Published
55 minutes agoon
By
Akkare News

ಅವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ತಮ್ಮದೇ ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಅಶಕ್ತರಿಗೆ ವೀಲ್ ಚೆಯರ್ ವಿತರಿಸಿ ಮಾತನಾಡಿದರು.
ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಶಾಸಕರು ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಅಶಕ್ತರನ್ನು ಗುರುತಿಸಿ ಪ್ರತೀ ವರ್ಷ ವೀಲ್ ಚೆಯರ್ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಯಾರೂ ಕಷ್ಟದಿಂದ ಇರಬಾರದು ಎಂಬ ಧ್ಯೇಯದಿಂದ ಈ ಕಾರ್ಯ ಮಾಡುತ್ತಿದ್ದಾರೆ. ಮನೆಯಿಲ್ಲದ ಬಡವರಿಗೆ ನಿವೇಶನ ಕೊಡುವ ಯೋಜನೆಯ ಮೂಲಕ ಅವರಿಗೊಂದು ಸೂರು ಕಲ್ಪಿಸುವ ಯೋಜನೆಯ ಜೊತೆಗೆ ತೀರಾ ಸಂಕಷ್ಟದಲ್ಲಿರುವ ಕುಟುಂಬಕ್ಕೆ ನೆರವಾಗುತ್ತಿರುವುದು ಅಭಿನಂದನಾರ್ಹವಾಗಿದೆ ಎಂದು ಹೇಳಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ ಮಾತನಾಡಿ ತನ್ನ ಹುಟ್ಟು ಹಬ್ಬದಂದು ಬಡವರಿಗೆ ನೆರವು ನೀಡುವ ಮೂಲಕ ಶಾಸಕರು ಮಾನವೀಯ ಗುಣವನ್ನು ಮೈಗೂಡಿಸಿಕೊಂಡಿರುವುದು ದೇವರು ಮೆಚ್ಚುವ ಕೆಲಸವಾಗಿದೆ ಎಂದು ಹೇಳಿದರು. ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಮಾತನಾಡಿ ಶಾಸಕರು ಎಲ್ಲಾ ಕ್ಷೇತ್ರದಲ್ಲೂ ಮಿಂಚುತ್ತಿದ್ದಾರೆ. ಬಡವರ ನೋವಿಗೆ ಸ್ಪಂದಿಸುವುದು ಅವರ ದೊಡ್ಡ ಗುಣವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಕೃಷ್ಣಪ್ರಸಾದ್ ಆಳ್ವ, ಪದ್ಮನಾಭ ಪೂಜಾರಿ ಸಣ್ಣಗುತ್ತು, ನಿಹಾಲ್ ಪಿ ಶೆಟ್ಟಿ, ಜಯಪ್ರಕಾಶ್ ಬದಿನಾರ್, ರಿತೇಶ್ ಶೆಟ್ಟಿ ಕೌಡಿಚ್ಚಾರ್ ಉಪಸ್ಥಿತರಿದ್ದರು. ರೈ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಸ್ವಾಗತಿಸಿದರು. ರಾಮಣ್ಣ ಪಿಲಿಂಜ ಕಾರ್ಯಕ್ರಮ ನಿರ್ವಹಿಸಿದರು.
ಶಾಸಕ ಅಶೋಕ್ ರೈ ಅವರ ಹುಟ್ಟು ಹಬ್ಬದಂದು ಅವರ ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಮೂಲಕ ೫ ಮಂದಿ ಅಶಕ್ತರಿಗೆ ವೀಲ್ ಚೆಯರ್ ವಿತರಣೆ ಮಾಡಿದ್ದೇವೆ. ತಾಲೂಕಿನನೈಜ ಅಶಕ್ತರನ್ನು ಗುರುತಿಸಿ ಅವರಿಗೆ ವೀಲ್ ಚೆಯರ್ ವಿತರಣೆ ಮಾಡಿದ್ದೇವೆ. ಕಳೆದ ಹಲವು ವರ್ಷಗಳಿಂದ ನಾವು ಈ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದು ,ನೊಂದವರಿಗೆ ಸಾಂತ್ವನ ನೀಡುವ ಮೂಲಕ ಶಾಸಕರ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿದ್ದೇವೆ. ಸುದೇಶ್ ಶೆಟ್ಟಿ, ಟ್ರಸ್ಟ್ ಕಾರ್ಯಾಧ್ಯಕ್ಷರು


