Published
10 months agoon
By
Akkare News
ಮಂಗಳೂರು ಸೆಪ್ಟೆಂಬರ್ 24: ಧರ್ಮಸ್ಥಳ ಪ್ರಕರಣ ಆರ್ ಎಸ್ಎಸ್ ವರ್ಸಸ್ ಆರ್ ಎಸ್ಎಸ್, ಬಿಜೆಪಿಯವರು ವೇದಿಕೆಯ ಮೇಲೆ ಧರ್ಮಾಧಿಕಾರಿ ಪರ ಇದ್ದರೆ ವೇದಿಕೆಯಿಂದ ಇಳಿದ ಮೇಲೆ ಅವರ ವಿರುದ್ದಇದ್ದಾರೆ ಎಂದು ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಯಾರನ್ನಾದರೂ ಗಡಿಪಾರು ಮಾಡಬೇಕೆಂದರೆ ಸರಕಾರದ ಮನಸ್ಸಿಗೆ ಬಂದಂತೆ ಮಾಡಲು ಆಗುವುದಿಲ್ಲ. ಕೆಲವೊಂದು ಮಾನದಂಡಗಳಿರುತ್ತವೆ. ಕೋರ್ಟ್‌ಗೆ ಹೋಗಿ, ಅಲ್ಲಿಯೂ ಚರ್ಚೆ ಆಗಿ ಮಾಡಲಾಗುತ್ತದೆ. ಕಾರಣವಿಲ್ಲದೆ ಮಾಡಲು ಆಗುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದರು