Connect with us

ಸ್ಥಳೀಯ

ಪುತ್ತೂರಿನಲ್ಲಿ ಅದ್ದೂರಿಯಾಗಿ ನಡೆದ ‘ಅಪರಾಧಿ ನಾನಲ್ಲ’ ಪ್ರೀಮಿಯರ್ ಶೋ.. ಎಸ್.ಎಲ್.ವಿ. ಕಲರ್ಸ್ ನಿರ್ಮಾಣದ ಬಹುನಿರೀಕ್ಷಿತ ಸಿನಿಮಾ ನಾಳೆ ರಾಜ್ಯಾದ್ಯಂತ ಬಿಡುಗಡೆ

Published

on

​ಎಸ್.ಎಲ್.ವಿ. ಕಲರ್ಸ್ ನಿರ್ಮಾಣ ಮತ್ತು ಯಶಂತ್ ಕಲ್ಲಡ್ಕ ನಿರ್ದೇಶನದಲ್ಲಿ ನಾಯಕ ನಟನಾಗಿ ಆಕ್ಷನ್ ಕಿಂಗ್ ಅರ್ಜುನ್ ಕಾಪಿಕಾಡ್ ಹಾಗೂ ನಾಯಕ ನಟಿ ಅಮೃತ ಮೂರ್ತಿ ಹಾಗೂ ಶ್ರೀಶಾ ಸಾಮಾನಿ ಅಭಿನಯದ ಕನ್ನಡ, ತೆಲುಗು ಸಿನಿಮಾ ನಟಿ ಜ್ಯೋತಿ ರೈ, ಪ್ರಮೋದ್ ಶೆಟ್ಟಿ, ದಿನೇಶ್ ಮಂಗಳೂರು, ನೀತು ಶೆಟ್ಟಿ, ನವೀನ್ ಡಿ. ಪಡೀಲ್, ಅರ್ಜುನ್ ಕಜೆ, ಅನೂಪ್ ಸಾಗರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ ವಿಭಿನ್ನ ಕಥೆಯನ್ನೊಳಗೊಂಡ ಸೂಪರ್ ಥ್ರಿಲ್ಲರ್ ಕನ್ನಡ ಸಿನಿಮಾ “ಅಪರಾಧಿ ನಾನಲ್ಲ” ಚಿತ್ರ ಜುಲೈ 3 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಜುಲೈ 1ನೇ ಬುಧವಾರದಂದು ಸಂಜೆ 4 ಗಂಟೆಗೆ ಪುತ್ತೂರಿನ ಜಿ.ಎಲ್. ಒನ್ ಮಾಲ್ ನ ಭಾರತ್ ಸಿನಿಮಾಸ್ ಇಲ್ಲಿ ಮೊದಲ ಪ್ರಿಮಿಯರ್ ಶೋ ಪ್ರದರ್ಶನಗೊಂಡಿತು.ಈ ಸಂದರ್ಭದಲ್ಲಿ ರಾಜೀವಿ ಶೆಟ್ಟಿ ಅರ್ಬಿ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು , ಚಿತ್ರದ ನಿರ್ಮಾಪಕರಾದ ದಿವಾಕರ್‍ ದಾಸ್ ನೇರ್ಲಾಜೆ, ರೇಣುಕಾ ಚೌಟ, ಪ್ರಶಾಂತ್ ಶೆಟ್ಟಿ, ಸಂತೋಷ್ ಕುಂಬ್ಳೆ, ಸಿನಿಮಾ ನಿರ್ದೇಶಕ ಯಶಂತ್ ಕಲ್ಲಡ್ಕ, ಸಿನಿಮಾ ನಟ ವಿನೋದ್ ಶೆಟ್ಟಿ, ಸುಂದರ್‍ ರೈ ಮಂದಾರ, ರಾಜರಾಮ್ ಶೆಟ್ಟಿ ಕೊಲ್ಪೆ, ಮೋಹನ್ ಭಟ್ ಉರಿಮಜಲು, ಬುಡಿಯಾರ್‍ ರಾಧಾಕೃಷ್ಣ ರೈ, ರಾಮ್ ದಾಸ್ ಶೆಟ್ಟಿ ವಿಟ್ಲ, ಬಾಲ ನಟಿ ಸಮನ್ವಿ ಶೆಟ್ಟಿ, ಶ್ಯಾಮ್ ಸುದರ್ಶನ್ ಹೊಸಮೂಲೆ, ಹೇಮಾ ಜಯರಾಮ್, ನಿಶಾಂತ್ ಬಿಲ್ಲಂಪದವು, ಜಯಪ್ರಕಾಶ್ ಬದಿನಾರು, ಪ್ರದೀಪ್ ಶೆಟ್ಚಿ, ಗಿರೀಶ್ ಭಟ್, ರಾಜಶೇಖರ್‍ ಶೆಟ್ಟಿ, ರೊಪೇಶ್ ಶೆಟ್ಟಿ, ಆರ್ಯ ಚೌಟ,ರವಿಪ್ರಕಾಶ್ ವಿಟ್ಲ, ಮನ್ಮಥ ಶೆಟ್ಟಿ, ರಾಜೇಶ್ ಬಾಳೆಕಲ್ಲು ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಪ್ರೀಮಿಯರ್‌ ಶೋ ನಲ್ಲಿ ಜನರ ಉತ್ತಮ ಪ್ರತಿಕ್ರಿಯೆ: ‘ಅಪರಾಧಿ ನಾನಲ್ಲ’ ಚಿತ್ರದ ಪ್ರೀಮಿಯರ್‌ ಶೋಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರ ವೀಕ್ಷಿಸಿದ ಅನೇಕರು, “ಇದು ಸತ್ಯಕ್ಕೆ ಜಯ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕರಾವಳಿಯಲ್ಲಿ ಇಂತಹ ವಿಭಿನ್ನ ಪ್ರಯೋಗದ ಚಿತ್ರ ಮೂಡಿ ಬಂದಿರುವುದು ಸಂತಸದ ಸಂಗತಿ ಎಂದು ಹೇಳಿದ್ದಾರೆ. “ಬಹಳ ಸಮಯದ ಬಳಿಕ ಉತ್ತಮ ಚಿತ್ರ ನೋಡಿದ ಅನುಭವವಾಗಿದೆ. ಆರಂಭದಿಂದ ಅಂತ್ಯದವರೆಗೂ ಕುತೂಹಲದಿಂದ ನೋಡಿಸಿಕೊಳ್ಳುವ ಸಿನಿಮಾ ಇದಾಗಿದೆ. ಕಲಾವಿದರ ನಟನೆ ಮತ್ತು ನಿರ್ದೇಶನ ಎರಡೂ ಅತ್ಯುತ್ತಮವಾಗಿದ್ದು, ಕುಟುಂಬ ಸಮೇತರಾಗಿ ಕುಳಿತು ನೋಡುವಂತಹ ಚಿತ್ರವಾಗಿದೆ” ಎಂದು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರೀಮಿಯರ್‌ ಶೋ ಬಳಿಕ ಪ್ರೇಕ್ಷಕರಿಂದ ಉತ್ತಮ ಪ್ರಶಂಸೆ ಲಭಿಸಿದೆ

