ಆಗಸ್ಟ್ 23 ನೇ ಆದಿತ್ಯವಾರ ಬೆಳಿಗ್ಗೆ 10.30ಕ್ಕೆ ಸರಿಯಾಗಿ ದೇವಳದಲ್ಲಿ ಶ್ರೀದೇವಿಗೆ ಶುದ್ಧ ಎಳ್ಳೆಣ್ಣೆ ಸಮರ್ಪಣಾ ಕಾರ್ಯಕ್ರಮವು.ದೇವಾಲಯದಲ್ಲಿ ನಡೆಯಿತು .ಪ್ರಶ್ನಚಿಂತನೆಯಲ್ಲಿ ತಿಳಿದ ಪ್ರಕಾರ ಶುದ್ಧ ಎಳ್ಳೆಣ್ಣೆ ದೇವರಿಗೆ ಸಮರ್ಪಣೆ ಬಹಳ ಮುಖ್ಯ ವಾಗಿದ್ದು, ಭಕ್ತರಿಂದ ಕ್ರೋಡಿಕರಣ, ಮತ್ತು ಹರಕೆ ರೂಪದಲ್ಲಿ ಕೂಡ ಸಂಗ್ರಹಣೆ ಮಾಡುವುದರಿಂದ, ಶ್ರೀ ದೇವಿಯು ಸಂತುಸ್ಟ ರಾಗುತ್ತಾರೆಂದು ನಂಬಿಕೆಯಿಂದ ಮತ್ತು ದೇವರಿಗೆ ಎಳ್ಳೆಣ್ಣೆಯಿಂದ (ಎಳ್ಳಿನ ಎಣ್ಣೆ) ದೀಪ ಹಚ್ಚುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ, ಮನಸ್ಸಿಗೆ ಶಾಂತಿ ಸಿಗುತ್ತದೆ ಮತ್ತು ದೇವಾನುದೇವತೆಗಳ ವಿಶೇಷ ಕೃಪೆಯಿಂದ ನಕಾರಾತ್ಮಕ ಶಕ್ತಿಗಳು ದೂರವಾಗಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ,ಎಂದು ಭಕ್ತರು, ವ್ಯವಸ್ಥಾಪನ ಸಮಿತಿ ಸೇರಿ ಶುದ್ಧ ಎಳ್ಳೆಣ್ಣೆಯನ್ನು ದೇವಿಗೆ ಅರ್ಪಿಸಿದರು. ಈ ಕಾರ್ಯಕ್ರಮಕ್ಕೆ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ, ಶಾಸಕರು ಆದ ಅಶೋಕ್ ಕುಮಾರ್. ರೈ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾದ ಕೇಶವ ಭಂಡಾರಿ ಕೈಪ, ಪ್ರಧಾನ ಅರ್ಚಕರಾದ ರಾಮಕೃಷ್ಣ ಭಟ್ ಸಹಿತ ಅನೇಕ ಭಕ್ತಾದಿಗಳು, ಸಮಿತಿ ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಶುದ್ಧ ಎಳ್ಳೆಣ್ಣೆ ದರ 1ಲೀಟರ್ 500ರೂಪಾಯಿ 200 ml 100ರೂಪಾಯಿ 100ml 50 ರೂಪಾಯಿ ದೇವಾಲಯದಲ್ಲಿ ಲಭ್ಯ ವಿರುತ್ತದೆ ಎಂದು ದೇವಾಲಯದ ಸಮಿತಿಯವರು ತಿಳಿಸಿರುತ್ತಾರೆ.