Published
7 hours agoon
By
Akkare Newsಅಹ್ಮದಾಬಾದ್: ಅಮುಲ್ ಸಂಸ್ಥೆಯ ಎಲ್ಲ ಮಾದರಿಯ ಹಾಲಿನ ಬೆಲೆ ಗುರುವಾರದಿಂದ ದೇಶಾದ್ಯಂತ ಪ್ರತೀ ಲೀ.ಗೆ 2 ರೂ. ಹೆಚ್ಚಳವಾಗುತ್ತಿದೆ. ಅಮುಲ್ ಮಾಲಕ ಸಂಸ್ಥೆಯಾದ ಮಾರ್ಕೆಟಿಂಗ್ ಫೆಡರೇಶನ್ ಈ ಬಗ್ಗೆ ಬುಧವಾರ ಘೋಷಿಸಿದೆ. ಪ್ರತೀ ಲೀ.ಗೆ 2 ರೂ. ಹೆಚ್ಚಳವಾಗಿರುವುದು ಎಂಆರ್ಪಿಯಲ್ಲಿ ಶೇ.3-4ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ. ಇದು ಇನ್ನಿತರ ಆಹಾರ ಪದಾರ್ಥಗಳ ಸರಾಸರಿ ಹಣದುಬ್ಬರಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆ ಎಂದು ಅಮುಲ್ ಪ್ರಕಟನೆಯಲ್ಲಿ ತಿಳಿಸಿದೆ. ಬೆಲೆ ಹೆಚ್ಚಳದ ಬಳಿಕ, 500 ಎಂಎಲ್ನ ಅಮುಲ್ ಗೋಲ್ಡ್ ಹಾಲಿನ ಬೆಲೆ ಗುಜರಾತ್ನಲ್ಲಿ 34 ರೂ. ಆಗಲಿದೆ.