Published
1 hour agoon
By
Akkare News
ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಯವರ ಭಾವಚಿತ್ರದ ಮುಂದೆ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಘಟನೆಯ ಗೌರವ ಸಲಹೆಗಾರರು ಉದ್ಯಮಿ ಸಂಜೀವ ಪೂಜಾರಿ ಕೂರೇಲು ದೀಪ ಪ್ರಜ್ವಲಿಸಿದರು. ಬಳಿಕ ಮಾತನಾಡಿದ ಅವರು ಪುತ್ತೂರಿನಲ್ಲಿ ಬಿಲ್ಲವ ಬ್ರಿಗೇಡ್ ರಚನೆಯಾಗಿ ಕೆಲವು ದಿನಗಳು ಕಳೆದಿದೆ. ಉತ್ತಮ ಕಾರ್ಯಕ್ರಮಗಳು ನಡೆಯುತ್ತಿದೆ. ಸಂಘಟನೆ ಸದಾ ಸಕ್ರಿಯವಾಗಿರುವಂತೆ ಯುವಕರು ನೋಡಿಕೊಳ್ಳಬೇಕು. ಬಿಲ್ಲವ ಸಮಾಜದ ವತಿಯಿಂದ ಇಡೀ ಸಮಾಜಕ್ಕೂ ಕೊಡುಗೆಯಿದೆ ಎನ್ನುವ ಸಂದೇಶವನ್ನು ನಾವೆಲ್ಲರೂ ಸಾರಬೇಕು ಎಂದು ಹೇಳಿದರು.
ರೋಟರಿ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಮಾತನಾಡಿ ಅತ್ಯುತ್ತಮ ಕಾರ್ಯಕ್ರಮ ಹಮ್ಮಿಕೊಂಡಿರುವ ಸಂಘಟನೆಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ನಾರಾಯಣ ಗುರು ಜಯಂತಿ ಮೂಲಕ ಸನಾತನ ಧರ್ಮದ ಸತ್ವ ಮೂಡಿ ಬಂದಿದೆ. ದಾನ ಮಾಡುವವರು ಅಗತ್ಯವಿರುವವರಿಗೆ ನೀಡಿದಾಗಲೇ ಪೂರ್ಣ ಅರ್ಥ ಬರುತ್ತದೆ. ಸಮಾಜದಿಂದ ನಾವೆಲ್ಲವನ್ನೂ ಅಶಿಸುತ್ತೇವೆ. ಆದರೆ ನಾವು ಸಮಾಜಕ್ಕೆ ಏನು ನೀಡಿದ್ದೇವೆ ಎಂಬುದು ಮುಖ್ಯ ಎಂದು ಅವರು ಹೇಳಿದರು. ಜೀವ ಉಳಿಸಲು ರಕ್ತದಾನದಿಂದ ಮಾತ್ರ ಸಾಧ್ಯವಿದೆ. ನೀವು ಕೊಟ್ಟ ರಕ್ತ ಮೂರು ತಿಂಗಳಲ್ಲಿ ಮತ್ತೆ ದೇಹದಲ್ಲಿ ತುಂಬುತ್ತದೆ. ರಕ್ತ ಕೊಟ್ಟವರಿಗೆ ಯಾವುದೇ ಅಪಾಯವಿಲ್ಲ. ರಕ್ತ ಕೊಟ್ಟಾಗ ಕೆಂಪು ರಕ್ತ ಕಣ ಆರು ತಿಂಗಳಲ್ಲಿ ಸರಿ ಹೊಂದುತ್ತವೆ. ಜೊತೆಗೆ ನಮ್ಮ ಜೀವಕ್ಕೆ ಚೈತನ್ಯ ನೀಡುತ್ತದೆ. ರಕ್ತದಾನ ಮಾಡಲು 60 ವರ್ಷದವರೆಗೆ ಅವಕಾಶವಿದ್ದು, ಜೀವ ಕಣಗಳು ಮತ್ತಷ್ಟು ವೃದ್ಧಿಯಾಗುತ್ತದೆ ಎಂದು ಡಾ. ರಾಮಕೃಷ್ಣ ರಾವ್ ಮಸಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬಿಲ್ಲವ ಬ್ರಿಗೇಡ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು ಮಾತನಾಡಿ ಒಳ್ಳೆಯ ರೀತಿಯ ಕಾರ್ಯಕ್ರಮ ನೀಡಲು ಸಂಘಟನೆ ರಚನೆ ಅಗತ್ಯವಾಗಿದೆ. ಸಮಾಜ ಸೇವೆಯ ಕಾರ್ಯದ ಜೊತೆಗೆ ಅನೇಕ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ಸಮಾಜ ಬಾಂಧವರ ಸಹಾಯದ ಕರೆಗೆ ಶಾಸಕರ ಮುಖಾಂತರ ಸ್ಪಂದಿಸುವ ಕಾರ್ಯ ಸಂಘಟನೆ ಮೂಲಕ ನಡೆಯುತ್ತಿದೆ ಎಂದರು.
