Connect with us

ಇತರ

ನಮ್ಮ ತುಳುನಾಡ್ ಟ್ರಸ್ಟ್(ರಿ) ಕುಡ್ಲ. ಇದರ ಪ್ರಧಾನ ಸಲಹಾ ಸಮಿತಿಯಮಹಾಸಭೆ ಪ್ರಧಾನ ಸಲಹಾ ಸಮಿತಿಯ ಅಧ್ಯಕ್ಷ‌ರಾಗಿ ಅಮಿತ ಅಶ್ವಿನ್ ಆಯ್ಕೆ

Published

on

ನಮ್ಮ ತುಳುನಾಡ್ ಟ್ರಸ್ಟ್(ರಿ) ಕುಡ್ಲ. ಇದರ ಪ್ರಧಾನ ಸಲಹಾ ಸಮಿತಿಯ ಸಭೆಯು ದಿನಾಂಕ 30-8-2026 ಆದಿತ್ಯವಾರ ನಗರದ ವುಡ್‌ಲ್ಯಾಂಡ್ ಹೋಟೆಲ್ ನಲ್ಲಿ ನಡೆಯಿತು. ಸಭೆಯಲ್ಲಿ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಟ್ರಸ್ಟಿನ ಸ್ಥಾಪಕರಾದ ಜಿ.ವಿ.ಎಸ್ ಉಳ್ಳಾಲ್ ಮಾತನಾಡಿ ಟ್ರಸ್ಟ್ ಇದುವರೆಗೆ ಮಾಡಿದ ಕೆಲಸ‌ಗಳು ಹಾಗೂ ಇನ್ನು ಮುಂದೆ ಮಾಡಬೇಕಾದ ಕೆಲಸಗಳ ಬಗ್ಗೆ ತಿಳಿಸಿದರು. ಯಕ್ಷಗಾನ ಕಲಾವಿದರು ಸರಪಾಡಿ ಅಶೋಕ ಶೆಟ್ಟಿ ಮಾತನಾಡಿ ರಾಜಕೀಯ ಇಚ್ಛಾಶಕ್ತಿ‌ ಇಲ್ಲದೆ ಇರುವುದರಿಂದ ತುಳುಭಾಷೆಗೆ ಕೇಂದ್ರ ಹಾಗೂ ರಾಜ್ಯದ ಸ್ಥಾನಮಾನ ಕೈ ತಪ್ಪುತಿದೆ ಈ ವಿಷಯದಲ್ಲಿ ತುಳುನಾಡಿನ ರಾಜಕಾರಣಿಗಳು ಪಕ್ಷಾತೀತವಾಗಿ ಕೆಲಸ ಮಾಡಬೇಕು ಎಂದರು. ಸಭೆಯಲ್ಲಿ ಪ್ರಧಾನ ಸಲಹಾ ಸಮಿತಿಯ ಅಧ್ಯಕ್ಷ‌ರಾಗಿ ಅಮಿತ ಅಶ್ವಿನ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಶ್ರೀ ದೇವೆಂದ್ರ ಹೆಗ್ಡೆ ಕೊಕ್ರಾಡಿ ಇವರನ್ನು ಟ್ರಸ್ಟಿಯಾಗಿ ನೇಮಕ ಮಾಡಲಾಯಿತು. ಗೌರವಾಧ್ಯಕ್ಷ‌ರಾಗಿ ಸರಪಾಡಿ ಅಶೋಕ ಶೆಟ್ಟಿ, ಗೌರವ ಸಲಹೆಗಾರರಾಗಿ ಪ್ರತಿಭ ಕುಳಾಯಿ ಮತ್ತು ವಿನಯಕುಮಾರ್ ಶೆಟ್ಟಿ ಗುರುಪುರ, ಉಪಾಧ್ಯಕ್ಷ‌ರಾಗಿ ದೀಪಕ್ ಪಿಲಾರ್ ಹಾಗೂ ಕಸ್ತೂರಿ ಪಂಜ, ಕಾರ್ಯಧ್ಯಕ್ಷರಾಗಿ ರೋಹಿತಾಶ್ವ ಮತ್ತು ದಿನೇಶ್ ರೈ ಕಡಬ, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಿಕ ರೈ, ಜೊತೆ ಕಾರ್ಯದರ್ಶಿಯಾಗಿ ಕುಶಾಲಾಕ್ಷಿ ಕಣ್ವತೀರ್ಥ, ಸಂಘಟನಾ ಕಾರ್ಯದರ್ಶಿ‌ಯಾಗಿ ಉಷಾರಾಜ್, ಕ್ರೀಡಾ ಕಾರ್ಯದರ್ಶಿಯಾಗಿ ರೂಪೇಶ್ ರೈ ಮರುವಂತಿಲ, ಸಾಂಸ್ಕೃತಿಕ ಸಂಚಾಲಕರಾಗಿ ವಿಜಯಲಕ್ಷ್ಮಿ ಶೆಟ್ಟಿ ಕಟೀಲ್ ಮತ್ತು ಶಾಂತಿ ಜತ್ತನ್ನ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದಯಾನಂದ ಶೆಟ್ಟಿ, ಸಂಶೋಧನಾ ಸಂಚಾಲಕರಾಗಿ ವಿಕಾಶ್ ಅಳಪೆ ಇವರನ್ನು ಅಯ್ಕೆ ಮಾಡಲಾಯಿತು. ಎಲ್ಲರೂ ತಮ್ಮ ತಮ್ಮ ಅಭಿಪ್ರಾಯವನ್ನು ತಿಳಿಸಿದ ಮೇಲೆ ಸಭೆಯಲ್ಲಿ ಪ್ರಮುಖ ಅಜೆಂಡವಾಗಿ ತುಳು ಭಾಷೆಯನ್ನು ಕರ್ನಾಟಕದ ರಾಜ್ಯ‌ದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವಂತೆ ಹಾಗೂ ಕೇಂದ್ರ ಸರ್ಕಾರದ ಸಂವಿಧಾನ‌ದ ಎಂಟನೇ ಪರಿಛ್ಚೇದದಲ್ಲಿ ಸೇರಿಸುವ ಬಗ್ಗೆ ನಿರ್ಣಾಯಿಸಲಾಯಿತು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತವಾಗಿ ಸರಕಾರಕ್ಕೆ ಒತ್ತಡ ಹಾಕಿ ಕೆಲಸ ಮಾಡುವುದೆಂದು ತಿರ್ಮಾನಿಸಲಾಯಿತು. ಕಾರ್ಯಾಧ್ಯಕ್ಷ‌ರಾದ ರೋಹಿತಾಶ್ವ ಇವರು ದನ್ಯವಾದ ನೀಡಿ ಸಮಿತಿ ಸಭೆಯನ್ನು ಸಮಾರೋಪಗೊಳಿಸಲಾಯಿತು. ಯಕ್ಷಬೊಳ್ಳಿ ಕಡಬ ದಿನೇಶ್ ರೈ ಕಾರ್ಯಾಧ್ಯಕ್ಷರು ನಮ್ಮ ತುಳುನಾಡ್ ಟ್ರಸ್ಟ್ (ರಿ) ಕುಡ್ಲ ☎️ 9901833532

 
 

Continue Reading
Click to comment

Leave a Reply

Your email address will not be published. Required fields are marked *

Advertisement