Connect with us

ಸ್ಥಳೀಯ

ಈ ದೀಪಾವಳಿಗೆ ಶ್ರೀ ಮಹಾಲಿಂಗೇಶ್ವರ ದೇವರಿಗೆ ಶುದ್ಧ ಎಳ್ಳೆಣ್ಣೆ ಅಭಿಷೇಕ

Published

on

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಈ ದೀಪಾವಳಿಗೆ ಶುದ ఎళ్ళోణాయంది’ ಶಿವನಿಗೆ ಅಭಿಷೇಕ ನಡೆಯಲಿದೆ. ಮೂಲಕ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ದೈವಜ್ಞರು ಹೇಳಿರುವುದನ್ನು ಕಾರ್ಯಗತಗೊಳಿಸಲು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮುಂದಾಗಿದ್ದಾರೆ.


ಶನಿದೇವರಿಗೆ ಅಭಿಷೇಕ ಇರುವುದು ಎಲ್ಲರಿಗೂ ತಿಳಿದ ವಿಚಾರ. ಹಾಗೆ ಶಿವ ದೇವರಿಗೆ ಅಭಿಷೇಕ ಪುತ್ತೂರು ತ್ರಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ಬಾರಿಗೆ ನಡೆಯಲಿದೆ. ಅಭಿಷೇಕ ಮಾಡಿದ್ದ ಎಳೆಣ್ಣೆಯನ್ನು ಭಕ್ತರು ತಲೆ, ಕೈ, ಕಾಲುಗಳಿಗೆ ಹಚ್ಚುವುದರಿಂದ ಕೀಲು ನೋವು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಅಭಿಷೇಕ ಮಾಡಿದ್ದ ಎಳ್ಳೆಣ್ಣೆ ಭಕ್ತರಿಗೆ ವಿತರಣೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೂರು ವರ್ಷದ ಹಿಂದೆ ದೇವಳದಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆದಿತ್ತು. ಈ ವೇಳೆ ದೈವಜ್ಞರು ಶಿವದೇವರಿಗೆ ಎಳ್ಳೆಣ್ಣೆಯ ಅಭಿಷೇಕ ಮಾಡುವ ಕುರಿತು ಪುಸ್ತಕದಲ್ಲಿ ದಾಖಲಿಸಿದ್ದರು. ಈ ವಿಚಾರ ಈಗಿನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರ ಗಮನಕ್ಕೆ ಬಂದಿತ್ತು. ಹಾಗಾಗಿ ಶಿವದೇವರಿಗೆ ಎಳ್ಳೆಣ್ಣೆ ಅಭಿಷೇಕ ಮಾಡುವ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಈಗಾಗಲೇ ಸಮಿತಿ ಸದಸ್ಯರು ಪೂರ್ವ ಸಿದ್ದತೆ ಮಾಡಿಕೊಂಡಿದ್ದಾರೆ. ಶುದ್ದ ಎಳ್ಳೆಣ್ಣೆ ಸಮರ್ಪಣೆ ಮುಂದಿನ ಸೋಮವಾರದಿಂದ ಆರಂಭಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.


 

Continue Reading
Click to comment

Leave a Reply

Your email address will not be published. Required fields are marked *

Advertisement