Connect with us

ಇತರ

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೆಶ್ವರ ಭಜನಾ ಪರಿಷತ್ ಬಿ ಸಿ ರೋಡ್ ವಲಯದ ವತಿಯಿಂದ ಗಾಣದಕೋಡಿ ಕುಟುಂಬ ಚಾವಡಿಯಲ್ಲಿ ಭಜನಾ ತರಬೇತಿ ಶಿಬಿರದ ಸಮರೋಪ ಕಾರ್ಯಕ್ರಮ

Published

on

ಮಕ್ಕಳಿಗೆ ಸಂಸ್ಕಾರ ಮೂಡಿಸುವಲ್ಲಿ ಭಜನಾ ಶಿಬಿರ ಪ್ರಮುಖ ಪಾತ್ರ ವಹಿಸುತ್ತದೆ…ದಿನೇಶ್ ಪೂಜಾರಿ

ಬಂಟ್ವಾಳ ಮಕ್ಕಳಿಗೆ ಸಂಸ್ಕಾರ ಮೂಡಿಸುವಲ್ಲಿ ಭಜನಾ ಶಿಬಿರ ಪ್ರಮುಖ ಪಾತ್ರ ವಹಿಸುತ್ತದೆ. ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ದಿನೇಶ್ ಪೂಜಾರಿ ಹೇಳಿದರು.

ಅವರು ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಬಂಟ್ವಾಳ ಇದರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೆಶ್ವರ ಭಜನಾ ಪರಿಷತ್ ಬಿ ಸಿ ರೋಡ್ ವಲಯದ ವತಿಯಿಂದ ನಡೆದ ಒಂದು ವಾರ ನಡೆದ ಭಜನಾ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕಿನ ಬಿ ಮೂಡ ಗ್ರಾಮದ ಗಾಣದಕೋಡಿ ಕುಟುಂಬ ಚಾವಡಿಯಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

 

ಊರಿನ ಹಿರಿಯ ಗಣ್ಯರಾದ ಮನೋಹರ ಶೆಟ್ಟಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

ಈ ಸಂದರ್ಭದಲ್ಲಿ ಮಕ್ಕಳು ಒಂದು ವಾರದಲ್ಲಿ ಕಲಿತ ಕುಣಿತ ಭಜನೆಯನ್ನು ಅತಿಥಿಗಳ ಮುಂದೆ ಪ್ರದರ್ಶಿಸಿದರು. ನಮಿತ್ ಕುಲಾಲ್ ಒಂದು ವಾರ ತರಬೇತಿ ಶಿಬಿರದ ಅನುಭವ ಹಂಚಿಕೊಂಡರು.

ಭಜನೆ ತರಬೇತಿ ನೀಡಿದ ಭಜನಾ ತರಬೇತಿದಾರ ಸಂದೇಶ್ ಮದ್ದಡ್ಕ, ಗಗನ್, ಆಕಾಶ್ ರವರನ್ನು ಗೌರವಿಸಲಾಯಿತು.

 

 

ವೇದಿಕೆಯಲ್ಲಿ ಬಂಟ್ವಾಳ ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ರೋನಾಲ್ಡ್ ಡಿ’ ಸೋಜ, ಗ್ರಾಮಾಭಿವೃದ್ಧಿಯೋಜನೆಯ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ,,ಭಜನಾ ಪರಿಷತ್ ಜಿಲ್ಲಾ ಸಮನ್ವಯ ಧಿಕಾರಿ ಸಂತೋಷ್ ಪಿ ಅಳಿಯೂರು, ಬಂಟ್ವಾಳ ತಾಲೂಕು ಬಜನಾ ಪರಿಷತ್ ಅಧ್ಯಕ್ಷ ಮುರಳಿ ಪೊಳಲಿ, ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ ರಾಮಕೃಷ್ಣ ಆಳ್ವ, ಊರಿನ ಗಣ್ಯರಾದ ವಿಶ್ವನಾಥ್ ಶೆಟ್ಟಿ ಮುಂಡಂಕಾಪು ಗುತ್ತು, ಬಿ ಸಿ ರೋಡ್ ವಲಯದ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ಶೇಖರ್ ಸಾಮಾನಿ,, ಬಿ ಮೂಡ ಒಕ್ಕೂಟ ಅಧ್ಯಕ್ಷ ಪ್ರತಿಭಾ ಶೆಟ್ಟಿ, ,ಗಾಣದಕೋಡಿ ಕುಟುಂಬ ಚಾವಡಿ ಸದಸ್ಯ ,ದಿನೇಶ್ ಶೆಟ್ಟಿ ದೈವ ಚಾವಡಿಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯರಾಮ್ ಶೆಟ್ಟಿ,,ಮೊದಲದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಬಿರಾರ್ಥಿ ಮಕ್ಕಳ ಪೋಷಕರು, ಒಕ್ಕೂಟದ ಸದಸ್ಯರುಗಳು, ಗಾಣದಕೋಡಿ ಮನೆ ಸದಸ್ಯರು, ಊರಿನ ಭಜನಾ ಆಸಕ್ತರು ಭಾಗವಹಿಸಿದ್ದರು.

ರಂಜಿತಾ ಪ್ರಾರ್ಥಿಸಿ, ಬಿ ಮೂಡ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಆಶಾಲತಾ ಸ್ವಾಗತಿಸಿ, ಭಾರತಿ ಹರೀಶ್ ಗಾಂದೋಡಿ ವಂದಿಸಿದರು. ಬಿ ಸಿ ರೋಡ್ ವಲಯ ಮೇಲ್ವಿಚಾರಕಿ ವೇದಾವತಿ ಕಾರ್ಯಕ್ರಮ ನಿರೂಪಿಸಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement