Connect with us

ರಾಜಕೀಯ

ಕಡಬ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಗೆ ಪದಾಧಿಕಾರಿಗಳ ನೇಮಕ ಅಧ್ಯಕ್ಷ: ಯತೀಶ್‌ಕುಮಾರ್‌ ಬಾನಡ್ಕ,ಉಪಾಧ್ಯಕ್ಷರು: ಸುಬ್ರಮಣ್ಯ ರಾವ್‌, ಗಫಾ‌ರ್ ಹಾಜಿ, ಖಜಾಂಜಿ:ಮುರಳಿ ಮೂರಾಜೆ

Published

on

ಕಡಬ: ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್‌ರವರ ಸೂಚನೆಯಂತೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ವಿನಯ ಕುಮಾರ್ ಸೊರಕೆಯವರ ಆದೇಶದಂತೆ ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಉಸ್ತುವಾರಿ ಸುಧೀರ್ ಕುಮಾರ್ ಮುರೋಳಿ ಅವರೊಂದಿಗೆ ಸಮಾಲೋಚಿಸಿ ಕಡಬ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಗೆ ಪದಾಧಿಕಾರಿಗಳ ನೇಮಕ ಮಾಡಿ ದ.ಕ. ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿ ಆದೇಶಿಸಿದ್ದಾರೆ. ಯತೀಶ್ ಕುಮಾ‌ರ್ ಬಾನಡ್ಕ ಸಂಪ್ಯಾಡಿ ರಾಮಕುಂಜ ಇವರನ್ನು ಕಡಬ ಬ್ಲಾಕ್ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಕೆಪಿಸಿಸಿ ಪ್ರಚಾರ ಸಮಿತಿ ಈಗಾಗಲೇ ನೇಮಕ ಮಾಡಿತ್ತು. ಸಮಿತಿ ಉಪಾಧ್ಯಕ್ಷರಾಗಿ ಸುಬ್ರಮಣ್ಯ ರಾವ್ ಶಾರದಾ ನಿಲಯ ಸುಬ್ರಮಣ್ಯ, ಗಫಾರ್ ಹಾಜಿ ಸೊಂಪಾಡಿ ಸವಣೂರು, ಖಜಾಂಜಿಯಾಗಿ ಮುರಳಿ ಮೂರಾಜೆ ಕೋಡಿಂಬಾಳ ಅವರನ್ನು ಇದೀಗ ನೇಮಕ ಮಾಡಿ ಆದೇಶಿಸಲಾಗಿದೆ. ಉಳಿದಂತೆ ಬ್ಲಾಕ್ ಸಂಯೋಜಕರಾಗಿ ಅವೀನ್ ಬಂಗೇರ ಪಲ್ಲತ್ತಡ್ಕ ಬಲ್ಯ, ಮೀನಾಕ್ಷಿ ಬದಿಗುಡ್ಡೆ 102 ನೆಕ್ಕಿಲಾಡಿ, ಜುನೈದ್‌ ಕೆಮ್ಮಾರ ಶಾಲೆ ಹತ್ತಿರ ಕೊಲ, ರಾಜು ಗೋಳಿಯಡ್ಕ ರೆಂಜಿಲಾಡಿ, ಜಂಟಿ ಸಂಯೋಜಕರಾಗಿ ಗುರುರಾಜ್ ಕೇವಳ ಕುಂತೂರು, ಆಕಾಶ್ ಕೋಳಿಗದ್ದೆ ಕಾಣಿಯೂರು, ಮಧುಸೂದನ್ ಭಟ್ ಕಡ್ಯ ಕೊಣಾಜೆ, ರಾಯ್ ಟಿ.ಎಂ. ಕಲ್ಲರ್ಬ ಇಚ್ಚಂಪಾಡಿ, ಕಾರ್ಯಕಾರಿಣಿ ಸದಸ್ಯರಾಗಿ ಸೀನ ಮೂಲೆತ್ತಮಜಲು, ಮಹಮ್ಮದ್ ಫೈಝಲ್ ಮುಜೂರು ಸುಂಕದಕಟ್ಟೆ ಐತ್ತೂರು, ಬೇಬಿ ಉಮೇಶ್ ನಾಯ್ಕ ಸಣ್ಣಾರ ಬಿಳಿನೆಲೆ, ಭಾಸ್ಕರ ಕೊರಪಣೆ ಬಳ್ಳ, ಮಿನಿ ಜಾನ್ಸನ್ ಸೈಂಟ್ ಜಾರ್ಜ್ ಪಿಯು ಕಾಲೇಜು ಹತ್ತಿರ ನೆಲ್ಯಾಡಿ, ವಸಂತ ಬಿ.ಕೆ.ಡೆಮ್ಮಾಯಿಲ ಎಡಮಂಗಲ, ಯಾಕುಬ್ ಬನಾರಿ ಬೆಳಂದೂರು, ಜುನೈಫ್‌ ಕೋಲ್ಪೆ ಕೊಣಾಲು, ಚರಣ್‌ರಾಜ್‌ ಕೆ.ಕುಂಟೋಡಿ ಕುಟ್ರುಪ್ಪಾಡಿ, ರವಿಕುಮಾ‌ರ್ ಪುಯಿಲ ಕೊಂಬಾರು, ಸುಂದರ ಪೂಜಾರಿ ಬೈಲಕೆರೆ ಶರವೂರು ಅವರನ್ನು ಆಯ್ಕೆ ಮಾಡಲಾಗಿದೆ. ಪದಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಕೂಡಲೇ ವಹಿಸಿಕೊಂಡು ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರ, ವಿಧಾನಸಭೆ ಸ್ಪರ್ಧಿಸಿದ ಅಭ್ಯರ್ಥಿಗಳ ಹಾಗೂ ಕಾಂಗ್ರೆಸ್‌ ಹಿರಿಯ ಮುಖಂಡರುಗಳ ಸಲಹೆ ಸೂಚನೆಗಳನ್ನು ಗಣನೆಗೆ ತೆಗೆದುಕೊಂಡು ಕಾಂಗ್ರೆಸ್ ಪಕ್ಷದ ಇತಿಹಾಸ, ಸಿದ್ಧಾಂತ, ಕಾರ್ಯಕ್ರಮಗಳ ಬಗ್ಗೆ ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸಗಳ ಅರಿವು ಮೂಡಿಸುವ ಮತ್ತು ರಾಜ್ಯ ಸರಕಾರದ ಜನಪರ ಕಾರ್ಯಕ್ರಮಗಳನ್ನು ಪ್ರಚುರ ಪಡಿಸಲು ಕಾರ್ಯ ಯೋಜನೆಯನ್ನು ಹಾಕಿಕೊಂಡು ಪಕ್ಷದ ಸಂಘಟನೆಯನ್ನು ಮಾಡಲು ಆದೇಶದಲ್ಲಿ ಸೂಚಿಸಲಾಗಿದೆ.

 
 

Continue Reading
Click to comment

Leave a Reply

Your email address will not be published. Required fields are marked *

Advertisement