Published
8 hours agoon
By
Akkare Newsಮಂಗಳೂರು, ಏಪ್ರಿಲ್ 21: ಮಂಗಳೂರಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಶನಿವಾರ (ಏ.20) ದಂದು ಎರಡು ಗ್ರಾಮಸ್ಥರ ನಡುವೆ ಬೆಂಕಿಯ ಭೀಕರ ಅಗ್ನಿಕೇಳಿ ಕಾದಾಟ ನಡೆಯಿತು.
ಕಟೀಲು ದುರ್ಗಾಪರಮೇಶ್ವರಿಯ ಜಾತ್ರೆ ಹಿನ್ನೆಲೆಯಲ್ಲಿ ಈ ಆಚರಣೆಯನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ.
ಹರಕೆ ತೀರಿಸಲು ಅತ್ತೂರು ಮತ್ತು ಕೊಡೆತ್ತೂರು ಗ್ರಾಮಸ್ಥರು ಬೆಂಕಿ ಆಟವನ್ನು ಆಡುತ್ತಾರೆ. ಕಟೀಲು ಶ್ರೀ ದುರ್ಗೆಯ ಜಾತ್ರೆಯ ಕೊನೆಯ ದಿನ ಈ ಆಚರಣೆ ನಡೆಯುತ್ತದೆ. ದುಷ್ಟಶಕ್ತಿಗಳನ್ನು ಸಂಹರಿಸಿದ ದೇವಿಯನ್ನು ಸಂತೃಪ್ತಿಪಡಿಸಲು ಬೆಂಕಿ ಆಟ ಆಡಲಾಗುತ್ತದೆ.