Published
5 hours agoon
By
Akkare Newsಪುತ್ತೂರು: ನ್ಯಾಯಾಲಯದ ಆದೇಶದಂತೆ ಪಹಣಿಯಲ್ಲಿ ಹೆಸರು ಬದಲಾವಣೆಗೆಂದು 2024ರ ಅಕ್ಟೋಬರ್ ತಿಂಗಳಲ್ಲಿ ಕೊಟ್ಟಿರುವ ಅರ್ಜಿ ಈ ದಿನದವರೆಗೆ ವಿಲೇವಾರಿ ಆಗದಿರುವ ಬಗ್ಗೆ ಡಾ| ಎಸ್.ಎನ್. ಅಮೃತ್ ಮಲ್ಲ ಅವರು ದ.ಕ. ಜಿಲ್ಲಾಧಿಕಾರಿ ಮತ್ತು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಆರ್ಆರ್ಟಿಸಿಆರ್ 176/24-25, ಐಆರ್ 1961/24-25 ಅರ್ಜಿ ಎಪ್ರಿಲ್ ತಿಂಗಳಲ್ಲಿ ತಾಲುಕು ಕಚೇರಿಗೆ ರವಾನೆ ಆಗಿದೆ. ಸದ್ರಿ ಅರ್ಜಿ ವಿಲೇವಾರಿ ಬಗ್ಗೆ ಪುತ್ತೂರು ತಹಶೀಲ್ದಾರ್ ಮತ್ತು ಕಚೇರಿ ಗುಮಾಸ್ತರಲ್ಲಿ ವಿಚಾರಿಸಿದರೂ, ಕಡತ ಬಂದದ್ದನ್ನು ಪರಿಶೀಲಿಸಿಲ್ಲ. ವಿಳಂಬಕ್ಕೆ ತಹಶೀಲ್ದಾರ್ ನೇರ ಹೊಣೆಗಾರರಾಗಿದ್ದಾರೆ ಎಂದು ಅವರು ಅರ್ಜಿಯಲ್ಲಿ ದೂರಿದ್ದಾರೆ..