Connect with us

ಇತರ

ವಲಸೆ ಕಾರ್ಮಿಕರ ಮಾಹಿತಿ ಕೇಳಿದ ರಾಜ್ಯ ಗೃಹ ಇಲಾಖೆ: ಅಚ್ಚರಿಯ ಅಂಶ ಬಯಲು

Published

on

ಐದು ವರ್ಷದ ಬಾಲಕಿಯನ್ನು ಅಪಹರಿಸಿ, ಹತ್ಯೆ ಮಾಡಿದ್ದ ಆರೋಪಿ ರಿತೇಶ್​ ಕುಮಾರ್​​ ಹುಬ್ಬಳ್ಳಿ ಪೊಲೀಸರ ಗುಂಡಿಗೆ ಮೃತಪಟ್ಟಿರುವ ಪ್ರಕರಣ ನಡೆದ ಬೆನ್ನಲ್ಲೇ ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಮಂಡಳಿ ಅಲರ್ಟ್ ಆಗಿದೆ. ವಲಸಿಗ ಕಾರ್ಮಿಕರ ಲೆಕ್ಕ ಪರಿಶೀಲನೆಗೆ ಇಳಿದ ಇಲಾಖೆಗೆ ಅಚ್ಚರಿಯ ಮಾಹಿತಿ ತಿಳಿದಿದೆ. ರಾಜ್ಯದಲ್ಲಿ ಎಷ್ಟು ಜನ ವಲಸಿಗ ಕಾರ್ಮಿಕರಿದ್ದಾರೆ? ಅವರ ಹಿನ್ನೆಲೆ ಏನು? ಎಂಬಿತ್ಯಾದಿ ಮಾಹಿತಿಗಳನ್ನು ನೀಡುವಂತೆ ಗೃಹ ಇಲಾಖೆ ಆದೇಶಿಸಿತ್ತು. ಈ ವೇಳೆ ಲೆಕ್ಕಪರಿಶೀಲನೆ ಮಾಡಿದ ಅಧಿಕಾರಿಗಳಿಗೆ ಅಚ್ಚರಿಯ ವಿಚಾರ ತಿಳಿದಿದೆ.

 

ರಾಜ್ಯದಲ್ಲಿ ಐದು ಲಕ್ಷಕ್ಕೂ ಅಧಿಕ ವಲಸಿಗ ಕಾರ್ಮಿಕರಿದ್ದಾರೆ. ಆದರೆ, ಇದುವರೆಗೆ ನೋಂದಣಿಯಾಗಿದ್ದು ಕೇವಲ 46 ಸಾವಿರ ಕಾರ್ಮಿಕರು ಮಾತ್ರ. ಈ ನಡುವೆ ರಾಜ್ಯದಲ್ಲಿ ವಲಸಿಗ ಕಾರ್ಮಿಕರಿಂದ ಕ್ರೈಂ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವ ವಲಸಿಗರ ಪತ್ತೆ ಕಾರ್ಯ ಪೊಲೀಸ್ ಇಲಾಖೆಗೆ ಕಷ್ಟಕರವಾಗಿದೆ. ಅಪರಾಧಿಗಳನ್ನು ಪತ್ತೆ ಹಚ್ಚುವುದು ತಲೆನೋವಾಗಿ ಪರಿಣಮಿಸಿದೆ.

 

ಹೀಗಾಗಿ, ವಲಸೆ ಕಾರ್ಮಿಕರ ಮೇಲೆ ನಿಗಾ ಇಟ್ಟಿರುವ ಇಲಾಖೆ, ಕಾರ್ಮಿಕರ ಹಿನ್ನೆಲೆ, ಆಧಾರ್ ಕಾರ್ಡ್ ಮಾಹಿತಿ ಕಲೆ ಹಾಕಲು ಮುಂದಾಗಿದೆ.

 

 

ವಲಸಿಗ ಕಾರ್ಮಿಕರಿಗಿರುವ ನಿಯಮಗಳು:

ವಲಸಿಗ ಕಾರ್ಮಿಕರು ಕೆಲಸಕ್ಕೆಂದು ರಾಜ್ಯಕ್ಕೆ ಆಗಮಿಸಿದರೇ, ಮೊದಲಿಗೆ ನೋಂದಣಿ ಆಗಬೇಕು. ಕಾರ್ಮಿಕರು ತೊರೆಯುವ ರಾಜ್ಯ, ಹೋಗುವ ರಾಜ್ಯ ಎರಡು ಕಡೆ ಕೂಡ ಕಡ್ಡಾಯವಾಗಿ ಹೆಸರು ನೋಂದಯಿಸಬೇಕು. ಇ ಪೋರ್ಟಲ್ ಆ್ಯಪ್​ನಲ್ಲಿ ನೋಂದಣಿ ಮಾಡಿಸಬೇಕು. ಆದರೆ 2023 ಅಕ್ಟೋಬರ್​ನಿಂದ 2025ರ ಏಪ್ರಿಲ್ ತನಕ ಕೇವಲ 46,616 ಜನ ಮಾತ್ರ ನೋಂದಾಯಿಸಿಕೊಂಡಿದ್ದಾರೆ.

 

ಒಟ್ಟಿನಲ್ಲಿ ಕಳೆದ ವಾರ ಹುಬ್ಬಳ್ಳಿಯಲ್ಲಿ ನಡೆದ ಘಟನೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು ಇದರಿಂದ ಎಚ್ಚೆತ್ತು ಕೊಂಡಿರುವ ಇಲಾಖೆ ಇದೀಗ ವಲಸೆ ಕಾರ್ಮಿಕರ ಸಂಖ್ಯೆ ಮತ್ತು ಪರಿಶೀಲನೆ ಮಾಡಿ ಗೃಹ ಇಲಾಖೆಗೆ ನೀಡಲು ಮುಂದಾಗಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement