Published
5 months agoon
By
Akkare News
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಈ ದೀಪಾವಳಿಗೆ ಶುದ ఎళ్ళోణాయంది’ ಶಿವನಿಗೆ ಅಭಿಷೇಕ ನಡೆಯಲಿದೆ. ಮೂಲಕ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ದೈವಜ್ಞರು ಹೇಳಿರುವುದನ್ನು ಕಾರ್ಯಗತಗೊಳಿಸಲು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮುಂದಾಗಿದ್ದಾರೆ.
ಶನಿದೇವರಿಗೆ ಅಭಿಷೇಕ ಇರುವುದು ಎಲ್ಲರಿಗೂ ತಿಳಿದ ವಿಚಾರ. ಹಾಗೆ ಶಿವ ದೇವರಿಗೆ ಅಭಿಷೇಕ ಪುತ್ತೂರು ತ್ರಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ಬಾರಿಗೆ ನಡೆಯಲಿದೆ. ಅಭಿಷೇಕ ಮಾಡಿದ್ದ ಎಳೆಣ್ಣೆಯನ್ನು ಭಕ್ತರು ತಲೆ, ಕೈ, ಕಾಲುಗಳಿಗೆ ಹಚ್ಚುವುದರಿಂದ ಕೀಲು ನೋವು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಅಭಿಷೇಕ ಮಾಡಿದ್ದ ಎಳ್ಳೆಣ್ಣೆ ಭಕ್ತರಿಗೆ ವಿತರಣೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.