Published
1 hour agoon
By
Akkare News
ಯುವವಾಹಿನಿಯ ಪ್ರಮುಖ ಧ್ಯೇಯಗಳಾದ ವಿದ್ಯೆ, ಉದ್ಯೋಗ ಮತ್ತು ಸಂಪರ್ಕ ಎಂಬ ಆಶಯಗಳೊಂದಿಗೆ, “ಯಾರೂ ಶಿಕ್ಷಣದಿಂದ ವಂಚಿತರಾಗಬಾರದು” ಎಂಬ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ತ್ವಸಂದೇಶವನ್ನು ಪಾಲಿಸುವ ನಿಟ್ಟಿನಲ್ಲಿ ಈ ಶೈಕ್ಷಣಿಕ ನೆರವನ್ನು ನೀಡಲಾಯಿತು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ, ಆರ್ಥಿಕ ಸಂಕಷ್ಟದಿಂದ ಯಾವುದೇ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಬಾರದು ಎಂಬ ಸದುದ್ದೇಶದಿಂದ ಯುವವಾಹಿನಿ (ರಿ.) ಮಾಣಿ ಘಟಕವು ಈ ಕಾರ್ಯಕ್ಕೆ ಹೊಸ ರೂಪ ನೀಡಿದೆ.
ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಗಣೇಶ ಪೂಜಾರಿ ಕೊಡಾಜೆ, ಕಾರ್ಯದರ್ಶಿ ವಿಶ್ವನಾಥ್ ಪೂಜಾರಿ, ಉಪಾಧ್ಯಕ್ಷರಾದ ಸುಜಿತ್ ಅಂಚನ್, ಮಾಜಿ ಅಧ್ಯಕ್ಷರಾದ ರಾಜೇಶ್ ಪೂಜಾರಿ ಸಂಘಟನಾ ಕಾರ್ಯದರ್ಶಿಗಳಾದ ಶುಭಾ ಪೆರ್ನೆ, ಅಮಿತಾ ಪೆರ್ನೆ, ಕಾರ್ತಿಕ್, ಬಿಳಿಯೂರು ಪೆರ್ನೆ ಗ್ರಾಮದ ಬಿರುವೆರ್ ಕೂಟದ ಅಧ್ಯಕ್ಷರಾದ ಉಮೇಶ್ ಬಾಕಿ ಮಾರು ಶಾಲೆಯ ಮುಖ್ಯ ಶಿಕ್ಷಕರಾದ ಸತ್ಯನಾರಾಯಣ ರೈ, ಪ್ರಾಚಾರ್ಯರಾದ ಶೇಖರ್ ರೈ, ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಚೇತನ್ ಮಲ್ಲಡ್ಕ, ಶಿಕ್ಷಕರಾದ ಆಶಾಲತಾ ಉಪಸ್ಥಿತರಿದ್ದರು.
ಯುವವಾಹಿನಿಯು ಸಮಾಜಮುಖಿ ಚಟುವಟಿಕೆಗಳ ಮೂಲಕ ಶಿಕ್ಷಣ, ಸೇವೆ ಮತ್ತು ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡುತ್ತಾ, ಅಗತ್ಯವಿರುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗುವಂತಹ ಕಾರ್ಯಗಳನ್ನು ನಿರಂತರವಾಗಿ ಕೈಗೊಳ್ಳುತ್ತಿದೆ. “ವಿದ್ಯೆಯಿಂದ ಬೆಳಕು, ಸೇವೆಯಿಂದ ಬದುಕಿಗೆ ಅರ್ಥ” ಎಂಬ ಆಶಯದೊಂದಿಗೆ ಯುವವಾಹಿನಿ ಮಾಣಿ ಘಟಕದ ಈ ಕಾರ್ಯವು ಸಮಾಜಕ್ಕೆ ಮಾದರಿಯಾಗಲಿ ಎಂಬುದಾಗಿ ಮುಖ್ಯ ಶಿಕ್ಷಕರು ತಿಳಿಸಿದರು



