Connect with us

ಇತರ

ಮಾ”7″ ರಂದು ಪುತ್ತೂರಿನ ದರ್ಬೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ “ದಿ.ಮೈಂಡ್ ಬಾಡಿ ಸ್ಪೇಸ್ ಫಿಸಿಯೋ ಥೇರಪಿ ಕ್ಲಿನಿಕ್ “ಉದ್ಘಾಟನೆ

Published

on

ಪುತ್ತೂರಿನ ದರ್ಬೆಯ ಮುಖ್ಯರಸ್ತೆಯಲ್ಲಿರುವ ಪ್ರೀತಿ ಆರ್ಕೇಡ್‌ನ 2ನೇ ಮಹಡಿಯಲ್ಲಿ ನೂತನವಾಗಿ ಆರಂಭಗೊಳ್ಳುತ್ತಿರುವ ‘ದಿ ಮೈಂಡ್ ಬಾಡಿ ಸ್ಪೇಸ್ʼ ಫಿಸಿಯೋಥೆರಪಿ ಕ್ಲಿನಿಕ್  ಮಾರ್ಚ್ 7ರಂದು (ಶನಿವಾರ) ಬೆಳಿಗ್ಗೆ 11:30ಕ್ಕೆ ಶುಭಾರಂಭಗೊಳ್ಳಲಿದೆ.

ಈ ಉದ್ಘಾಟನಾ ಸಮಾರಂಭದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಕ್ಲಿನಿಕ್ ಅನ್ನು ಉದ್ಘಾಟಿಸಲಿದ್ದಾರೆ.

ಈ ನೂತನ ಕ್ಲಿನಿಕ್ ಅನ್ನು ‘ಸರ್ಟಿಫೈಡ್ ಅಕ್ವಾಟಿಕ್ ಥೆರಪಿಸ್ಟ್’ (Certified Aquatic Therapist) ಹಾಗೂ ನುರಿತ ಫಿಸಿಯೋಥೆರಪಿಸ್ಟ್ ಆಗಿರುವ ಡಾ. ಪ್ರಿಯಾಂಕಾ ಎನ್. ಶೆಟ್ಟಿ (B.P.T, M.P.T, MIAP) ಅವರು ಮುನ್ನಡೆಸಲಿದ್ದಾರೆ. ಇಲ್ಲಿ ಪರಿಣಾಮಕಾರಿ ಹಾಗೂ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸೆಗಳು ಸಾರ್ವಜನಿಕರಿಗೆ ಲಭ್ಯವಾಗಲಿದೆ.

ಈ ಶುಭ ಸಮಾರಂಭಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕ್ಲಿನಿಕ್‌ನ ಪ್ರವರ್ತಕರಾದ ನಿಹಾಲ್ ಪಿ. ಶೆಟ್ಟಿ ಮತ್ತು ಶ್ರೀಮತಿ ನಳಿನಿ ಪಿ. ಶೆಟ್ಟಿ ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement