Published
9 hours agoon
By
Akkare Newsಹಾಸನ : ಸುಮಾರು 68 ವರ್ಷಗಳ ಸ್ವರ್ಣೋದ್ಯಮ ಪರಂಪರೆಯ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್, ಹಾಸನ ಜಿಲ್ಲೆಯಲ್ಲಿ 2007ರಲ್ಲಿ ಆರಂಭವಾಗಿದ್ದ ತಮ್ಮ ವಿಶಿಷ್ಟ ವಿನೂತನ ಆಭರಣಗಳ ಮಳಿಗೆಯನ್ನು ಇನ್ನಷ್ಟು ನೂತನ ಮತ್ತಷ್ಟು ವಿನೂತನವಾಗಿ ಗ್ರಾಹಕ ಸ್ನೇಹಿಯಾಗಿ ನವೀಕರಣ ಮಾಡಿ. ಮೇ 7ರಂದು ಶುಭಾರಂಭ ಮಾಡಿದೆ. ನವೀಕರಣಗೊಂಡ ನೂತನ ಮಳಿಗೆಯನ್ನು ಚಲನಚಿತ್ರ ನಾಯಕ ನಟಿ ಮಿಲನಾ ನಾಗರಾಜ್ ಉದ್ಘಾಟಿಸಿದರು.
ಜುವೆಲ್ಲರ್ನನಲ್ಲಿ ನವೀಕೃತ ವಿಶಾಲ ಬಹುಮಹಡಿಯ ಆಭರಣ ಮಳಿಗೆಯಲ್ಲಿ ಉತ್ಕೃಷ್ಟ ವಜ್ರಭರಣಗಳ ಸಂಗ್ರಹ, ತರಬೇತಾದ ॥ ಸಿಬ್ಬಂದಿಗಳಿಂದ ಪರಿಪೂರ್ಣ ಮಾರ್ಗದರ್ಶನ, ಸಂಪೂರ್ಣ ಪಾರದರ್ಶಕತೆಯ ಬಿಲ್ಲಿಂಗ್, ಖರೀದಿಯ ನಂತರವೂ ವಸ್ತುಗಳ ಮೇಲೆ ಅತ್ಯುತ್ತಮ ಸೇವೆ ನೀಡುತ್ತಿದ್ದು, ಸದಾ ಗ್ರಾಹಕ ಪರ ಈ ಆವಿಷ್ಕಾರದಲ್ಲಿ ತೊಡಗಿರುವ ನಮ್ಮ ಹಂಬಲಗಳಿಗೆ ನೀಡುತ್ತಿರುವ ಬೆಂಬಲವೇ ನಮ್ಮ ಯಶಸ್ವಿ ಪಯಣಕ್ಕೆ ಕಾರಣವಾಗಿದೆ. ಮುಂಬರುವ ದಿನಗಳಲ್ಲಿ ಈ ಬಾಂಧವ್ಯದ ಬೆಸುಗೆಯನ್ನು ಇನ್ನಷ್ಟು ಸುಭದ್ರವಾಗಿಸಬೇಕೆಂಬುದೇ ನಮ್ಮ ಸಂಕಲ್ಪ ಎಂದರು. ”
ಜಿಎಲ್ ಸಮೂಹ ಸಂಸ್ಥೆಗಳ ಚೇರ್ಮನ್, ಜಿಎಲ್ ಬಲರಾಮ್ ಆಚಾರ್ಯ, ಮಾತನಾಡಿ, ಕಳೆದ 18 ವರ್ಷಗಳಿಂದ ಹಾಸನ ಜಿಲ್ಲೆಯ * ಜನತೆಗೆ ವಿಶೇಷ ಚಿನ್ನಾಭರಣಗಳನ್ನು ಉತ್ತಮ ದರದಲ್ಲಿ ನೀಡುವ ಮೂಲಕ ಲಕ್ಷಾಂತರ ಗ್ರಾಹಕರ ಮನಗೆದ್ದಿದೆ. ನೂತನ ಬೃಹತ್ ಅಭರಣ ಮಳಿಗೆಯಲ್ಲಿ ಎಲ್ಲಾ ಪೀಳಿಗೆಯ ಅಭಿರುಚಿಗೆ ಬೇಕಾದ ಚಿನ್ನದ ಆಭರಣಗಳ ವಿಶಿಷ್ಟ ಕಲೆಕ್ಷನ್ ಇದ್ದು, ಬೆಳ್ಳಿಯ ಆಭರಣ ಹಾಗೂ ಉಡುಗೊರೆಗಳ ಅಮೋಘ ಸಂಗ್ರಹವಿದೆ. ಗ್ರಾಹಕರ ವಿಶ್ವಾಸ ನಂಬಿಕೆಗಳಿವೆ. ಸಂಪ್ರದಾಯ ನಿಷ್ಠೆ ಇದೆ. ಗ್ರಾಹಕರ ಒಲವು ಇದೆ ಎಂದರು.