Published
15 hours agoon
By
Akkare News
ಕ್ಷೇತ್ರದ ಕಾನೂನು ಸಲಹೆಗಾರರಾದ ಶ್ರೀ ರಕ್ಷಿತ್ ಶಿವರಾಮ್ ಅವರ ನೇತೃತ್ವದಲ್ಲಿ ಸಚಿವರನ್ನು ಭೇಟಿಯಾದ ನಿಯೋಗವು, ಗೆಜ್ಜೆಗಿರಿ ಕ್ಷೇತ್ರದಲ್ಲಿ ನಡೆಯುತ್ತಿರುವ ದೇಯೀ ಬೈದೆತಿ ಆಯುರ್ವೇದಿಕ್ ಕೇಂದ್ರದ ಕಾಮಗಾರಿಯ ಪ್ರಸ್ತುತ ಪ್ರಗತಿ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಹಾಗೂ ಕೇಂದ್ರದ ಮಹತ್ವದ ಕುರಿತು ಸಚಿವರಿಗೆ ವಿವರಿಸಿತು.
ಈ ಸಂದರ್ಭದಲ್ಲಿ ಕ್ಷೇತ್ರದ ಗೌರವಾಧ್ಯಕ್ಷರಾದ ಪೀತಾಂಬರ ಹೆರಾಜೆ, ಅಧ್ಯಕ್ಷರಾದ ರವಿ ಪೂಜಾರಿ ಚಿಲಿಂಬಿ, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸಂಜೀವ ಪೂಜಾರಿ ಬಿರುವ, ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ್, ಹರೀಶ್ ಕೆ ಪೂಜಾರಿ ಬೈಲಬರಿ, ನಾರಾಯಣ ಮಚ್ಚಿನ, ಸತೀಶ್ ಕಾಶಿಪಟ್ಟಣ ಸೇರಿದಂತೆ ಕ್ಷೇತ್ರದ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಆಗೆಜ್ಜೆಗಿರಿ ಕ್ಷೇತ್ರದ ಅಭಿವೃದ್ಧಿ ಹಾಗೂ ದೇಯೀ ಬೈದೆತಿ ಆಯುರ್ವೇದಿಕ್ ಕೇಂದ್ರದ ಉದ್ದೇಶಗಳ ಸಾಕಾರಕ್ಕೆ ಸರ್ಕಾರದ ಸಹಕಾರ ದೊರೆಯುವ ವಿಶ್ವಾಸವನ್ನು ಕ್ಷೇತ್ರದ ಪದಾಧಿಕಾರಿಗಳು ವ್ಯಕ್ತಪಡಿಸಿದರು.



