Published
8 hours agoon
By
Akkare Newsಭಾರತದಲ್ಲೇ ಪ್ರಪ್ರಥಮ ಬಾರಿಗೆ ನಡೆಯುವ ಈ ಚಾಂಪಿಯನ್ ಶಿಪ್ನಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ: ವಿಜೇತ್ ಕುಮಾರ್
ಮಾಣಿ: ರಾಷ್ಟ್ರಮಟ್ಟ ಮತ್ತು ಅಂತರಾಷ್ಟ್ರೀಯ ಮಟ್ಟದ ಡಾಡ್ಜ್ಬಾಲ್ ಚಾಂಪಿಯನ್ಶಿಪ್ 2025 ಹಾಗೂ ಮೂರನೇ ರಾಜ್ಯಮಟ್ಟದ ಕರ್ನಾಟಕ ಡಾಡ್ಜ್ಬಾಲ್ ಚಾಂಪಿಯನ್ ಶಿಪ್ ಏ. 25,26, ಮತ್ತು 27 ರಂದು ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಯಿತು.
ಪತ್ರಿಕಾಗೋಷ್ಠಿಯಲ್ಲಿ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಡಾಡ್ಜ್ಬಾಲ್ಶಿಪ್ 2025 ಇದರ ಸಂಘಟನಾ ಕಾರ್ಯದರ್ಶಿ ವಿಜೇತ್ ಕುಮಾರ್ ಮಾತನಾಡ ಏ. 25 ರಂದು ರಾಜ್ಯಮಟ್ಟದ ಡಾಡ್ಜ್ಬಾಲ್ ಚಾಂಪಿಯನ್ ಶಿಪ್ ನಡೆಯಲಿದೆ. 26 ಮತ್ತು 27 ರಂದು ರಾಷ್ಟ್ರಮಟ್ಟ ಮತ್ತು ಅಂತರಾಷ್ಟ್ರೀಯ ಮಟ್ಟದ ಡಾಡ್ಜ್ಬಾಲ್ ಚಾಂಪಿಯನ್ ಶಿಪ್ ನಡೆಯಲಿದೆ. ಭಾರತದಲ್ಲೇ ಪ್ರಪ್ರಥಮ ಬಾರಿಗೆ ನಡೆಯುವ ಈ ಚಾಂಪಿಯನ್ ಶಿಪ್ನಲ್ಲಿ ರಾಜ್ಯ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ದಿ. ಉದಯ್ ಚೌಟ ಒಳಾಂಗಣ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ನಡೆಯಲಿದೆ. ಜೊತೆಗೆ ಈ ಚಾಂಪಿಯನ್ ಶಿಪ್ ನ ಜೊತೆಯಲ್ಲಿ ಆಹಾರ ಪ್ರಿಯರಿಗೆ ಫುಡ್ಫೆಸ್ಟ್ ನ್ನು ಆಯೋಜನೆ ಮಾಡಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಭಾಗವಹಿಸುವಂತೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಡಾಡ್ಜ್ಬಾಲ್ ಚಾಂಪಿಯನ್ಶಿಪ್ ನ ಸಂಚಾಲಕರು ಸಚಿನ್ ಎ.ಎಸ್, ಮಾಣಿ ಬಾಲವಿಕಾಸ ಎಜ್ಯುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಮಹೇಶ್ ಶೆಟ್ಟಿ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರು ಸುದೀಪ್ ಕುಮಾರ್ ಶೆಟ್ಟಿ, ಶಿಕ್ಷಕಿ ಸುಪ್ರಿಯಾ ಡಿ ಉಪಸ್ಥಿತರಿದ್ದರು.