Published
11 months agoon
By
Akkare News
ಇಂದು ತೋಡಿನ ಮಣ್ಣು ತೆಗೆಯುವ ಕೆಲಸ ಪ್ರಾರಂಭ.. ಕಂದಾಯ ಇಲಾಖೆ ಮತ್ತು ಕೋಡಿಂಬಾಡಿ ಗ್ರಾಮ ಪಂಚಾಯತ್ ಯ ಕೆಲಸ ಕಾರ್ಯಕ್ಕೆ ಗ್ರಾಮಸ್ಥರ ಸ್ಲಾಘನೆ
ಪುತ್ತೂರು: ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ವ್ಯಾಪಕ ಹಾನಿ ಸಂಭವಿಸಿರುವ ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿಂಬಾಡಿ ಮತ್ತು ಬೆಳ್ಳಿಪ್ಪಾಡಿ ಗ್ರಾಮಗಳಿಗೆ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತೆ ಕು.ಸ್ಟೆಲ್ಲಾ ವರ್ಗೀಸ್ ಜೂ.7ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಬಳಿಕ ಅವರು ಕೋಡಿಂಬಾಡಿ ಗ್ರಾಮ ಪಂಚಾಯತ್ ಕಚೇರಿಗೆ ಭೇಟಿ ನೀಡಿ ಪ್ರಾಕೃತಿಕ ವಿಕೋಪದಿಂದ ಉಂಟಾದ ನಷ್ಟದ ಕುರಿತು ಮಾಹಿತಿ ಸಂಗ್ರಹಿಸಿದರಲ್ಲದೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.



ಧರೆ ಬಿದ್ದು ತೋಡಿಗೆ ಬಿದ್ದ ಮಣ್ಣನ್ನು ತೆಗೆಯಲು ಸ್ಥಳೀಯ ನಿವಾಸಿ ಡಾ.ಎ. ಕೆ. ರೈ ಯವರ ಖಾಸಗಿ ಜಾಗದ ತೋಟದಲ್ಲಿ ಮಾತ್ರ ಅವಕಾಶ ಇದ್ದುದರಿಂದ, ಕೂಡಲೇ ಅವರಿಗೆ ಹಿಟಾಚಿ ಬರಲು ಅವಕಾಶ ಮಾಡಿಕೊಡಲು ನೋಟಿಸ್ ಮಾಡಿದರು, ನೋಟಿಸಿಗೆ ಸ್ಪಂದಿಸಿದ ಡಾ.ಎ ಕೆ ರೈ ರವರು ಅವಕಾಶ ಮಾಡಿಕೊಟ್ಟರು. ಹೀಗೆ ಕೆಲಸ ಕಾರ್ಯ ಪ್ರಾರಂಭವಾಗಿದೆ. ಗ್ರಾಮ ಲೆಕ್ಕಾಧಿಕಾರಿ ಶರಣ್ಯ , ಉಪ್ಪಿನಂಗಡಿ ಹೋಬಳಿ ಕಂದಾಯ ನಿರೀಕ್ಷಕರಾದ ಚಂದ್ರನಾಯಕ್ ಮತ್ತುಕೋಡಿಂಬಾಡಿ ಗ್ರಾಮ ಪಂಚಾಯತ್ ಕಾರ್ಯ ನಿರ್ವಹಿಸುತ್ತಿದೆ.









