Published
19 hours agoon
By
Akkare Newsಪುತ್ತೂರಿನ ಹೊರ ವಲಯ ಸಂಪ್ಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಅಕ್ಟೀವಾ ಸವಾರನೊಬ್ಬ ಗಂಭೀರ ಗಾಯಗೊಂಡ ಘಟನೆ ಮೆ 11 ರಂದು ರಾತ್ರಿ ನಡೆದಿದೆ.
ಗಣೇಶ್ ನಾಯಕ್ ಕೆದಿಲ ಎಂಬವರು ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳುರಿಗೆ ಕರೆದುಕೊಂಡು ಹೋಗಲಾಗಿದೆ.
ಗಣೇಶ್ ನಾಯಕ್ ಅವರು ಆಕ್ಟಿವಾದಲ್ಲಿ ಸಂಪ್ಯ ಕಡೆಯಿಂದ ಪುತ್ತೂರಿನತ್ತ ತೆರಳುತ್ತಿದ್ದಾಗ ಅಪಘಾತ ನಡೆದಿದೆ ಎನ್ನಲಾಗಿದೆಯಾವುದೋ ವಾಹನ ಢಿಕ್ಕಿ ಹೊಡೆದು ಅಥಾವ ವಾಹನ ಸ್ಕಿಡ್ ಆಗಿಯೂ ಅಪಘಾತ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಸಂಪ್ಯ ಪೊಲೀಸರು ತೆರಳಿದ್ದು ಸಮೀಪದ ಸಿಸಿಟಿವಿ ಪರಿಶೀಲನೆ ನಡೆಸಿರುವುದಾಗಿ ತಿಳಿದು ಬಂದಿದೆ, ಪೊಲೀಸರ ಹೆಚ್ಚಿನ ತನಿಖೆಯಿಂದ ಅಪಘಾತದ ನೈಜ ಕಾರಣ ತಿಳಿದು ಬರಬೇಕಿದೆ.