Connect with us

ಸ್ಥಳೀಯ

ಸಾಂದೀಪನಿಯಲ್ಲಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಸರಣಿ ಕಾರ್ಯಾಗಾರ :

Published

on

ಸಾಂದೀಪನಿ ವಿದ್ಯಾ ಸಂಸ್ಥೆಯಲ್ಲಿ ದಿನಾಂಕ 10/07/26 ರಂದು ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಕೌಶಲ್ಯಗಳ ಅಭಿವೃದ್ಧಿಯ ಜತೆಗೆ ವ್ಯಕ್ತಿತ್ವ ವಿಕಸನ ತರಬೇತಿ ‘ ರಜತ ಪಲ್ಲವ ‘ ಸರಣಿ ಕಾರ್ಯಾಗಾರದ ಮೂರನೇ ತರಬೇತಿ ಕಾರ್ಯಕ್ರಮ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾದ ಕುಮಾರಿ ಸುಷ್ಮಾ ಬಿ ಹಿರೇಮಠ್ Mater of physiotherapy ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇವರಿಂದ ನಡೆಸಲ್ಪಟ್ಟ ಈ ಕಾರ್ಯಗಾರದಲ್ಲಿ ಪ್ರಮುಖವಾಗಿ ಸಂವಹನ ಕೌಶಲ್ಯ ದ ಬಗ್ಗೆ ತರಬೇತಿಯನ್ನು ಹಾಗೂ ಅದರ ವಿಧಾನ ಮತ್ತು ಅಗತ್ಯತೆ ಗಳನ್ನು ತಿಳಿಸಿದರು. ಮಕ್ಕಳೊಡನೆ ಸಂವಾದ ನಡೆಸುವ ಮೂಲಕ ಅವರ ಅನೇಕ ಸಂಶಯಗಳಿಗೆ ಉತ್ತರ ನೀಡುವುದರ ಮೂಲಕ ಮಕ್ಕಳಿಗೆ ಉಪಯುಕ್ತವಾಗುವಂತಹ ಅನೇಕ ಮಾಹಿತಿಗಳನ್ನು ನೀಡಿದರು. ಈ ಕಾರ್ಯಗಾರದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀ ಕೃಷ್ಣಪ್ರಸಾದ್ ಕೆದಿಲಾಯ, ಶಾಲಾ ಕೋಶಾಧಿಕಾರಿ ಶ್ರೀ ಹರೀಶ್ ಪುತ್ತೂರಾಯ,JC trainer ಶ್ರೀ ವೇಣುಗೋಪಾಲ್ ಮತ್ತು ಮುಖ್ಯ ಶಿಕ್ಷಕರಾದ ಶ್ರೀ ಪ್ರಸನ್ನ ಕೆ ಇವರು ಉಪಸ್ಥಿತರಿದ್ದರು. ತರಬೇತಿ ಕಾರ್ಯಕ್ರಮದ ಸoಯೋಜಕರಾದ ಸಹ ಶಿಕ್ಷಕರಾದ ಶ್ರೀ ಆನಂದ್ ಆರ್ ರವರು ಸ್ವಾಗತಿಸಿದರು. ಸಹ ಶಿಕ್ಷಕಿ ಶ್ರೀಮತಿ ವಾಣಿ ಇವರು ವಂದಿಸಿದರು.

 
 

Continue Reading
Click to comment

Leave a Reply

Your email address will not be published. Required fields are marked *

Advertisement