ದಿನಾಂಕ:09.06.2026ರಂದು ಕೋಡಿಂಬಾಡಿ ಗ್ರಾಮ ಪಂಚಾಯತ್ ಎದುರು ರಸ್ತೆಯ ಬದಿಯಲ್ಲಿ ಕಸ ಹಾಕಿರುವುದು ಕಂಡುಬಂದಿರುತ್ತದೆ. ಇದನ್ನು ಸಂಜೀವಿನಿ ಒಕ್ಕೂಟದ ಸ್ವಚ್ಛತಾ ಸಿಬ್ಬಂದಿಗಳು ಪರಿಶೀಲಿಸಿದಾಗ ದಾಖಲೆಗಳು ಸಿಕ್ಕಿರುವುದನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಮಾಹಿತಿ ನೀಡಿರುತ್ತಾರೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಕೂಡಲೇ ಕಸ ಹಾಕಿದವರನ್ನು ಪತ್ತೆಹಚ್ಚಿ 2500/- ರೂ ದಂಡ ಹಾಕಿ ಅವರಿಂದಲೇ ತೆರವುಗೊಳಿಸಿರುತ್ತಾರೆ. ಮಾಹಿತಿ ನೀಡಿದ ಸಂಜೀವಿನಿ ಒಕ್ಕೂಟದ ಸ್ವಚ್ಛತಾ ಸಿಬ್ಬಂದಿಗಳಿಗೆ ರೂ.500/- ಬಹುಮಾನ ನೀಡಲಾಯಿತು.ಪಂಚಾಯತ್ ವತಿಯಿಂದ ಕಸ ಬಿಸಾಡಿದವರಿಂದ ದಂಡ ವಸೂಲು ಮಾಡಿರುತ್ತಾರೆ.