Connect with us

ಧಾರ್ಮಿಕ

ಚಾರ್ವಾಕ : ಎ.22 – 25ರವರೆಗೆ ಪ್ರತಿಷ್ಠಾ ಕಲಶೋತ್ಸವ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಹಾಗೂ ಪರಿವಾರ ದೈವಗಳ ನೇಮೋತ್ಸವ

Published

on

ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕೋರಿಯಾನ ಸೇವಾ ಟ್ರಸ್ಟ್ (ರಿ) ಚಾರ್ವಾಕ, ಎ.22- 25ರವರೆಗೆ ಪ್ರತಿಷ್ಠಾ ಕಲಶೋತ್ಸವ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಹಾಗೂ ಪರಿವಾರ ದೈವಗಳ ನೇಮೋತ್ಸವ ಜರಗಲಿದೆ.

ಕಾರ್ಯಕ್ರಮಗಳ ವಿವರ
22-04-2026 ನೇ ಬುಧವಾರ ಬೆಳಿಗ್ಗೆ ಗಂಟೆ 8.00 ರಿಂದ ದೇವತಾ ಪ್ರಾರ್ಥನೆ , ಬೆಳಿಗ್ಗೆ ಗಂಟೆ 10.00 ಗಂಟೆಯಿಂದ ಹಸಿರು ಹೊರೆಕಾಣಿಕೆ-ಚಾರ್ವಕ ಶ್ರೀ ಕಪಿಲೇಶ್ವರ ದೇವಸ್ಥಾನದಿಂದ ಬೆಳಿಗ್ಗೆ ಗಂಟೆ 10.00 ರಿಂದ ಪುಣ್ಯಾಹ ಪಂಚಗಮ್ಮ ಶುದ್ಧಿ, ಗಣಪತಿ ಪೂಜೆ, ತೋರಣ ಮುಹೂರ್ತ, ಆಶ್ಲೇಷ ಬಲಿ, ಗಣಪತಿ ಹೋಮ, ಬಾಲಾಲಯದಲ್ಲಿ ದೈವಗಳ ಶುದ್ದಿ, ನಂತರ ಕಲಶಾಭಿಷೇಕ, ಅನುಜ್ಞಾ ಪ್ರಾರ್ಥನೆ, ಪೂಜೆ, ಪ್ರಸಾದವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 4.00 ರಿಂದ ಪುಣ್ಯಾಹ, ಪಂಚಗವ್ವ, ಅಘೋರ ಹೋಮ, ಸಪ್ತಶುದ್ಧಿ, ಪ್ರಸಾದಶುದ್ಧಿ, ವಾಸ್ತು ಹೋಮ ರಾಕೋಘ್ನ ಹೋಮ, ವಾಸ್ತುಪೂಜೆ ದಿಕ್ಷಾಲಕ ಬಲಿ ಬಿಂಬಶುದ್ಧಿ, ಆದಿವಾಸ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ಗಂಟೆ 8.00ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ ಗಂಟೆ 8.30 ರಿಂದ ಅನ್ನಸಂಸತರ್ಪಣೆ ನಡೆಯಲಿದೆ.

ದಿನಾಂಕ: 23-04-2026 ಗುರುವಾರದಂದು ಬೆಳಿಗ್ಗೆ ಗಂಟೆ 5:30ಕ್ಕೆ ಪುಣ್ಯಹ ವಾಚನ-ಪಂಚಗವ್ಯ ಶುದ್ಧಿ, ಗಣಪತಿ ಹೋಮ, ಕಲಶಪ್ರತಿಷ್ಠೆ, ಪ್ರದಾನ ಹೋಮ, ಬೆಳಿಗ್ಗೆ ಗಂಟೆ 8:02ಕ್ಕೆ ವೃಷಭ ಲಗ್ನದಲ್ಲಿ ಧರ್ಮದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಬೆಳಿಗ್ಗೆ ಗಂಟೆ 11:00ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ಸಂಜೆ ಗಂಟೆ 4.00ರಿಂದ ದೈವಗಳ ಭಂಡಾರ ತೆಗೆಯುವುದು. ರಾತ್ರಿ ಗಂಟೆ 7,00ರಿಂದ ಇಷ್ಟದೇವತೆ, ಮೈಸಂದಾಯ, ಪಂಜುರ್ಲಿ ದೈವದ ನೇಮ ನಡೆಯಲಿದೆ. ರಾತ್ರಿ ಗಂಟೆ 8:00ರಿಂದ : ಅನ್ನಸಂತರ್ಪಣೆ ನಡೆಯಲಿದೆ.

ದಿನಾಂಕ: 24-04-2026ನೇ ಶುಕ್ರವಾರದಂದು ಬೆಳಿಗ್ಗೆ ಗಂಟೆ 8.00ರಿಂದ ಕೊಡಮಣಿತ್ತಾಯ ದೈವದ ನೇಮ, ಮಧ್ಯಾಹ್ನ ಗಂಟೆ 11.00 ರಿಂದ ಬಟ್ಟಲು ಕಾಣಿಕೆ ಮತ್ತು ಕೈಕಾಣಿಕೆ, ಪ್ರಸಾದ ವಿತರಣೆ , ಮಧ್ಯಾಹ್ನ ಗಂಟೆ 1.00ರಿಂದ ಸಾರ್ವಜನಿಕ ಅನ್ನಸಂತರ್ಪಣೆ , ಸಂಜೆ ಗಂಟೆ 4.00ಕ್ಕೆ ಶ್ರೀ ಬ್ರಹ್ಮಬೈದರ್ಕಳ ಭಂಡಾರ ತೆಗೆಯುವುದು . ರಾತ್ರಿ ಗಂಟೆ 7.00ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ , ರಾತ್ರಿ ಗಂಟೆ 9.00 ಕ್ಕೆ ಗರಡಿ ಇಳಿಯುವುದು ,ರಾತ್ರಿ ಗಂಟೆ 10.30ಕ್ಕೆ ಬೈದೇರುಗಳು ಮೀಸೆ ಧರಿಸುವುದು, ಮಾಣಿಬಾಲೆ ಗರಡಿ ಇಳಿಯುವುದು, ಕೋಟಿ ಚೆನ್ನಯರ ದರ್ಶನ, ಪಾತ್ರಿಗಳ ಸೇಟ್, ಬೈದೇರುಗಳ ಸೇಟ್ ನಡೆಯಲಿದೆ.
ದಿನಾಂಕ: 25-04-2026ನೇ ಶನಿವಾರದಂದು ಬೆಳಿಗ್ಗೆ ಗಂಟೆ 6.00ಕ್ಕೆ ಗಂಧ ಪ್ರಸಾದ ವಿತರಣೆ, ನಂತರ ಕಂಚಿಕಲ್ಲಿಗೆ ಕಾಯಿ ಒಡೆಯುವುದು,ಬೆಳಿಗ್ಗೆ ಗಂಟೆ 9.00ಕ್ಕೆ ಗುಳಿಗ ದೈವದ ನೇಮ, ಬೆಳಿಗ್ಗೆ ಗಂಟೆ 10.00ರಿಂದ ಬಿಂದು ಸೇವೆ ನಡೆಯಲಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version