ಪುತ್ತೂರು: ದಾರಂದಕುಕ್ಕುವಿನ ಸೈಫುಲ್ ಹುದಾ ಮದರಸದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಿ. ಕೆ. ಉಮ್ಮರ್ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಶುಭಾರಂಭ ನೀಡಿದರು. ಈ ಸಂದರ್ಭದಲ್ಲಿ ಮುಹೀನುಲ್ ಇಸ್ಲಾಂ ಜಮಾತ್ ಕಮಿಟಿ ಅಧ್ಯಕ್ಷರಾದ ಎ. ಕೆ. ಬಶೀರ್ ಹಾಜಿ, ದಾರಂದಕುಕ್ಕು ಎಸ್. ಕೆ. ಎಸ್. ಎಸ್. ಎಫ್. (SKSSF) ಅಧ್ಯಕ್ಷರಾದ ಡಿ. ಕೆ. ಅಶ್ರಫ್ ಹಾಜಿ, ಎಸ್. ಕೆ. ಎಸ್. ಎಸ್. ಎಫ್. ಪುತ್ತೂರು ಕ್ಲಸ್ಟರ್ ಉಪಾಧ್ಯಕ್ಷರಾದ ಡಿ. ಕೆ. ಬಶೀರ್ ಮುಸ್ಲಿಯಾರ್, ಮದರಸ ಉಸ್ತಾದರಾದ ಯಾಕೂಬ್ ದಾರಿಮಿ ಹಾಗೂ ನೂರುಲ್ ಹುದಾ ಸ್ವಲಾತ್ ಕಮಿಟಿಯ ಕಾರ್ಯದರ್ಶಿ ನಿಜಾಮ್ ಅಶ್ರಫ್ ಕಾಸಿಂ. ಅಜೀಜ್ ಕಾಸಿಂ ಇಸ್ಮಾಯಿಲ್ ಸೇಡಿಯಾಫ್ ಕೆ ಎಚ್. ಹಮೀದ್ ಡಿ ಕೆ. ಹಮೀದ್ ಡಿ ಕೆ. ಸಮೀರ್ ಹಾಜಿ ಡಿ ಕೆ. ಮುಹಮ್ಮದ್ ಹಾಜಿ ಪಿ ಎಸ್ ಕೆ. ರಫೀಕ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮದರಸದ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಮುದಾಯದ ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮವು ಅರ್ಥಪೂರ್ಣವಾಗಿ ಜರುಗಿತು. ಕಾರ್ಯಕ್ರಮದ ಅಂಗವಾಗಿ ಡಿ. ಕೆ. ಖಲಂದರ್ ಶಾಫಿ, ಎ. ಕೆ. ಬಶೀರ್ ಹಾಜಿ, ಉಮರ್ ಡಿ. ಕೆ., ಡಿ. ಕೆ. ಇರ್ಷಾದ್ ಮತ್ತು ಕೆ. ಶಾಫಿ ಅವರು ಸಿಹಿ ತಿಂಡಿ ವಿತರಿಸಿ ಶುಭಕೋರಿದರು.ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕಮಿಟಿಯ ಕಾರ್ಯದರ್ಶಿಯವರು ಆತ್ಮೀವಾಗಿ ಸ್ವಾಗತಿಸಿ, ಕೃತಜ್ಞತೆ ಸಲ್ಲಿಸಿದರು.