ಬಿಡುಗಡೆ ಪಟ್ಟಿಯ ಪ್ರಕಾರ, ಚಿತ್ರವು ರಾಜ್ಯಾದ್ಯಂತ ಸಾಮಾನ್ಯ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ ಪರದೆಗಳಲ್ಲಿ ಒಟ್ಟು 80 ಪರದೆಗಳಲ್ಲಿ ಪ್ರದರ್ಶನ ಕಾಣಲಿದೆ. ಮಂಗಳೂರು, ಹುಬ್ಬಳ್ಳಿ, ಮೈಸೂರು, ಬೆಳಗಾವಿ, ಚಾಮರಾಜನಗರ, ಚನ್ನರಾಯಪಟ್ಟಣ, ಶ್ರೀರಂಗಪಟ್ಟಣ, ಹಡಗಲಿ ಸೇರಿದಂತೆ ರಾಜ್ಯದ ವಿವಿಧ ನಗರಗಳ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಬೆಂಗಳೂರಿನ ಗೋಪಾಲನ್ ಸಿನೆಮಾಸ್, ಸಿನೆಪೊಲಿಸ್, ಮಿರಾಜ್, ಪಿವಿಆರ್ ಹಾಗೂ ಐನಾಕ್ಸ್ ಸೇರಿದಂತೆ ಪ್ರಮುಖ ಮಲ್ಟಿಪ್ಲೆಕ್ಸ್‌ಗಳಲ್ಲೂ ಪ್ರದರ್ಶನ ನಿಗದಿಯಾಗಿದೆ.

ಸಾಮಾನ್ಯ ಚಿತ್ರಮಂದಿರಗಳಲ್ಲಿ ವಾರಕ್ಕೆ 287 ಪ್ರದರ್ಶನಗಳು ನಿಗದಿಯಾಗಿದ್ದು, ಚಿತ್ರಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement