Connect with us

ಇತರ

ಮಾನವೀಯತೆಗೆ ಸಾಕ್ಷಿಯಾದ ಪುತ್ತೂರು ಸರಕಾರಿ ಆಸ್ಪತ್ರೆ: ರೋಟರಿ ಯುವದಿಂದ ಅನಾಥ ಮಹಿಳೆಗೆ ರಕ್ಷಣೆ ಹಾಗೂ ಪುನರ್ವಸತಿ!

Published

on

ಪುತ್ತೂರು: ನಮ್ಮ ರೋಟರಿ ಕ್ಲಬ್ ಪುತ್ತೂರು ಯುವ ಸಂಸ್ಥೆಯು ಮತ್ತೊಂದು ಅರ್ಥಪೂರ್ಣ ಸೇವಾ ಕಾರ್ಯಕ್ಕೆ ಸಾಕ್ಷಿಯಾಗಿದೆ. ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 20 ದಿನಗಳಿಂದ ಆಸರೆಯಿಲ್ಲದೆ ಚಿಕಿತ್ಸೆ ಪಡೆಯುತ್ತಿದ್ದ ಸುಮಾರು 52 ವರ್ಷದ ಅನಾಥ, ಗಂಭೀರ ಅನಾರೋಗ್ಯ ಪೀಡಿತ ಮಹಿಳೆಯನ್ನು ಮಂಗಳೂರಿನ ಕೈಕಂಬದ ‘ಜೀವದಾನ ಚಾರಿಟೇಬಲ್ ಟ್ರಸ್ಟ್’ ಪುನರ್ವಸತಿ ಕೇಂದ್ರಕ್ಕೆ ಸುರಕ್ಷಿತವಾಗಿ ಸೇರ್ಪಡೆಗೊಳಿಸಲಾಯಿತು. ಕಾರ್ಯಾಚರಣೆಯ ಪ್ರಮುಖಾಂಶಗಳು: ಅಚ್ಚುಕಟ್ಟಾದ ನೇತೃತ್ವ ‘ಸುವರ್ಣ ಕನ್ನಡಿಗ’ ಪ್ರಶಸ್ತಿ ಪುರಸ್ಕೃತರಾದ ಪುತ್ತೂರು ಉಮೇಶ್ ನಾಯಕ್ ಅವರು ಈ ಸಂಪೂರ್ಣ ರಕ್ಷಣಾ ಕಾರ್ಯಾಚರಣೆಯ ಸಾರಥ್ಯ ವಹಿಸಿದ್ದರು. ನಮ್ಮ ಸಂಸ್ಥೆಯ ಹೆಮ್ಮೆ – ಡಾ. ಯಧುರಾಜ್: ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಹಾಗೂ ನಮ್ಮ ಸಂಸ್ಥೆಯ ಸದಸ್ಯರಾದ ಡಾ. ಯಧುರಾಜ್ ಅವರು ಮಹಿಳೆಗೆ ಸೂಕ್ತ ಚಿಕಿತ್ಸೆ ನೀಡಿ, ಪುನರ್ವಸತಿಗೆ ದಾರಿ ಮಾಡಿಕೊಟ್ಟು ಮಾದರಿಯಾಗಿದ್ದಾರೆ. ಭಾವಪೂರ್ಣ ಬೀಳ್ಕೊಡುಗೆ: 20 ದಿನಗಳ ಕಾಲ ಸ್ವಂತ ಕುಟುಂಬದಂತೆ ಆರೈಕೆ ಮಾಡಿದ್ದ ಆಸ್ಪತ್ರೆಯ ಸಿಬ್ಬಂದಿ ಹಾಗೂ ಒಳರೋಗಿಗಳು ಮಹಿಳೆಯನ್ನು ಕಣ್ಣೀರಿಡುತ್ತಾ ಭಾವುಕರಾಗಿ ಬೀಳ್ಕೊಟ್ಟರು. ದಾನಿಗಳ ಉದಾರ ಕೊಡುಗೆ: ಜೀವದಾನ ಆಶ್ರಮಕ್ಕೆ ದಾನಿಗಳಿಂದ 50 ಬಾತ್ ಟವೆಲ್ ಹಾಗೂ ಊಟದ ಅಕ್ಕಿ ಹಸ್ತಾಂತರಿಸಲಾಯಿತು. ಸಿಹಿ ವಿತರಣೆ: ಈ ಭಾವುಕ ಕ್ಷಣದಲ್ಲಿ ಸಮುದಾಯ ಸೇವಾ ಮುಖ್ಯಸ್ಥ ಅಭಿಷ್ ಅವರು ಸಿಬ್ಬಂದಿ ಹಾಗೂ ರೋಗಿಗಳಿಗೆ 3 ಕೆಜಿ ಸಿಹಿ ತಿಂಡಿ ವಿತರಿಸಿ ಸಂತಸ ಹಂಚಿಕೊಂಡರು. ತಮ್ಮ ತುರ್ತು ಕೆಲಸದ ನಡುವೆಯೂ ಸಕಾಲಿಕವಾಗಿ ಭಾಗಿಯಾದ ಕಾರ್ಯದರ್ಶಿ ಅನುಪ್ ಅವರ ಸೇವೆ ಅಭಿನಂದನೀಯ. ಈ ಪುನರ್ವಸತಿ ಕಾರ್ಯಕ್ಕೆ ಕೈಜೋಡಿಸಿ ಪುನರ್ವಸತಿ ಮಾಡಲು ಮನವೊಲಿಸಿದ ಆಪ್ತ ಸಮಾಲೋಚಕರಾದ ತಾರಾನಾಥ್, ಪುತ್ತೂರು ಮಹಿಳಾ ಪೊಲೀಸ್ ಠಾಣೆ,ಪುತ್ತೂರು CDPO ಶ್ರೀ ಹರೀಶ್ ಹಾಗೂ ಶ್ರೀಮತಿ ಮಂಗಳ ಕಾಳೆ ಹಾಗೂ ಕಚೇರಿ ಸಿಬ್ಬಂದಿಗಳಿಗೆ , ಗೃಹರಕ್ಷಕ ದಳದ ಚೈತ್ರ ಹಾಗೂ ಪ್ರತ್ಯಕ್ಷ-ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು.

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version