Published
17 hours agoon
By
Akkare NewsKFC ಕ್ರಿಕೆಟರ್ಸ್ ಕರಾಯ ಇದರ ವತಿಯಿಂದ ಕರಾಯದಲ್ಲಿ ಜರಗಿದ, 46 ತಂಡಗಳ ಹೊನಲು ಬೆಳಕಿನ,ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾ ಕೂಟದ ಪ್ರಥಮ ಪ್ರಶಸ್ತಿಯನ್ನು ನೆಕ್ಕಿಲಾಡಿ F U N ತಂಡ ತನ್ನ ಮುಡಿಗೇರಿಸಿಕೊಂಡಿತು.
ದಿನಾಂಕ 27/04/2025 ಮತ್ತು 28/04/2025 ರಂದು ಜರಗಿದ ಎರಡು ದಿನಗಳ ಕ್ರಿಕೆಟ್ ಕ್ರೀಡಾ ಕೂಟದಲ್ಲಿ 46 ತಂಡಗಳು ಭಾಗವಹಿಸಿದ್ದು,ಪಂದ್ಯಕೂಟದುದ್ದಕ್ಕೂ ಅಸಮಾನ್ಯ ಆಟವನ್ನಾಡಿದ FUN ನೆಕ್ಕಿಲಾಡಿ ತಂಡ ಅಜೇಯವಾಗಿ ಪೈನಲ್ ಹಂತಕ್ಕೆ ತಲುಪಿ,ಫೈನಲ್ ನಲ್ಲಿ ಮದ್ದಡ್ಕ ಕ್ರಿಕೆಟರ್ಸ್ ತಂಡವನ್ನು ಮಣಿಸಿ,ಕರಾಯ ಟ್ರೋಫಿ 2025 ನ್ನು ತನ್ನದಾಗಿಸಿಕೊಂಡಿತು.ಈ ಮೂಲಕ 50025-00 ರೂಪಾಯಿ ನಗದನ್ನೂ ಗೆದ್ದುಕೊಂಡಿತು. ಪಂದ್ಯದುದ್ದಕ್ಕೂ ಅತ್ಯುತ್ತಮ ಆಟವಾಡಿದ ಶಾಕಿರ್,ಜಮಾಲ್ ,ಹೈದರ್,ಫೈಝಲ್ ಯುನಿಕ್ ಗೆಲುವಿನ ಪ್ರಮುಖ ರೂವಾರಿಗಳಾಗಿ ಮೂಡಿ ಬಂದರು.ಪಂದ್ಯಾಕೂಟದಲ್ಲಿ ನೆಕ್ಕಿಲಾಡಿಯ ಹಿರಿಯ ಆಟಗಾರರಾದ ರಿಝ್ವಾನ್ AYM ,ಶರೀಫ್ ನೆಕ್ಕಿಲಾಡಿ, ಮುಸ್ತಫಾ ಪಿ.ಟಿ. ನೆಕ್ಕಿಲಾಡಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.