Published
5 hours agoon
By
Akkare News
ಗೌರವಾಧ್ಯಕ್ಷ: ಡಾ. ರಾಜಾರಾಮ್, ಅಧ್ಯಕ್ಷ: ಜಯಪ್ರಕಾಶ್ ಬದಿನಾರು, ಪ್ರಧಾನ ಕಾರ್ಯದರ್ಶಿ ರಂಜಿತ್ ಸುವರ್ಣ, ಕೋಶಾಧಿಕಾರಿ: ಚಂದ್ರಶೇಖರ್ ಕಲ್ಲಗುಡ್ಡೆ

ಪುತ್ತೂರು: ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಸಮುದಾಯ ಅಭಿವೃದ್ಧಿ ಹೊಂದಲು ಶ್ರಮಿಸುವ ಉದ್ದೇಶದಿಂದ ಪುತ್ತೂರಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ತರಲಾಗಿರುವ ಬಿಲ್ಲವ ಬ್ರಿಗೇಡ್ ಇದರ ಪ್ರಥಮ ಗೌರವಾಧ್ಯಕ್ಷರಾಗಿ ಡಾ.ರಾಜಾರಾಮ್ ಕೆ.ಬಿ., ಅಧ್ಯಕ್ಷರಾಗಿ ಜಯಪ್ರಕಾಶ್ ಬದಿನಾರು ಕೋಡಿಂಬಾಡಿ, ಪ್ರಧಾನ ಕಾರ್ಯದರ್ಶಿಯಾಗಿ ರಂಜಿತ್ ಸುವರ್ಣ ಪೆರಿಯಡ್ಕ ಮತ್ತು ಕೋಶಾಧಿಕಾರಿಯಾಗಿ ಚಂದ್ರಶೇಖರ ಕಲ್ಲಗುಡ್ಡೆ ಆಯ್ಕೆಯಾಗಿದ್ದಾರೆ.
ಪುತ್ತೂರಿನ ಮಾಜಿ ಸೈನಿಕರ ಭವನದಲ್ಲಿ ಜೂ.25ರಂದು ನಡೆದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಗೌರವ ಸಲಹೆಗಾರರಾಗಿ ಸಂಜೀವ ಪೂಜಾರಿ ಕೂರೇಲು, ಪದ್ಮನಾಭ ಪೂಜಾರಿ ಅಳಿಕೆ, ದೇವಾನಂದ ಕೆ., ಉಪಾಧ್ಯಕ್ಷರಾಗಿ ಅಣ್ಣಿ ಪೂಜಾರಿ ಕೆಮ್ಮಾಯಿ, ಮೋಹನ್ ಗುರ್ಜಿನಡ್ಕ, ಜಗದೀಶ್ ಪೂಜಾರಿ ನೇರಳಕಟ್ಟೆ, ಜತೆ ಕಾರ್ಯದರ್ಶಿಗಳಾಗಿ ಹರೀಶ್ ಬಂಗೇರ, ಪ್ರವೀಣ್ ಅಳಿಕೆ ಸಣ್ಣಗುತ್ತು, ಕಿರಣ್ ಕುಮಾರ್ ಬಸಂತಕೋಡಿ,





