Connect with us

ಇತರ

ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ (ರಿ ) ಕ್ಕೆ ನಿವೇಶನ ಮಂಜೂರಾತಿಗೆ ಜಿಲ್ಲಾಧಿಕಾರಿ ಯವರಿಗೆ ಸಂಘದ ಅಧ್ಯಕ್ಷ ಎಸ್. ಸಂಶುದ್ದೀನ್ ಮನವಿ

Published

on

ಆಧುನಿಕ ಸುಳ್ಯದ ಅಮರಶಿಲ್ಪಿ ಡಾ. ಕುರುಂಜಿ ವೆಂಕಟ್ರಮಣ ಗೌಡರ ಜನ್ಮ ದಿನಾಚರಣೆಯ ಅಂಗವಾಗಿ ವಿವಿಧ ಸಮಾಜ ಸೇವಾಕಾರ್ಯಗಳನ್ನು ಕಳೆದ 16 ವರ್ಷ ಗಳಿಂದ ಮಾಡಿ ಕೊಂಡು ಬರುತ್ತಿರುವ ಸುಳ್ಯದ ಪ್ರಮುಖ ರನ್ನು ಒಳಗೊಂಡ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ ಕಾರ್ಯ ಚಟುವಟಿಕೆಗಳನ್ನು ಕೇಂದ್ರೀಕರಿಸಲು ಹಾಗೂ ಸುಳ್ಯದ ಸೌಹಾರ್ದತೆ ಮತ್ತು ಸಾಮರಸ್ಯದ ಸಂಕೇತ ವಾದ ಸಂಘದ ಕಾರ್ಯಕ್ರಮ ಗಳನ್ನು ಪರಿಣಾಮ ಕಾರಿಯಾಗಿ ಅನುಷ್ಠಾನ ಗೊಳಿಸಲು ಸುಳ್ಯ ನಗರ ವ್ಯಾಪ್ತಿಯಲ್ಲಿ 10 ಸೆಂಟ್ಸ್ ನಿವೇಶನ ಒದಗಿಸಿಕೊಡಬೇಕಾಗಿ ಮನವಿ ಪತ್ರವನ್ನು ಇಂದು ಸುಳ್ಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರಾದ ದರ್ಶನ್ ಹೆಚ್. ವಿ. ಯವರಿಗೆ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ ದ ಅಧ್ಯಕ್ಷ ಎಸ್. ಸಂಶುದ್ದೀನ್ ರವರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯು. ಟಿ. ಖಾದರ್ ರವರ ಪತ್ರವನ್ನು ಡಿ ಸಿ ಯವರಿಗೆ ಹಸ್ತಾoತರಿಸಿದರು ಈ ಸಂದರ್ಭದಲ್ಲಿ ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ,ದಿನೇಶ್ ಅಂಬೆಕಲ್ಲು, ರಕ್ಷಿತ್ ದೊಡ್ಡಡ್ಕ, ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಮೊದಲಾದವರು ಉಪಸ್ಥಿತರಿದ್ದರು.

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version