Connect with us

ಇತರ

ಗೆಜ್ಜೆಗಿರಿ ಆಯುರ್ವೇದಿಕ್ ಕೇಂದ್ರದ ಪ್ರಗತಿ ಕುರಿತು ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ

Published

on

ಗೆಜ್ಜೆಗಿರಿ ಕ್ಷೇತ್ರದಲ್ಲಿ ನಿರ್ಮಾಣಗೊಳ್ಳುತ್ತಿರುವ ದೇಯೀ ಬೈದೆತಿ ಆಯುರ್ವೇದಿಕ್ ಕೇಂದ್ರದ ಕಾಮಗಾರಿಯ ಪ್ರಗತಿ ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಕರ್ನಾಟಕ ರಾಜ್ಯ ಸರ್ಕಾರದ ಶಿಕ್ಷಣ ಸಚಿವರಾದ ಶ್ರೀ ಮಧು ಬಂಗಾರಪ್ಪ ಅವರನ್ನು ಗೆಜ್ಜೆಗಿರಿ ಕ್ಷೇತ್ರದ ಪದಾಧಿಕಾರಿಗಳು ಭೇಟಿಯಾಗಿ ಮಾಹಿತಿ ನೀಡಿ, ಅಗತ್ಯ ಸಹಕಾರ ನೀಡುವಂತೆ ಮನವಿ ಸಲ್ಲಿಸಿದರು. ಕ್ಷೇತ್ರದ ಕಾನೂನು ಸಲಹೆಗಾರರಾದ ಶ್ರೀ ರಕ್ಷಿತ್ ಶಿವರಾಮ್ ಅವರ ನೇತೃತ್ವದಲ್ಲಿ ಸಚಿವರನ್ನು ಭೇಟಿಯಾದ ನಿಯೋಗವು, ಗೆಜ್ಜೆಗಿರಿ ಕ್ಷೇತ್ರದಲ್ಲಿ ನಡೆಯುತ್ತಿರುವ ದೇಯೀ ಬೈದೆತಿ ಆಯುರ್ವೇದಿಕ್ ಕೇಂದ್ರದ ಕಾಮಗಾರಿಯ ಪ್ರಸ್ತುತ ಪ್ರಗತಿ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಹಾಗೂ ಕೇಂದ್ರದ ಮಹತ್ವದ ಕುರಿತು ಸಚಿವರಿಗೆ ವಿವರಿಸಿತು. ಈ ಸಂದರ್ಭದಲ್ಲಿ ಕ್ಷೇತ್ರದ ಗೌರವಾಧ್ಯಕ್ಷರಾದ ಪೀತಾಂಬರ ಹೆರಾಜೆ, ಅಧ್ಯಕ್ಷರಾದ ರವಿ ಪೂಜಾರಿ ಚಿಲಿಂಬಿ, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸಂಜೀವ ಪೂಜಾರಿ ಬಿರುವ, ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ್, ಹರೀಶ್ ಕೆ ಪೂಜಾರಿ ಬೈಲಬರಿ, ನಾರಾಯಣ ಮಚ್ಚಿನ, ಸತೀಶ್ ಕಾಶಿಪಟ್ಟಣ ಸೇರಿದಂತೆ ಕ್ಷೇತ್ರದ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. ಆಗೆಜ್ಜೆಗಿರಿ ಕ್ಷೇತ್ರದ ಅಭಿವೃದ್ಧಿ ಹಾಗೂ ದೇಯೀ ಬೈದೆತಿ ಆಯುರ್ವೇದಿಕ್ ಕೇಂದ್ರದ ಉದ್ದೇಶಗಳ ಸಾಕಾರಕ್ಕೆ ಸರ್ಕಾರದ ಸಹಕಾರ ದೊರೆಯುವ ವಿಶ್ವಾಸವನ್ನು ಕ್ಷೇತ್ರದ ಪದಾಧಿಕಾರಿಗಳು ವ್ಯಕ್ತಪಡಿಸಿದರು.

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version