ಸರ್ವೆ… ಸರಕಾರಿ ಪ್ರೌಢಶಾಲೆ ಕಲ್ಪಣೆ ಸರ್ವೆ ಯಲ್ಲಿ 80 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯದ್ಯಕ್ಷರಾದ ಸಿದ್ದೀಕ್ ಸುಲ್ತಾನ್ ಧ್ವಜಾರೋಹಣ ನೆರವೇರಿಸಿದರು. ಗ್ರಾಮ ಪಂಚಾಯತ್ ಅದ್ಯಕ್ಷರಾದ ಚಂದ್ರಶೇಖರ್ , ನಿಕಟಪೂರ್ವ ಕಾರ್ಯಾದ್ಯಕ್ಷರಾದ ಶಿವನಾಥ ರೈ , ಕರುಣಾಕರ್ ಗೌಡ , ಮುಖ್ಯಶಿಕ್ಷಕಿ ಉಮಾವತಿ. ಎಲ್. ಅವರು ಶುಭ ಹಾರೈಸಿ ಮಾತನಾಡಿದರು. ಸಭೆಯಲ್ಲಿ ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ಅಝೀಝ್ ರೆಂಜಲಾಡಿ , ಹನೀಫ್ ಕಲ್ಪಣೆ ಹಾಗು ಅಧ್ಯಾಪಕ ವೃಂದ ಹಾಗು ವಿದ್ಯಾರ್ಥಿಗಳು , ವಿಧ್ಯಾರ್ಥಿಗಳ ಪೋಷಕರು , ಶಾಲಾಭಿವೃದ್ದಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.