Connect with us

ಸ್ಥಳೀಯ

ಜು.30:ವಿದ್ಯುತ್ ನಿಲುಗಡೆ

Published

on

ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ 110/33/11 ಕೆ.ವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ನಗರ, ರಾಮಕುಂಜ, ಉಪ್ಪಿನಂಗಡಿ ಓಲ್ಡ್, ಉಪ್ಪಿನಂಗಡಿ ಎಕ್ಸ್‌ಪ್ರೆಸ್, ಕಾಂಚನ, ವಾಟರ್ ಸಪ್ಲೈ ಮತ್ತು ಕೆಮ್ಮಾಯಿ ಫೀಡರ್‌ನಲ್ಲಿ ಜು.30 ರಂದು ಪೂರ್ವಾಹ್ನ 10ರಿಂದ ಅಪರಾಹ್ನ 05:30 ಗಂಟೆಯವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.ಆದುದರಿಂದ, 110/33/11 ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಈ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ಕಬಕ, ವಿದ್ಯಾಪುರ, ನಗರ, ಮುರ, ಕೊಡಿಪ್ಪಾಡಿ, ಕಲೆಂಬಿ, ಪಡೀಲು, ಸಾಲ್ಮರ, ಬೀರ್ನಹಿತ್ಲು, ಕೆಮ್ಮಾಯಿ, ಕೃಷ್ಣನಗರ, ಆನೆಮಜಲು, ಬನ್ನೂರು, ಹಲಂಗ, ಸೇಡಿಯಾಪು, ಕೋಡಿಂಬಾಡಿ, ಮಠಂತಬೆಟ್ಟು, ಶಾಂತಿನಗರ, ದಾರಂದಕುಕ್ಕು, ಕಟಾರ, ಚಿಕ್ಕಮುಡ್ನೂರು, ಬೆಳ್ಳಿಪ್ಪಾಡಿ, ರಾಮಕುಂಜ, ಕೊಲ, ಹಿರೇಬಂಡಾಡಿ, ವಾಟರ್ ಸಪ್ಲೈ, ಹಳೆನೇರೆಂಕಿ ಮತ್ತು ನೆಕ್ಕಿಲಾಡಿ ಪರಿಸರದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಬನ್ನೂರು ಜಂಕ್ಷನ್ ಎಂಬಲ್ಲಿ ತುರ್ತು ಕಾಮಗಾರಿ ನಿಮಿತ್ತ, ಜು.30 ರಂದು ಪೂರ್ವಾಹ್ನ 10.00ರಿಂದ ಸಾಯಂಕಾಲ 05:30 ಗಂಟೆಯವರೆಗೆ ಪುತ್ತೂರು- ಕಡಬ-ಸುಬ್ರಹ್ಮಣ್ಯ ಹಾಗೂ 33 ಕೆ.ವಿ ಪುತ್ತೂರು-ಸವಣೂರು -ನೆಲ್ಯಾಡಿ ವಿದ್ಯುತ್ ಮಾರ್ಗದ ವಿದ್ಯುತ್ ನಿಲುಗಡೆ ಮಾಡಲಾಗುವುದು.ಆದ್ದರಿಂದ 33/11ಕೆವಿ ಕಡಬ ವಿದ್ಯುತ್ ಉಪಕೇಂದ್ರ, 33/11ಕೆವಿ ಸುಬ್ರಹ್ಮಣ್ಯ ವಿದ್ಯುತ್ ಉಪಕೇಂದ್ರ, 33/11ಕೆವಿ ನೆಲ್ಯಾಡಿ ವಿದ್ಯುತ್ ಉಪಕೇಂದ್ರ ಹಾಗೂ 33/11ಕೆವಿ ಸವಣೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11ಕೆವಿ ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರು, ಹಾಗೂ 33/11ಕೆವಿ ಬಿಂದು ವಿದ್ಯುತ್ ಉಪಕೇಂದ್ರದವರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

 

 
 

Continue Reading
Click to comment

Leave a Reply

Your email address will not be published. Required fields are marked *

Advertisement