ನಮ್ಮ ಬಿಲ್ಲವ ಬ್ರಿಗೇಡ್ ಯಾವುದೇ ಸಂಘಟನೆಗೂ ಕೌಂಟರ್ ಅಲ್ಲ. ನಮ್ಮವರಿಗೂ ಹೆಚ್ಚಿನ ಅವಕಾಶ ಒದಗಬೇಕೆಂಬ ಉದ್ದೇಶದಿಂದ ಬ್ರಿಗೇಡ್ ಆರಂಭಿಸಲಾಗಿದೆ. ಗ್ರಾಮ ಸಮಿತಿ ರಚನೆ ಮಾಡಲಾಗುತ್ತಿದೆ. ನಮ್ಮ ಈ ಬ್ರಿಗೇಡ್ ಇನ್ನಷ್ಟು ಬಲವಾಗಲು ನಿಮ್ಮಲ್ಲಿ ಸಹಕಾರ ಕೋರುತ್ತೇವೆ ಎಂದರು. ಗೌರವಾಧ್ಯಕ್ಷ ಡಾ. ರಾಜಾರಾಮ್ ಕೆ.ಬಿ ಪ್ರಾಸ್ತಾವಿಕವಾಗಿ ಮಾತನಾಡಿ ಶುಭ ಕೋರಿದರು.
ಮಂಗಳೂರು ಬಿಲ್ಲವ ಬ್ರಿಗೇಡ್ ಸ್ಥಾಪಕಾಧ್ಯಕ್ಷ ಸದಾನಂದ ಪೂಜಾರಿ ಮತ್ತು ಪುತ್ತೂರು ಬಿಲ್ಲವ ಬ್ರಿಗೇಡ್ ಪ್ರಧಾನ ಕಾರ್ಯದರ್ಶಿ ರಂಜಿತ್ ವೇದಿಯಲ್ಲಿ ಉಪಸ್ಥಿತರಿದ್ದರು. ಮೋಹನ್ ಗುರ್ಜಿನಡ್ಕ , ಅಣ್ಣಿ ಪೂಜಾರಿ ಕೆಮ್ಮಾಯಿ, ಹರೀಶ್ ನಿಡ್ಪಳ್ಳಿ, ಚೇತನ್ ಒಜಾಲ,ಹರೀಶ್ ಉದ್ಯಂಗಳ,ಪ್ರಥ್ವಿರಾಜ್ ಮತ್ತು ಸುರೇಂದ್ರ ಅತಿಥಿಗಳನ್ನು ಸ್ವಾಗತಿಸಿದರು. ರಕ್ತದಾನ ಕಾರ್ಯಕ್ರಮದ ವೇಳೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿ ಬಿಲ್ಲವ ಬ್ರಿಗೇಡ್ ಮೂಲಕ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿದೆ ಎಂದು ಶುಭ ಹಾರೈಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪ್ರವೀಣ್ ಪೂಜಾರಿ ಸಣ್ಣ ಗುತ್ತು ಅಳಿಕೆ,ನವೀನ್ ಕರ್ಕೇರ,ಸುರೇಂದ್ರ, ದಿನೇಶ್ ಕರ್ಕೇರ, ಸಂದೀಪ್ ಪೂಜಾರಿ ಶಾಂತಿನಗರ, ಗಣೇಶ್ ಬಂಗೇರ ಕೋರುಂಗು, ಪ್ರಕ್ಯಾತ್ ಸಾಲ್ಯಾನ್ ನುಳಿಯಲ್ ನಿ ನೆಳ್ಳಿ, ಸುಸಂತ್ ದೇವಸ್ಯ ಸುರೇಶ್ ಸಾಲಿಯಾನ್, ,ಜಯಂತ್ ಕೆಂಗುಡೆಲ್, ನಾರಾಯಣ ಬೆಟ್ಟಂಪಾಡಿ,ಜೀವನ್ ಪರನೀರ್ , ಶಾಶ್ವತ್ ಪರನೀರ್, ಧನಂಜಯ ಕಜೆ,ಪ್ರಕಾಶ್ ಸಿಬರ, ಸುಪ್ರೀತ್ ಕೋಲಾಡಿ, ಬಾಲಕೃಷ್ಣ ಪೂಜಾರಿ ಕೋಲಾಡಿ,ಯತೀಶ್ ಪೂಜಾರಿ, ಯೋಗೀಶ್ ಪೂಜಾರಿ,ಕರುಣಾಕರ ಕಟ್ನಜೆ, ಲೋಕೇಶ್ ಜೇಡರಕೋಡಿ, ಪೃಥ್ವಿ ಪೆಲತಿಂಜಾ,ವಿಸ್ವಾಸ ಕಟ್ನಜೆ, ಜಯಪ್ರಕಾಶ್ ಸವಣೂರ್ ಮತ್ತಿತರರು ಉಪಸ್ಥಿತರಿದ್ದರು.



