Published
3 hours agoon
By
Akkare News
ಪುತ್ತೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ‘ಶ್ರೀ ದೇವಿ ಮಹಾತ್ಮೆ’ ಪೌರಾಣಿಕ ಕಥಾಭಾಗದ 8ನೇ ವರ್ಷದ ಯಕ್ಷಗಾನ ಮಾ.18ರಂದು ಸಂಜೆ ಗಂಟೆ 5-3೦ಕ್ಕೆ ಸರಿಯಾಗಿ ನೈತ್ತಾಡಿ ಕಲ್ಲಗುಡ್ಡೆಯಲ್ಲಿ ನಡೆಯಲಿದೆ. ರಾತ್ರಿ ಗಂಟೆ 8-30ರಿಂದ ಶ್ರೀದೇವಿಯ ಪ್ರಸಾದ ರೂಪದ ಅನ್ನಸಂತರ್ಪಣೆ ನಡೆಯಲಿದ್ದು ಕಲಾಭಿಮಾನಿಗಳು, ಶ್ರೀದೇವಿಯ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾ ಮಾತೆ ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಆಯೋಜಕರಾಗಿರುವ ಚಂದ್ರಶೇಖರ ಕೆ ತಿಳಿಸಿದ್ದಾರೆ.