನ್ನು ಹಾಗೂ ಯು.ಎ.ಇ ಘಟಕದ ಗೌರವ ಅಧ್ಯಕ್ಷರಾಗಿ ನ್ಯಾಯವಾದಿ ಇಬ್ರಾಹಿಂ ಖಲೀಲ್ ಅರಿಮಲೆ ರವರನ್ನು ಅಧ್ಯಕ್ಷರಾಗಿ ಅಮರ್ ಕಲ್ಲುರಾಯವರನ್ನು ಪ್ರಧಾನ ಕಾರಿಯದರ್ಶಿಯನ್ನಾಗಿ ಇಬ್ರಾಹಿಂ ಬಾಜೂರಿಯವರನ್ನು ಕೊಶಾಧಿಕಾರಿಯಾಗಿ ಅಶ್ರಫ್ ಭಾಯಾರ್ ರವರನ್ನು ನೇಮಿಸಲಾಯಿತು.
ಗಡಿನಾಡು ಸಾಂಸ್ಕೃತಿ ಅಕಾಡೆಮಿ ಕೇಂದ್ರ ಸಮಿತಿಯ ಕೋಶಾಧಿಕಾರಿ ಝೆಡ್ ಎ ಕಯ್ಯಾರ್ ಹಾಗೂ ಉದ್ಯಮಿ ಶಿವಶಂಕರ ನೆಕ್ರಾಜೆ ಯೂಸುಫ್ ಶೇಣಿ… ಪಿ ಪಿ,ಮಂಜುನಾಥ ಕಾಸರಗೋಡು,ಅಲಿ ಸಾಗ್ ವಿಜಯಕುಮಾರ ಶೆಟ್ಟಿ ಗಾಣದಮೂಲೆ ಮುಂತಾದವರು ಉಪಸ್ಥಿತರಿದ್ದರು ಹಾಗೂ ಯು ಎ ಇ ಪ್ರವಾಸದಲ್ಲಿರುವ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಸೋಮಣ್ಣ ಬೇವಿನಮರದರವರನ್ನುಹಾಗೂ ಪ್ರಾಧಿಕಾರದ ಸದ್ಯಸರನ್ನು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯು ಎ ಇ ಘಟಕದ ವತಿಯಿಂದ ಎಲ್ಲಾ ಪದಾಧಿಕಾರಿಗಳು ಸೇರಿ ಸನ್ಮಾನಿಸಿದರು.