ಪುತ್ತೂರು: ಶಾಸಕ ಅಶೋಕ್ ರೈ ಅವರ ಕನಸಿನ ಕೂಸಾದ ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸಂಬಂದಿಸಿದಂತೆ ಇಂದು 574.79 ಕೋಟಿ ರೂ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆಯಲಿದೆ. ಇಂದು ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ಈ ಅನುನೋದನೆ ದೊರೆಯುವದರೊಂದಿಗೆ ಮೆಡಿಕಲ್ ಕಾಲೇಜು ನಿರ್ಮಾಣ ಪ್ರಕ್ರಿಯೆ ಮತ್ತಷ್ಟು ಚುರುಕುಗೊಳ್ಳಲಿದೆ.ಆಡಳಿತಾತ್ಮಕ ಅನುಮೋದನೆ ಕೋರಿ ಕಳೆದ ವಾರ ಶಾಸಕ ಅಶೋಕ್ ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಇಂದು ಮುಖ್ಯಮಂತ್ರಿಗಳು ಈ ಅನುಮೋದನೆ ನೀಡಲಿದ್ದಾರೆ. ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಿಯೇ ಸಿದ್ದ ಎಂಬ ಶಾಸಕ ಅಶೋಕ್ ರೈ ಅವರ ಚುನಾವಣಾ ಪೂರ್ವ ಭರವಸೆಯಾಗಿತ್ತು. ಈ ಭರವಸೆ ಕಳೆದ ಬಜೆಟ್ ಅಧಿವೇಶನದಲ್ಲಿ ಮೆಡಿಕಲ್ ಕಾಲೇಜು ಘೋಷಣೆಯೊಂದಿಗೆ ಈಡೇರಿತ್ತು ಇದೀಗ ಅನುದಾನವೂ ಬಿಡುಗಡೆಯಾಗುವುದರ ಮೂಲಕ ಜಿಲ್ಲೆಯ ಜನರ ಬಹುವರ್ಷದ ಕನಸು ನನಸಾಗಲಿದೆ. ಇದು ಶಾಸಕ ಅಶೋಕ್ ರೈ ಅವರ ಕನಸಿನ ಯೋಜನೆಗಳಲ್ಲಿ ಒಂದಾಗಿದೆ.