Connect with us

ರಾಜಕೀಯ

ವೇದಿಕೆಯಲ್ಲಿ ಧರ್ಮಾಧಿಕಾರಿ ಪರ ವೇದಿಕೆಯಿಂದ ಇಳಿದಾಗ ವಿರುದ್ದ – ಬಿಜೆಪಿಯವರು ಎರಡು ದೋಣಿ ಮೇಲೆ ಕಾಲಿಟ್ಟಿದ್ದಾರೆ

Published

on

ಮಂಗಳೂರು ಸೆಪ್ಟೆಂಬರ್ 24: ಧರ್ಮಸ್ಥಳ ಪ್ರಕರಣ ಆರ್ ಎಸ್ಎಸ್ ವರ್ಸಸ್ ಆರ್ ಎಸ್ಎಸ್, ಬಿಜೆಪಿಯವರು ವೇದಿಕೆಯ ಮೇಲೆ ಧರ್ಮಾಧಿಕಾರಿ ಪರ ಇದ್ದರೆ ವೇದಿಕೆಯಿಂದ ಇಳಿದ ಮೇಲೆ ಅವರ ವಿರುದ್ದಇದ್ದಾರೆ ಎಂದು ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು ಧರ್ಮಸ್ಥಳ ಪ್ರಕರಣವನ್ನು ತನಿಖೆ ಮಾಡಲು ಎಸ್‌ಐಟಿ ಮಾಡಿದ್ದು ನಾವೇ ಅಲ್ಲವೇ. ಹಿಂದಿನ ಸರಕಾರ ಇತ್ತಲ್ಲ ಅವರು ಯಾಕೆ ಮಾಡಿಲ್ಲ. ಬಿಜೆಪಿಯವರು ಧರ್ಮಸ್ಥಳ ಚಲೋ ಮಾಡಿದ್ದು ಧರ್ಮಾಧಿಕಾರಿಯವರ ಪರವಾಗಿ, ವೇದಿಕೆ ಹತ್ತಿ ಧರ್ಮಾಧಿಕಾರಿ ಪರ ಮಾತನಾಡಿದ್ದರು, ಬಳಿಕ ಸೌಜನ್ಯ ಮನೆಗೆ ಹೋಗಿದ್ದಾರೆ. ಇಡೀ ಪ್ರಕರಣ ಆರ್ ಎಸ್ಎಸ್ ವರ್ಸಸ್ ಆರ್ ಎಸ್ ಎಸ್ ಆಗಿದ್ದು, ಬಿಜೆಪಿಗೆ ಯಾರ ಪರ ಇರಬೇಕು ಎಂದು ಗೊತ್ತಾಗದೇ ಎರಡು ದೋಣಿಗಳ ಮೇಲೆ ಹೋಗುತ್ತಿದ್ದಾರೆ.

ಯಾರನ್ನಾದರೂ ಗಡಿಪಾರು ಮಾಡಬೇಕೆಂದರೆ ಸರಕಾರದ ಮನಸ್ಸಿಗೆ ಬಂದಂತೆ ಮಾಡಲು ಆಗುವುದಿಲ್ಲ. ಕೆಲವೊಂದು ಮಾನದಂಡಗಳಿರುತ್ತವೆ. ಕೋರ್ಟ್‌ಗೆ ಹೋಗಿ, ಅಲ್ಲಿಯೂ ಚರ್ಚೆ ಆಗಿ ಮಾಡಲಾಗುತ್ತದೆ. ಕಾರಣವಿಲ್ಲದೆ ಮಾಡಲು ಆಗುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದರು



Continue Reading
Click to comment

Leave a Reply

Your email address will not be published. Required fields are marked *

Advertisement