Published
9 hours agoon
By
Akkare News
ಕಾರ್ಯಾಚರಣೆಯ ಪ್ರಮುಖಾಂಶಗಳು: ಅಚ್ಚುಕಟ್ಟಾದ ನೇತೃತ್ವ ‘ಸುವರ್ಣ ಕನ್ನಡಿಗ’ ಪ್ರಶಸ್ತಿ ಪುರಸ್ಕೃತರಾದ ಪುತ್ತೂರು ಉಮೇಶ್ ನಾಯಕ್ ಅವರು ಈ ಸಂಪೂರ್ಣ ರಕ್ಷಣಾ ಕಾರ್ಯಾಚರಣೆಯ ಸಾರಥ್ಯ ವಹಿಸಿದ್ದರು. ನಮ್ಮ ಸಂಸ್ಥೆಯ ಹೆಮ್ಮೆ – ಡಾ. ಯಧುರಾಜ್: ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಹಾಗೂ ನಮ್ಮ ಸಂಸ್ಥೆಯ ಸದಸ್ಯರಾದ ಡಾ. ಯಧುರಾಜ್ ಅವರು ಮಹಿಳೆಗೆ ಸೂಕ್ತ ಚಿಕಿತ್ಸೆ ನೀಡಿ, ಪುನರ್ವಸತಿಗೆ ದಾರಿ ಮಾಡಿಕೊಟ್ಟು ಮಾದರಿಯಾಗಿದ್ದಾರೆ.
ಭಾವಪೂರ್ಣ ಬೀಳ್ಕೊಡುಗೆ: 20 ದಿನಗಳ ಕಾಲ ಸ್ವಂತ ಕುಟುಂಬದಂತೆ ಆರೈಕೆ ಮಾಡಿದ್ದ ಆಸ್ಪತ್ರೆಯ ಸಿಬ್ಬಂದಿ ಹಾಗೂ ಒಳರೋಗಿಗಳು ಮಹಿಳೆಯನ್ನು ಕಣ್ಣೀರಿಡುತ್ತಾ ಭಾವುಕರಾಗಿ ಬೀಳ್ಕೊಟ್ಟರು. ದಾನಿಗಳ ಉದಾರ ಕೊಡುಗೆ: ಜೀವದಾನ ಆಶ್ರಮಕ್ಕೆ ದಾನಿಗಳಿಂದ 50 ಬಾತ್ ಟವೆಲ್ ಹಾಗೂ ಊಟದ ಅಕ್ಕಿ ಹಸ್ತಾಂತರಿಸಲಾಯಿತು.
ಸಿಹಿ ವಿತರಣೆ: ಈ ಭಾವುಕ ಕ್ಷಣದಲ್ಲಿ ಸಮುದಾಯ ಸೇವಾ ಮುಖ್ಯಸ್ಥ ಅಭಿಷ್ ಅವರು ಸಿಬ್ಬಂದಿ ಹಾಗೂ ರೋಗಿಗಳಿಗೆ 3 ಕೆಜಿ ಸಿಹಿ ತಿಂಡಿ ವಿತರಿಸಿ ಸಂತಸ ಹಂಚಿಕೊಂಡರು. ತಮ್ಮ ತುರ್ತು ಕೆಲಸದ ನಡುವೆಯೂ ಸಕಾಲಿಕವಾಗಿ ಭಾಗಿಯಾದ ಕಾರ್ಯದರ್ಶಿ ಅನುಪ್ ಅವರ ಸೇವೆ ಅಭಿನಂದನೀಯ.
ಈ ಪುನರ್ವಸತಿ ಕಾರ್ಯಕ್ಕೆ ಕೈಜೋಡಿಸಿ ಪುನರ್ವಸತಿ ಮಾಡಲು ಮನವೊಲಿಸಿದ ಆಪ್ತ ಸಮಾಲೋಚಕರಾದ ತಾರಾನಾಥ್, ಪುತ್ತೂರು ಮಹಿಳಾ ಪೊಲೀಸ್ ಠಾಣೆ,ಪುತ್ತೂರು CDPO ಶ್ರೀ ಹರೀಶ್ ಹಾಗೂ ಶ್ರೀಮತಿ ಮಂಗಳ ಕಾಳೆ ಹಾಗೂ ಕಚೇರಿ ಸಿಬ್ಬಂದಿಗಳಿಗೆ , ಗೃಹರಕ್ಷಕ ದಳದ ಚೈತ್ರ ಹಾಗೂ ಪ್ರತ್ಯಕ್ಷ-ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು.



