Published
6 months agoon
By
Akkare News
ಪ್ರಾಮಾಣಿಕತೆಗೆ, ದಕ್ಷತೆಗೆ, ಧೀರತೆಗೆ ಹೆಸರುವಾಸಿಯಾಗಿರುವ ಪೋಲಿಸ್ ಕಮೀಷನರ್ ಶ್ರೀ ಸುಧೀರ್ ರೆಡ್ಡಿ ಯವರು ಮಂಗಳೂರಿನ ಸಿಟಿ ಕ್ರೈಮ್ ಬ್ರಾಂಚ್ (ಸಿಸಿಬಿ) ಘಟಕವನ್ನು ತಕ್ಷಣ ವಿಸಜಿ೯ಸಿ ನಿಷ್ಠಾವಂತ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳ ತಂಡದೊಂದಿಗೆ ಪುನರ್ ರಚಿಸಿ ಪುಣ್ಯ ಕಟ್ಟಿ ಕೊಳ್ಳಬೇಕು ಎಂಬ ಅಗ್ರಹಗಳು ಸಾರ್ವಜನಿಕರಿಂದ ಕೇಳಿ ಬಂದಿದೆ.
ರಾಜಿ ಪಂಚಾತಿಗೆ, ಹಪ್ತಾ ವಸೂಲಿ, ಅಕ್ರಮ ಚಟುವಟಿಕೆ ಗಳ ಖದೀಮರೊಂದಿಗೆ ದೋಸ್ತಿ ಹೀಗೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಗುಂಪೊಂದು ಸಿಸಿಬಿಯಲ್ಲಿದೆ ಎಂದು ಹೇಳಲಾಗಿದೆ. ಬೆರಣಿಕೆಯ ನಾಲ್ವರು ಅಧಿಕಾರಿಗಳು ಹಾಗೂ ಒಂದಿಬ್ಬರು ಸಿಬ್ಬಂದಿಗಳನ್ನು ಹೊರತು ಪಡಿಸಿ ಕೆಲವು HC ಗಳು ಹಾಗೂ ASI ಗಳು ಹತ್ತತ್ತು ವರುಷಗಳಿಂದ ಸಿಸಿಬಿಯಲ್ಲಿ ಬೀಡು ಬಿಟ್ಟಿದ್ದು ಅವರನ್ನು ಅವರವರ ಠಾಣೆಗೆ ಕಳುಹಿಸಬೇಕಾಗಿದೆ. ಸಿಸಿಬಿಯಲ್ಲಿದ್ದ ಒಂದಿಬ್ಬರು ಪ್ರಾಮಾಣಿಕ ASI ಗಳು ಸೇರಿ ಐದು ಮಂದಿ ಇತ್ತೀಚಿಗೆ ವಗಾ೯ವಣೆ ಗೊಂಡಿದ್ದಾರೆ. ಸಿಸಿಬಿಯಲ್ಲಿ ಈಗಾಗಲೇ 25 ಕ್ಕೂ ಅಧಿಕ ಮಂದಿ ವೇಸ್ಚ್ ಬಾಡಿಗಳಾಗಿ ವಿಜೃಂಭಿಸುತ್ತಿದ್ದಾರೆ.
ಕೆಲವು ವಸೂಲಿ ವೀರರನ್ನು ವಗಾ೯ವಣೆ ಗೊಳಿಸಬೇಕು. ಇದೀಗ ಸಿಸಿಬಿಯಲ್ಲಿ ನಾಲ್ಕು ಮಂದಿ ದಕ್ಷ ಅಧಿಕಾರಿ ಹಾಗೂ ಒಂದಿಬ್ಬರು ಪ್ರಾಮಾಣಿಕ ಸಿಬ್ಬಂದಿಗಳನ್ನು ಉಳಿಸಿಕೊಳ್ಳಬೇಕು ಎನ್ನುವ ಅಗ್ರಹ ನಾಗರಿಕರಿಂದ ಕೇಳಿ ಬಂದಿದೆ.ಲಭ್ಯ ಮಾಹಿತಿಗಳ ಪ್ರಕಾರ ಸಿಸಿಬಿಯನ್ನು ವಿಸಜಿ೯ಸಿ ಪುನರ್ ರಚಿಸಲು ಕಮೀಷನರ್ ಸುಧೀರ್ ರೆಡ್ಡಿ ನಿರ್ಧರಿಸಿದಂತಿದೆ. ಅಲ್ಲದೆ ಒಬ್ಬರು ACP ನಾಲ್ಕು ಮಂದಿ ಇನ್ಸ್ ಪೆಕ್ಟರ್ ಗಳನ್ನು ಮಂಗಳೂರು ನಗರದಿಂದ ಎತ್ತಂಗಡಿ ಗೊಳಿಸಲು ಯತ್ನಿಸಲಾಗುತ್ತಿದೆ. ಇದು ನಿಜವೇ ಆದಲ್ಲಿ ಮಂಗಳೂರು ಪೋಲಿಸ್ ಕಮಿಷನರೇಟ್ಸ್ ವ್ಯಾಪ್ತಿಯ ಮಯಾ೯ದಸ್ಥ ಜನಗಳ ಮಾನ ಹಾಗೂ ಪೋಲಿಸ್ ಇಲಾಖೆಯ ಮಯಾ೯ದೆ ಎರಡು ಉಳಿಯಲಿದೆ.