Connect with us

ಸ್ಥಳೀಯ

ಪುತ್ತೂರು: ಇಟಿಎಫ್‌ ತಂಡ ಕಾರ್ಯಾಚರಣೆ ಪ್ರಾರಂಭ; ಕೊಚ್ಚಿಯಲ್ಲಿ ಕಾಡಾನೆಯ ಸುಳಿವು ಪತ್ತೆ

Published

on

ಪುತ್ತೂರು :ಕೊಳ್ತಿಗೆ ಗ್ರಾಮದ ಅರ್ತ್ಯಡ್ಕದಲ್ಲಿ ಕಾಡಾನೆಯು ಮಹಿಳೆಯನ್ನು ಕೊಂದು ಹಾಕಿದ ಘಟನೆಯ ಹಿನ್ನೆಲೆಯಲ್ಲಿ ಕಾಡಾನೆ ಗಳನ್ನು ಮರಳಿ ಕಾಡಿಗೆ ಅಟ್ಟಲು ಚಿಕ್ಕಮಗಳೂರಿನಿಂದ ಆಗಮಿಸಿರುವ ಇಟಿಎಫ್‌ ತಂಡವೂ ಸೋಮವಾರ ಕಾರ್ಯಾಚರಣೆ ಪ್ರಾರಂಭಿಸಿದ್ದು ಮೊದಲ ದಿನವೇ ಕಾಡಾನೆಯ ಸುಳಿವು ಪತ್ತೆ ಹಚ್ಚಿದೆ.

ಕೊಳ್ತಿಗೆ ಗ್ರಾಮದ ಕೊಚ್ಚಿ ಪರಿಸರದಲ್ಲಿ ಕಾಡಾನೆ ಇರುವುದನ್ನು ಇಟಿಎಫ್‌ ತಂಡ ಕಂಡು ಹಿಡಿದಿದೆ. ಅಲ್ಲಿಂದ ಆನೆಗಳನ್ನು ಆನೆಗುಂಡಿ ಮೂಲಕ ಮರಳಿ ಪರಪ್ಪೆ ಕಾಡಿಗೆ ಅಟ್ಟುವ ಕಾರ್ಯಾಚರಣೆಯನ್ನು ಇಟಿಎಫ್‌ ತಂಡ ಆರಂಭಿಸಿದ್ದು ಇನ್ನೆರಡು ದಿನಗಳಲ್ಲಿ ಆ ಕಾರ್ಯ ನಡೆಯಲಿದೆ ಎಂದು ಎಸಿಎಫ್‌ ಸುಬ್ಬಯ್ಯತಿಳಿಸಿದ್ದಾರೆ.

ಎಲಿಫೆಂಟ್‌ ಟಾಸ್ಕ್ ಪೋರ್ಸ್‌ ತಂಡದಲ್ಲಿ ಆರು ಮಂದಿ ಇದ್ದು, ಕೋವಿ ಸಹಿತ ಆಧುನಿಕ ಪರಿಕರಗಳೊಂದಿಗೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಕೊಳ್ತಿಗೆ, ಪಾಂಬಾರು, ದುಗ್ಗಳ ಮೊದಲಾದೆಡೆ ಗಸ್ತು ನಿರತವಾಗಿರುವ ಈ ತಂಡ ಆನೆಗಳ ಓಡಾಟ ಸ್ಥಳ ಬಗ್ಗೆ ನಿಗಾ ಇರಿಸಿ ಅವುಗಳ ಚಲನವಲನಗಳ ಮೇಲೆ ಕಣ್ಣಿಟ್ಟಿದೆ.

ಕೃಷಿ ತೋಟಕ್ಕೆ ಕಾಡಾನೆ ಹಿಂಡು ಲಗ್ಗೆ
ಸುಳ್ಯ: ಕೃಷಿ ತೋಟಕ್ಕೆ ಕಾಡಾನೆ ಹಿಂಡು ಲಗ್ಗೆ ಇಟ್ಟು ಕೃಷಿ ಬೆಳೆ ಹಾನಿ ಮಾಡಿರುವ ಘಟನೆ ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದಲ್ಲಿ ಸಂಭವಿಸಿದೆ. ಬಳ್ಳಡ್ಕ ಸುಮಿತ್ರ ಇಂಜಿನಿಯರ್‌ ಮತ್ತು ವಿಜಯ ಎಂಬವರ ತೋಟಕ್ಕೆ 6 ಆನೆಗಳು ಹಿಂಡು ದಾಳಿ ನಡೆಸಿ ಅಡಿಕೆ ಗಿಡ, ಬಾಳೆ, ತೆಂಗು, ಜೀಗುಜ್ಜೆ ಗಿಡಗಳನ್ನು ನಾಶಮಾಡಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement