Connect with us

ಸ್ಥಳೀಯ

ಅಕ್ರಮ ಚಟುವಟಿಕೆ ಮತ್ತು ಕೋಮು ಗಲಭೆಯನ್ನು ಸಮರ್ಥವಾಗಿ ನಿಯಂತ್ರಿಸಿದ ಪೋಲಿಸ್ ಕಮೀಷನರ್ ಸುಧೀರ್ ರೆಡ್ಡಿ ವಗಾ೯ವಣೆಗೆ ರಾಜಕೀಯ ಷಡ್ಯಂತ್ರ! 🔷 ( ಸಿಸಿಬಿ) ಘಟಕವನ್ನು ವಿಸಜಿ೯ಸಲು ಅಗ್ರಹ!

Published

on

ಮಂಗಳೂರು : ಮಂಗಳೂರಿನ ದಕ್ಷ ಹಾಗೂ ದಿಟ್ಟ ಪೋಲಿಸ್ ಕಮೀಷನರ್ ಶ್ರೀ ಸುಧೀರ್ ರೆಡ್ಡಿ ಯವರ ಪ್ರಾಮಾಣಿಕ ಕೆಲಸ ಹಲವು ಅಕ್ರಮ ದಂಧೆಕೋರರಿಗೆ ಸಮಸ್ಯೆಯಾಗಿದ್ದು ವಗಾ೯ವಣೆಗಾಗಿ ರಾಜಕೀಯ ನಾಯಕರ ಭೇಟಿ ಮಾಡಿ ಕುತಂತ್ರ ಮಾಡುತ್ತಿದ್ದಾರೆ. ಇವರ ಕುತಂತ್ರಕ್ಕೆ ರಾಜಕೀಯ ನಾಯಕರುಗಳು ಬಲಿಯಾದರೆ ಮಂಗಳೂರು ಮತ್ತೆ ದಂಧೆಗಳ ಸಾಮ್ರಾಜ್ಯವಾಗುತ್ತದೆ. ಇಂತಹ ಪ್ರಾಮಾಣಿಕ ಕಮೀಷನರ್ ರನ್ನು ವಗಾ೯ವಣೆ ಗೊಳಿಸಿದ್ದೇ ಆದಲ್ಲಿ ಸಾರ್ವಜನಿಕರಿಂದ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಅಕ್ರಮ ಮರಳು ದಂಧೆ, ಇಸ್ಪೀಟು ಅಡ್ಡೆ, ಮಸಾಜ್ ಪಾರ್ಲರ್, ಸ್ಮಗ್ಲಿಂಗ್, ಗೂಂಡಾಗಿರಿ, ಡ್ರಗ್ಸ್, ಅಕ್ರಮ ದಾಸ್ತಾನುದಾರರು, ಅಕ್ರಮ ಮಧ್ಯ ವ್ಯಾಪಾರಿಗಳು, ಹವಾಲ ದಂಧೆ, ವೇಶ್ಯಾವಾಟಿಕ ದಂಧೆಕೋರರು, ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರು ಸದ್ಯಕ್ಕೆ ಪಲಾಯನ ಗೈದರೂ ಅವರ ಕೆಲ ಮಂದಿ ಅನುಯಾಯಿಗಳು ತೆರೆ ಮರೆಯಲ್ಲಿ ಕಸರತ್ತು ಮಾಡುತ್ತಿದ್ದಾರೆ.

ಪ್ರಾಮಾಣಿಕತೆಗೆ, ದಕ್ಷತೆಗೆ, ಧೀರತೆಗೆ ಹೆಸರುವಾಸಿಯಾಗಿರುವ ಪೋಲಿಸ್ ಕಮೀಷನರ್ ಶ್ರೀ ಸುಧೀರ್ ರೆಡ್ಡಿ ಯವರು ಮಂಗಳೂರಿನ ಸಿಟಿ ಕ್ರೈಮ್ ಬ್ರಾಂಚ್ (ಸಿಸಿಬಿ) ಘಟಕವನ್ನು ತಕ್ಷಣ ವಿಸಜಿ೯ಸಿ ನಿಷ್ಠಾವಂತ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳ ತಂಡದೊಂದಿಗೆ ಪುನರ್ ರಚಿಸಿ ಪುಣ್ಯ ಕಟ್ಟಿ ಕೊಳ್ಳಬೇಕು ಎಂಬ ಅಗ್ರಹಗಳು ಸಾರ್ವಜನಿಕರಿಂದ ಕೇಳಿ ಬಂದಿದೆ.

ರಾಜಿ ಪಂಚಾತಿಗೆ, ಹಪ್ತಾ ವಸೂಲಿ, ಅಕ್ರಮ ಚಟುವಟಿಕೆ ಗಳ ಖದೀಮರೊಂದಿಗೆ ದೋಸ್ತಿ ಹೀಗೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಗುಂಪೊಂದು ಸಿಸಿಬಿಯಲ್ಲಿದೆ ಎಂದು ಹೇಳಲಾಗಿದೆ. ಬೆರಣಿಕೆಯ ನಾಲ್ವರು ಅಧಿಕಾರಿಗಳು ಹಾಗೂ ಒಂದಿಬ್ಬರು ಸಿಬ್ಬಂದಿಗಳನ್ನು ಹೊರತು ಪಡಿಸಿ ಕೆಲವು HC ಗಳು ಹಾಗೂ ASI ಗಳು ಹತ್ತತ್ತು ವರುಷಗಳಿಂದ ಸಿಸಿಬಿಯಲ್ಲಿ ಬೀಡು ಬಿಟ್ಟಿದ್ದು ಅವರನ್ನು ಅವರವರ ಠಾಣೆಗೆ ಕಳುಹಿಸಬೇಕಾಗಿದೆ. ಸಿಸಿಬಿಯಲ್ಲಿದ್ದ ಒಂದಿಬ್ಬರು ಪ್ರಾಮಾಣಿಕ ASI ಗಳು ಸೇರಿ ಐದು ಮಂದಿ ಇತ್ತೀಚಿಗೆ ವಗಾ೯ವಣೆ ಗೊಂಡಿದ್ದಾರೆ. ಸಿಸಿಬಿಯಲ್ಲಿ ಈಗಾಗಲೇ 25 ಕ್ಕೂ ಅಧಿಕ ಮಂದಿ ವೇಸ್ಚ್ ಬಾಡಿಗಳಾಗಿ ವಿಜೃಂಭಿಸುತ್ತಿದ್ದಾರೆ.

 

ಕೆಲವು ವಸೂಲಿ ವೀರರನ್ನು ವಗಾ೯ವಣೆ ಗೊಳಿಸಬೇಕು. ಇದೀಗ ಸಿಸಿಬಿಯಲ್ಲಿ ನಾಲ್ಕು ಮಂದಿ ದಕ್ಷ ಅಧಿಕಾರಿ ಹಾಗೂ ಒಂದಿಬ್ಬರು ಪ್ರಾಮಾಣಿಕ ಸಿಬ್ಬಂದಿಗಳನ್ನು ಉಳಿಸಿಕೊಳ್ಳಬೇಕು ಎನ್ನುವ ಅಗ್ರಹ ನಾಗರಿಕರಿಂದ ಕೇಳಿ ಬಂದಿದೆ.ಲಭ್ಯ ಮಾಹಿತಿಗಳ ಪ್ರಕಾರ ಸಿಸಿಬಿಯನ್ನು ವಿಸಜಿ೯ಸಿ ಪುನರ್ ರಚಿಸಲು ಕಮೀಷನರ್ ಸುಧೀರ್ ರೆಡ್ಡಿ ನಿರ್ಧರಿಸಿದಂತಿದೆ. ಅಲ್ಲದೆ ಒಬ್ಬರು ACP ನಾಲ್ಕು ಮಂದಿ ಇನ್ಸ್ ಪೆಕ್ಟರ್ ಗಳನ್ನು ಮಂಗಳೂರು ನಗರದಿಂದ ಎತ್ತಂಗಡಿ ಗೊಳಿಸಲು ಯತ್ನಿಸಲಾಗುತ್ತಿದೆ. ಇದು ನಿಜವೇ ಆದಲ್ಲಿ ಮಂಗಳೂರು ಪೋಲಿಸ್ ಕಮಿಷನರೇಟ್ಸ್ ವ್ಯಾಪ್ತಿಯ ಮಯಾ೯ದಸ್ಥ ಜನಗಳ ಮಾನ ಹಾಗೂ ಪೋಲಿಸ್ ಇಲಾಖೆಯ ಮಯಾ೯ದೆ ಎರಡು ಉಳಿಯಲಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement