Connect with us

ಕಾರ್ಯಕ್ರಮಗಳು

ಸಾಂದೀಪನಿಯಲ್ಲಿಪೋಷಕರಸಭೆ ಮತ್ತು “ರಜತ ಪಲ್ಲವ” ಉದ್ಘಾಟನಾ ಸಮಾರಂಭ ಪೋಷಕರು ಜಂಟಿಯಾಗಿ ಮಕ್ಕಳ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸುವುದು

Published

on

​ಪುತ್ತೂರು: ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಶ್ರೀ ಗೋಪಾಲಕೃಷ್ಣ ಮಂದಿರ ವೇದಿಕೆಯಲ್ಲಿ ದಿನಾಂಕ 14/6/26 ರಂದು ಪೋಷಕರ ಸಭೆ ಹಾಗೂ ರಜತ ಪಲ್ಲವ -ವ್ಯಕ್ತಿತ್ವ ವಿಕಸನ ಇದರ ಉದ್ಘಾಟನಾ ಸಮಾರಂಭವು ನಡೆಯಿತು.

 

​ ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಯರಾಮ ಕೆದಿಲಾಯ ಶಿಬಿರ,ಮುಖ್ಯ ಅತಿಥಿಯಾದ ಡಾ l ಮೋನಾ ಜಾಕ್ವೆಲಿನ್ ಮೆಂಡೋನ್ಸಾ ,ಮಂಗಳೂರು ಸೈoಟ್ ಅಲೋಷಿಯಸ್ (ಡೀಮ್ ಟು ಬಿ ಯೂನಿವರ್ಸಿಟಿ )ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು,ಶಾಲಾ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ಪ್ರಸಾದ್ ಕೆದಿಲಾಯ,ಶಾಲಾ ಕೋಶಾಧಿಕಾರಿಗಳಾದ ಶ್ರೀ ಹರೀಶ್ ಪುತ್ತೂರಾಯ,ಶ್ರೀ ಪ್ರಸನ್ನ ಎನ್ ಭಟ್ ಶಾಲಾ ಉಪಾಧ್ಯಕ್ಷರುಶ್ರೀ ಸುಬ್ರಾಯ ಬಿ ಎಸ್ ಜೊತೆ ಕಾರ್ಯದರ್ಶಿ,ನೂತನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದಶ್ರೀ ಸುರೇಶ್ ಪ್ರಭು ಎಸ್,ಶಾಲಾ ಸದಸ್ಯರಾದ ಶ್ರೀ ವೆಂಕಟಕೃಷ್ಣ ಕೆ ಕೆ ಹಾಗೂ ಡಾ l ಶಿವಾನಂದ ಎಚ್ಮುಖ್ಯೋಪಾಧ್ಯಾಯರಾದ ಶ್ರೀ ಪ್ರಸನ್ನ ಕೆ.ಪೋಷಕರು ಹಾಗೂ ಶಿಕ್ಷಕ – ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು.

​ ಶಾಲಾ ಮುಖ್ಯೋಪಾಧ್ಯಾಯರು ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಯ ಕಿರುನೋಟ ಹಾಗೂ ಶಿಕ್ಷಕರನ್ನು ಪೋಷಕ ವೃಂದದವರಿಗೆ ಪರಿಚಯಿಸಿದರು. ಶಾಲಾ ಕೋಶಾಧಿಕಾರಿಗಳಾದ ಶ್ರೀ ಹರೀಶ್ ಪುತ್ತೂರಾಯರು ಮಾತನಾಡಿ ವ್ಯಕ್ತಿತ್ವ ವಿಕಸನ ಕಾರ್ಯಾಗಾರವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಬೇಕು ಎನ್ನುವುದು ಈ ‘ ರಜತ ಪಲ್ಲವ ‘ ದ ಉದ್ದೇಶ ವಾಗಿದೆ. ಶೈಕ್ಷಣಿಕ ಮತ್ತು ಶಿಕ್ಷಣದ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ಗಮನಿಸಿ ರೂಪುಗೊಂಡ 25ನೇ ವರ್ಷದ ಯೋಜನೆ. ಮಕ್ಕಳಿಗೆ ಭವಿಷ್ಯತ್ತಿನ ಕಲ್ಪನೆ ಬರುವ ಉದ್ದೇಶ ಹಾಗೂ ಭವಿಷ್ಯತ್ತನ್ನು ಹೇಗೆ ರೂಪಿಸಿಕೊಳ್ಳಬಹುದು ಎನ್ನುವ ಉದ್ದೇಶದಿಂದ ಗ್ರಾಮೀಣ ಮಟ್ಟದ ಮಕ್ಕಳಿಗೆ ಮಿತ ದರದಲ್ಲಿ ಶಿಕ್ಷಣ ಲಭಿಸಲು ಶಿಕ್ಷಕರಿಗೆ ಹಾಗೂ 8,9,10ನೇ ತರಗತಿಯ ಮಕ್ಕಳಿಗೆ ಸರಣಿ ತರಬೇತಿ ಕಾರ್ಯಾಗಾರ ನೀಡಲು ಆಡಳಿತಮಂಡಳಿ ಯವರು ಸೇರಿ ತೀರ್ಮಾನಿಸಿದ ಯೋಜನೆ ಇದಾಗಿದೆ. ನಂತರ ಶಾಲಾ ಅಧ್ಯಕ್ಷರು ಫಲಕ ಅನಾವರಣ ಮಾಡುವ ಮೂಲಕ ಹಾಗೂ ತೆಂಗಿನ ಗಿಡಕ್ಕೆ ನೀರು ಎರೆಯುವ ಮೂಲಕ ‘ ರಜತ ಪಲ್ಲವ ‘ ಎಂಬ ಹೆಸರನ್ನು ಉದ್ಘಾಟನೆ ಮಾಡಲಾಯಿತು. ನಂತರ ಸಹ ಶಿಕ್ಷಕಿಯಾದ ಶ್ರೀಮತಿ ಮಹಾಲಕ್ಷ್ಮಿ ಯವರು ಮುಖ್ಯ ಅತಿಥಿಯ ಕಿರುಪರಿಚಯ ನೀಡಿದರು. ಮುಖ್ಯ ಅತಿಥಿಯಾದ ಡಾ l ಮೋನಾ ಜಾಕ್ವೆಲಿನ್ ಮೆಂಡೋನ್ಸಾರವರು ಮಾತನಾಡಿ ಇಂದಿನ ಡಿಜಿಟಲ್ ಜಗತ್ತಿನಲ್ಲಿ ಪೋಷಕರ ಸವಾಲುಗಳು ಏನು ಎಂಬುದು ಮುಖ್ಯವಾದುದು. ಈಗಿನ ಪರಿಸ್ಥಿತಿಯಲ್ಲಿ ಒಬ್ಬ ಮಗು ಮಾನಸಿಕವಾಗಿ, ದೈಹಿಕವಾಗಿ ಶಾಲೆಯಲ್ಲಿ ಹೆಚ್ಚಿನ ಅವಧಿ ಕಳೆಯುತ್ತದೆ . ಪುತ್ತೂರಿನ ಪರಿಸರದಲ್ಲಿ ಒಳ್ಳೆಯ ಶಾಲೆ ಈ ಸಾಂದೀಪನಿ. 25ನೇ ವರ್ಷದಲ್ಲಿ ಈ ಶಾಲೆ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಂತಹ ಉತ್ತಮ ಯೋಜನೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪೋಷಕರಾದವರು ಯಾವಾಗಲು ಮಕ್ಕಳ ಬಗ್ಗೆ ಗಮನ ಕೊಡಬೇಕು. ಕಾಲಮಾನಕ್ಕೆ ಅನುಗುಣವಾಗಿ ಮಕ್ಕಳ ಬಗ್ಗೆ ಪೋಷಕರ ಯೋಚನಾ ಕ್ರಮ ಬದಲಾಗಬೇಕು. ಶಾಲೆಗೆ ಬಂದು ಮಕ್ಕಳ ಆಸಕ್ತಿ, ವರ್ತನೆಯನ್ನು ಶಿಕ್ಷಕರಿಂದ ತಿಳಿದುಕೊಂಡಾಗ ಮಕ್ಕಳಿಗೆ ಅವರ ಚಟುವಟಿಕೆಯ ಬಗ್ಗೆ ಪೋಷಕರಿಗೆ ಖಾತ್ರಿ ಇದೆ ಎಂದು ಇರುತ್ತದೆ. ಮಕ್ಕಳಿಗೆ ಮನೆಯಲ್ಲಿ ಒಳ್ಳೆಯ ವಾತಾವರಣದ ಅವಕಾಶವನ್ನು ಕಲ್ಪಿಸಿಕೊಡುವುದು ಪೋಷಕರ ಜವಾಬ್ದಾರಿ. ಮಗು ಮನೆಯಲ್ಲಿ ಪೋಷಕರನ್ನು ನೋಡಿ ಕಲಿಯುವಾಗ ಶಿಕ್ಷಕರ ಹಾಗೂ ಶಾಲೆಯ ಬಗ್ಗೆ ಪಾಸಿಟಿವ್ ಆಗಿ ಮಾತನಾಡುವುದು. ಮಕ್ಕಳ ಮನೋಭಾವನೆ ಬದಲಾಗುದನ್ನು ಗಮನಿಸುವುದು. ಪೌಷ್ಟಿಕ ಆಹಾರವನ್ನು ನೀಡುವುದು. ಹಾಗೂ ಪೋಷಕರು ಜಂಟಿಯಾಗಿ ಮಕ್ಕಳ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸುವುದು ಎಂದು ಮನಮುಟ್ಟುವ ರೀತಿಯಲ್ಲಿ ತಿಳಿಸಿದರು.
ಶಾಲಾ ಉಪಾಧ್ಯಕ್ಷರಾದ ಪ್ರಸನ್ನ ಎನ್ ಭಟ್ ರವರು ಮಾತನಾಡಿ ಬೆಳ್ಳಿ ಹಬ್ಬದ ಸಂಭ್ರಮ ದಲ್ಲಿ ನಾವಿದ್ದೇವೆ. ಅಂತರ್ಜಾಲ ಯುಗದ ಮಕ್ಕಳು ಚಂಚಲ ಮನಸ್ಥಿತಿ ಯವರಾಗಿದ್ದು ಅವರ ಏಕಾಗ್ರತೆ ಸಮಯ 20 ನಿಮಿಷ ವಾಗಿದ್ದು ಶಿಕ್ಷಕರಿಗೆ ಇದು ಒಂದು ಸವಾಲಾಗಿದ್ದು ಶಿಕ್ಷಕರು ಹೊಸ ಆವೃತಿಗೆ ಹೊಂದಿಕೊಳ್ಳಬೇಕಾಗಿದೆ ಎಂದರು. ಸದಸ್ಯರಾದ ಶ್ರೀ ವೆಂಕಟಕೃಷ್ಣ ಕೆ ಕೆ ರವರು ಮಾತನಾಡಿ ತುಂಬಾ ಅರ್ಥ ಪೂರ್ಣವಾದ ರಜತ ಮಹೋತ್ಸವದ ಯೋಜನೆ ‘ರಜತ ಪಲ್ಲವ’. ಪ್ರಸ್ತುತ 25ನೇ ವರ್ಷದಲ್ಲಿ ಉಚಿತವಾಗಿ ವಿದ್ಯಾರ್ಥಿಗಳಿಗೆ ಒದಗಿಸಲಾಗುವುದು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡಲು ನಾವೆಲ್ಲರೂ ಸೇರಿ ಪ್ರಯತ್ನ ಮಾಡೋಣ ಎಂದರು. ನೂತನ ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಸುರೇಶ್ ಪ್ರಭು ರವರು ಮಾತನಾಡಿ 2026-27 ನೇ ವರುಷದಲ್ಲಿ ರಜತ ಮಹೋತ್ಸವದ ಸಂಭ್ರಮಾಚರಣೆಯಲ್ಲಿದ್ದೇವೆ.ನನ್ನ ತಂದೆಯ ಹೆಸರಿನಲ್ಲಿ 25000 /- ರಜತಮಹೋತ್ಸವಕ್ಕೆ ಧನ ಸಹಾಯವನ್ನು ಮಾಡುತ್ತೇನೆ ಎಂದು ತಿಳಿಸುತ್ತಾ ಶುಭ ಕೋರಿದರು.

 

ಶಾಲಾ ಅಧ್ಯಕ್ಷರಾದ ಜಯರಾಮ ಕೆದಿಲಾಯ ಶಿಬರ ರವರು ಮಾತಾನಾಡಿ ನಿರಂತರವಾಗಿ ಸಾಂದೀಪನಿ ಶಾಲೆ ನೂರಾರು ವರುಷ ಚೈತನ್ಯಯುತವಾಗಿ ಬಾಳಲಿ. ಇಂದಿನ ಮುಖ್ಯ ಅತಿಥಿಗಳು ಪೋಷಕರ ಜವಾಬ್ದಾರಿಗಳನ್ನು ತಾಯಿಯಾಗಿ ನೆರೆದಿದ್ದ ಪೋಷಕರಿಗೆ ಮನಮುಟ್ಟುವಂತೆ ತಿಳಿಸಿದ್ದಾರೆ ಎಂದು ಸಂತೋಷವನ್ನು ವ್ಯಕ್ತ ಪಡಿಸಿ ಅವರನ್ನು ಶ್ಲಾಘಿಸಿದರು. ಶಾಲಾ ಪೋಷಕರಾದ ಶ್ರೀಮತಿ ಹೇಮಾ ಜಯರಾಮ ರೈ ಹಾಗೂ ಡಾ l ನರಸಿಂಹ ಶರ್ಮ ಕಾನಾವು ರವರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸಹ ಶಿಕ್ಷಕರಾದ ಶ್ರೀ ರವಿಶಂಕರ್ ರವರು ಕಾರ್ಯಕ್ರಮ ನಿರೂಪಿಸಿದರು. ಶಾಲಾ ಕಾರ್ಯದರ್ಶಿಗಳಾದ ಶ್ರೀ ಕೃಷ್ಣಪ್ರಸಾದ್ ಕೆದಿಲಾಯ ರವರು ಸ್ವಾಗತಿಸಿದರು. ಸಹ ಶಿಕ್ಷಕಿ ಶ್ರೀಮತಿ ಮಂಜುಳಾ ಎಚ್ ಗೌಡ ರವರು ಪ್ರಾರ್ಥಿಸಿದರು. ಸಹ ಶಿಕ್ಷಕಿ ಶ್ರೀಮತಿ ಪ್ರಮೀಳಾ ರವರು ಧನ್ಯವಾದ ಗೈದರು.

Continue Reading
Click to comment

Leave a Reply

Your email address will not be published. Required fields are marked *

Advertisement